ಗ್ರಾಹಕರ ಸುಖ-ದುಃಖ

My Blog List

Friday, April 17, 2020

ಬ್ಯಾಂಕ್, ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಪುನಶ್ಚೇತನ, ರಿವರ್ಸ್ ರೆಪೋದರ ಇಳಿಸಿದ ಆರ್ ಬಿಐ

ಬ್ಯಾಂಕ್, ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಪುನಶ್ಚೇತನ, 
ರಿವರ್ಸ್ ರೆಪೋದರ ಇಳಿಸಿದ ಆರ್ ಬಿಐ
ನವದೆಹಲಿ: ಕೊರೋನಾವೈರಸ್ ಪರಿಣಾಮವಾಗಿ ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಚ್ಚಿನ ಒತ್ತು ನಿಡುತ್ತಿದ್ದು, ನಿಟ್ಟಿನಲ್ಲಿ ರಿವರ್ಸ್ ರೆಪೋ ದರವನ್ನು ೨೫ ಬೇಸಿಸ್ ಪಾಯಿಂಟಿನಷ್ಟು ಇಳಿಕೆ ಮಾಡಲಾಗಿದೆ, ದರವು ಶೇ.೪ರಿಂದ ಶೇ..೭೫ಕ್ಕೆ ಇಳಿಕೆಯಾಗಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 2020 ಏಪ್ರಿಲ್ 17ರ ಶುಕ್ರವಾರ ಪ್ರಕಟಿಸಿದರು.

ಉತ್ಪಾದನಾ ವಲಯಗಳಿಗೆ ಸಾಲ ನೀಡಲು ಕ್ರಮವು ಬ್ಯಾಂಕುಗಳಿಗೆ ಅನುವು ಕಲ್ಪಿಸುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಾ ಹೇಳಿದರು.

ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಧೈರ್ಯ ತುಂಬುವ ಸಲುವಾಗಿ ದೀರ್ಘಗಾಮೀ ರೆಪೋ ಕಾರ್ಯಾಚರಣೆಗಾಗಿ (ಟಿಎಲ್ಟಿಆರ್) ೫೦ ಸಾವಿರ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ನೆರವು ಘೋಷಿಸುತ್ತಿರುವುದಾಗಿಯೂ ಅವರು ಹೇಳಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ (ನಬಾರ್ಡ್), ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್ ಮತ್ತು ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕಿಗೆ (ಎಸ್ಐಡಿಬಿ-ಸಿಡ್ಬಿ) ಒಟ್ಟು ೫೦,೦೦೦ ಕೋಟಿ ರೂಪಾಯಿಗಳ ನೆರವನ್ನು ಒದಗಿಸಲಾಗುತ್ತಿದೆ ಎಂದೂ ಅರ್ಬಿಐ ಗವರ್ನರ್ ನುಡಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಭಾರತದ ಜಿಡಿಪಿ ಸಹ ಶೇ..೯ಕ್ಕೆ ಕುಸಿದಿದೆ. ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಪುನಶ್ಚೇತನಕ್ಕಾಗಿ ಆರ್ಬಿಐ ಹಲವು ಯೋಜನೆ ರೂಪಿಸುತ್ತಿದೆ. ಕ್ರಮಗಳ ಪರಿಣಾಮವಾಗಿ ೨೦೨೧ -೨೨ರ ಅವಧಿಯಲ್ಲಿ ದೇಶದ ಜಿಡಿಪಿ ಶೇ..೪ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಗವರ್ನರ್ ವಿಶ್ವಾಸ ವ್ಯಕ್ತಪಡಿಸಿದರು.

ಆರ್ಬಿಐ ಗವರ್ನರ್ ಪತ್ರಿಕಾಗೋಷ್ಠಿಯ ಮುಖ್ಯ ಅಂಶಗಳು
* ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಅಗತ್ಯ ಪ್ರಮಾಣದ ದ್ರವ್ಯತೆ (ಲಿಕ್ವಿಡಿಟಿ) ಕಾಪಾಡಲು ಬ್ಯಾಂಕುಗಳು ಸಾಲ ನೀಡುವುದನ್ನು ಉತ್ತೇಜಿಸಲಾಗುತ್ತದೆ. ಇದಕ್ಕಾಗಿ ಸೂಕ್ತ ಕ್ರಮಗಳನ್ನು ರಿಸರ್ವ್ ಬ್ಯಾಂಕ್ ತೆಗೆದುಕೊಳ್ಳುತ್ತದೆ.

