ಭಾರತಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕಿನಿಂದ ಕೊರೋನಾ ಹೋರಾಟಕ್ಕಾಗಿ ೧೫೦ ಕೋಟಿ ಡಾಲರ್ ನೆರವು
ನವದೆಹಲಿ: ಕೋರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಸಲುವಾಗಿ ಭಾರತಕ್ಕೆ ೧.೫ ಬಿಲಿಯನ್ (೧೫೦ ಕೋಟಿ) ಅಮೆರಿಕನ್ ಡಾಲರ್ ನೆರವನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್- ಎಡಿಬಿ) 2020 ಏಪ್ರಿಲ್ 28ರ ಮಂಗಳವಾರ ಮಂಜೂರು ಮಾಡಿತು.
ರೋಗವನ್ನು ಹತೋಟಿಯಲ್ಲಿ ಇಡವುದು ಮತ್ತು ಹರಡದಂತೆ ತಡೆಯುವುದು ಹಾಗೂ ಬಡವರು ಮತ್ತು ಅರ್ಥಿಕವಾಗಿ ದುರ್ಬಲರಾದ ವರ್ಗಗಳಿಗೆ ಸಾಮಾಜಿಕ ರಕ್ಷಣೆ ಒದಗಿಸುವುದೇ ಮುಂತಾದ ತತ್ ಕ್ಷಣದ ಅದ್ಯತೆಗಳಿಗೆ ಬೆಂಬಲವಾಗಿ ಈ ಸಾಲವನ್ನು ಮಂಜೂರು ಮಾಡಿರುವುದಾಗಿ ಬ್ಯಾಂಕ್ ತಿಳಿಸಿದೆ.
ಈ ಅಭೂತಪೂರ್ವ ಸವಾಲನ್ನು ಎದುರಿಸುವಲ್ಲಿ ಭಾರತ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲು ತಾನು ಬದ್ಧವಾಗಿರುವುದಾಗಿ ಎಡಿಬಿ ಅಧ್ಯಕ್ಷ ಮಸತ್ಸುಗು ಅಸಕವಾ ಹೇಳಿದರು.
ಸರ್ಕಾರ ಮತ್ತು ಇತರ ಅಭಿವೃದ್ಧಿ ಪಾಲುದಾರರ ಜೊತೆಗಿನ ನಿಕಟ ಸಮನ್ವಯದೊಂದಿಗೆ ಎಡಿಬಿಯು ವಿಶಾಲ ಪ್ಯಾಕೇಜಿನ ಭಾಗವಾಗಿ ಈ ಹಣವನ್ನು ತುರ್ತಾಗಿ ಬಿಡುಗಡೆ ಮಾಡಲಿದೆ ಎಂದು ಅವರು ನುಡಿದರು.
‘ಕೋವಿಡ್-೧೯ರ ವಿರುದ್ಧ ಭಾರತವು ಹಮ್ಮಿಕೊಂಡಿರುವ ದೃಢ ಕಾರ್ಯಕ್ರಮಗಳನ್ನು ಬೆಂಬಲಿಸಲು ನಾವು ನಿರ್ಧರಿಸಿದ್ದೇವೆ. ಮತ್ತು ಭಾರತದ ಈ ಕಾರ್ಯಕ್ರಮಗಳು ದೇಶದ ಜನತೆಗೆ ವಿಶೇಷವಾಗಿ ಬಡ ಮತ್ತು ಅತ್ಯಂತ ದುರ್ಬಲ ವರ್ಗಗಳಿಗೆ ಪರಿಣಾಮಕಾರಿ ಬೆಂಬಲ ನೀಡುವುದೆಂಬ ಖಚಿತತೆ ನಮಗಿದೆ’ ಎಂದು ಅಸಕವಾ ಹೇಳಿಕೆಯೊಂದರಲ್ಲಿ ತಿಳಿಸಿದರು.
No comments:
Post a Comment