*  ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್ ಕಂಪನಿಗಳ ವಹಿವಾಟಿಗೆ ಕೋವಿಡ್-೧೯ರ ಕಾರಣ ಧಕ್ಕೆಯೊದಗಿದೆ. ಅವುಗಳಿಗೆ ದೀರ್ಘಾವಧಿ ಸಾಲ ಒದಗಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಗಮನ ನೀಡಲಿದೆ.

* ವಿಶೇಷ ಮರು ಅನುದಾನ ಯೋಜನೆಯಡಿ ರಾಷ್ಟ್ರೀಯ ಗೃಹ ನಿರ್ಮಾಣ ಮಂಡಳಿಗೆ (ಎನ್ಎಚ್ ಬಿ) ೧೦,೦೦೦ ಕೋಟಿ ರೂಪಾಯಿ ಒದಗಿಸಲಾಗುವುದು.

* ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿ), ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕುಗಳಿಗೆ (ಎನ್ ಎಚ್ ಬಿ) ವಿಶೇಷ ಮರು ಬಂಡವಾಳ ಪೂರೈಕೆಗಾಗಿ ೫೦ ಸಾವಿರ ಕೋಟಿ ರೂಪಾಯಿ ಒದಗಿಸಲು ನಿರ್ಧರಿಸಲಾಗಿದೆ.

* ಉತ್ಪಾದಕ ಕ್ಷೇತ್ರಗಳಿಗೆ ನಗದು ಪೂರೈಕೆ ಸುಗಮಗೊಳಿಸಲು ಆರ್ಬಿಐ ರಿವರ್ಸ್ ರೆಪೊದರವನ್ನು ಕಡಿಮೆ ಮಾಡಿದೆ.

ತತ್ ಕ್ಷಣದಿಂದ ಜಾರಿಗೆ ಬರುವಂತೆ ಫಿಕ್ಸ್ಡ್ ರಿವರ್ಸ್ ರೆಪೊ ಅನುಪಾತವನ್ನು ದ್ರವ್ಯತೆ (ಲಿಕ್ವಿಡಿಟಿ) ಹೊಂದಾಣಿಕೆ ಸವಲತ್ತಿ ಅಡಿಯಲ್ಲಿ (ಲಿಕ್ವಿಡಿಟಿ ಅಡ್ಜಸ್ಟ್ಮೆಂಟ್ ಫೆಸಿಲಿಟಿ - ಎಸ್ಎಎಫ್) ೨೫ ಮೂಲ ಅಂಶಗಳಷ್ಟು ಕಡಿತಗೊಳಿಸಲಾಗಿದೆ. ಪ್ರಸ್ತುತ ಶೇ ೪ರಷ್ಟಿರುವ ಎಲ್ಎಎಫ್ ಶೇ .೨೭ಕ್ಕೆ ಇಳಿಯಲಿದೆ.

* ೯೦ ದಿನಗಳಲ್ಲಿ ಸಾಲ ಮರುಪಾವತಿ ಮಾಡದವರಿಗೆ ಆರ್ಬಿಐ ವಿನಾಯ್ತಿಯಡಿ ರಿಯಾಯ್ತಿ ಸಿಗುತ್ತದೆ. ಅವರ ಸಾಲವನ್ನು ಮರುಪಾವತಿಯಾಗದ ಸಾಲ (ಎನ್ಪಿಎ) ಎಂಬುದಾಗಿ ಪರಿಗಣಿಸುವುದಿಲ್ಲ ಮತ್ತು ಅವರ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದಿಲ್ಲ.

* ಮಾರ್ಚ್ ೨೭ರ ನಂತರ ವಿಶ್ವ ಆರ್ಥಿಕತೆ ಹಾಳಾಗಿದೆ. ಸಂಕಷ್ಟ ಸಂದರ್ಭದಲ್ಲಿ ಕೆಲಸವೇ ದೇಶಗಳು ಧನಾತ್ಮಕ  ಪ್ರಗತಿ ದರ ಕಾಯ್ದುಕೊಂಡಿವೆ. ಅವುಗಳಲ್ಲಿ ಭಾರತವೂ ಒಂದು.

* ಭಾರತದ ವಿದೇಶಿ ವಿನಿಮಯ ಮೀಸಲು ೧೧. ತಿಂಗಳ ಆಮದು ನಿರ್ವಹಣೆಗೆ ಸಾಕಾಗುವಷ್ಟಿದೆ. ೪೭೬. ಶತಕೋಟಿ ಡಾಲರುಗಳಷ್ಟು ಮೀಸಲು ನಿಧಿಯ ಸಂಗ್ರಹ ನಮ್ಮಲ್ಲಿದೆ.

* ವಿಶ್ವ ಹಣಕಾಸು ನಿಧಿ (ಐಎಂಎಫ್) ರೂಪಿಸಿರುವ ನಿಯಮಾವಳಿಗಳ ಅನ್ವಯ, ಭಾರತದ ಅಭಿವೃದ್ಧಿದರವು ಜಿ೨೦ ದೇಶಗಳಲ್ಲಿಯೇ ಅತಿಹೆಚ್ಚು ಎಂದು ಅಂದಾಜು ಮಾಡಲಾಗಿದೆ.

* ಭಾರತವು ೨೦೨೨ರ ಹಣಕಾಸು ವರ್ಷದಲ್ಲಿ ಅತಿ ವೇಗದ ಪ್ರಗತಿ ದಾಖಲಿಸುವ ನಿರೀಕ್ಷೆಯಿದೆ.

* ಏಪ್ರಿಲ್ ೧೪ರಂದು ಐಎಂಎಫ್ ಜಾಗತಿಕ ಅಭಿವೃದ್ಧಿ ನಿರೀಕ್ಷೆಗಳನ್ನು ಪ್ರಕಟಿಸಿತು. ೨೦೨೦ರಲ್ಲಿ ಜಾಗತಿಕ ಆರ್ಥಿಕತೆಯು ಅತ್ಯಂತ ಕೆಟ್ಟ ರೀತಿಯಲ್ಲಿ ಹಿಂಜರಿತ ಅನುಭವಿಸುತ್ತದೆ ಎಂದು ಅದು ಹೇಳಿದೆ. ಇದು ೧೯೩೦ರ ಮಹಾ ಆರ್ಥಿಕ ಕುಸಿತ (ಗ್ರೇಟ್ ಡಿಪ್ರೆಷನ್) ನಂತರದ ಅತ್ಯಂತ ಕೆಟ್ಟ ಹಿಂಜರಿತವಾಗಲಿದೆ ಎಂದು ಐಎಂಎಫ್ ಹೇಳಿದೆ.

* ಮಾರ್ಚ್ ೨೭ರ ನಂತರ ಸ್ಥೂಲ ಆರ್ಥಿಕತೆ ಮತ್ತು ಹಣಕಾಸು ವಿದ್ಯಮಾನಗಳು ಹಾಳಾಗಿದ್ದು, ಕೆಲ ಸ್ಥಳಗಳಲ್ಲಿ ಇದರ ತೀವ್ರತೆ ಹೆಚ್ಚಾಗಿ ಕಾಣಿಸಿದೆ, ಕೆಲವೆಡೆ ಪ್ರಭಾವ ಕಡಿಮೆಯಿದೆ.

* ಮಾರ್ಚ್ ತಿಂಗಳಲ್ಲಿ ಗ್ರಾಹಕ ಉತ್ಪನ್ನಗಳ ದರ ಆಧರಿಸಿದ ಹಣದುಬ್ಬರವು (ಸಿಪಿಐ) ಶೇ . ಇತ್ತು. ಆಹಾರದ ಹಣದುಬ್ಬರದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ದತ್ತಾಂಶಗಳು ಹೇಳಿವೆ. ಆದರೆ ಇತರ ವಿಭಾಗಗಳಲ್ಲಿ ಬೆಲೆಗಳ ಒತ್ತಡ ಹಾಗೆಯೇ ಇದೆ. ಆಹಾರದ ಬೆಲೆಗಳು ಏಪ್ರಿಲ್ ತಿಂಗಳಲ್ಲಿ ಶೇ .೩ರಷ್ಟು ಹೆಚ್ಚಾಗಿದೆ. ಈರುಳ್ಳಿ ಮತ್ತು ಅಡುಗೆ ಅನಿಲ (ಎಲ್ಪಿಜಿ) ಬೆಲೆ ಕಡಿಮೆಯಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿಡಲು ಇದು ಸಹಕಾರಿ.

No comments:

Advertisement