Tuesday, April 28, 2020

ಐಟಿ ವೃತ್ತಿಪರರಿಗೆ ಜುಲೈ ೩೧ರವರೆಗೆ ಮನೆಯಿಂದಲೇ ಕೆಲಸ

ಕೋವಿಡ್ ಚೇತರಿಕೆ ಪ್ರಮಾಣ ಶೇ. ೨೩.೩ಕ್ಕೆ ಏರಿಕೆ
ಐಟಿ ವೃತ್ತಿಪರರಿಗೆ ಜುಲೈ ೩೧ರವರೆಗೆ ಮನೆಯಿಂದಲೇ ಕೆಲಸ
ನವದೆಹಲಿ: ಕೊರೊನಾವೈರಸ್ ಬಿಕ್ಕಿಟ್ಟಿನ ಮಧ್ಯೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆ ಹೊಂದುತ್ತಿರುವ ಪ್ರಮಾಣವು ಶೇಕಡಾ ೨೩.೩ಕ್ಕೆ ಏರಿಕೆಯಾಗಿರುವ ಸಮಾಧಾನಕರ ಸುದ್ದಿ ಬಂದಿದೆ. ಇದೇ ವೇಳೆಗೆ ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಐಟಿ ವೃತ್ತಿಪರರಿಗೆ ಜುಲೈ ೩೧ರವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ 2020 ಏಪ್ರಿಲ್ 28ರ ಮಂಗಳವಾರ ಅನುಮತಿ ನೀಡಿತು.
ದೇಶದಲ್ಲಿ ಈವರೆಗೆ ಇದುವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ ,೦೨೭ಕ್ಕೆ ಏರಿದೆ. ಸೋಮವಾರದ ವರೆಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾಗುವವರ ಸರಾಸರಿಯು ಶೇಕಡಾ ೨೨.೧೭ರಷ್ಟಿತ್ತು. ಮಂಗಳವಾg ವೇಳೆಗೆ ಪ್ರಮಾಣದಲ್ಲಿ ಮತ್ತಷ್ಟು ಸುಧಾರಣೆ ಕಂಡಿದ್ದು, ಶೇಕಡಾ ೨೩.೩ಕ್ಕೆ ತಲುಪಿದೆ. ೨೪ ಗಂಟೆಗಳಲ್ಲಿ ೬೮೪ ಮಂದಿ ಗುಣಮುಖರಾಗಿದ್ದಾರೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿತು.
ಮಧ್ಯೆ ಹೊಸತಾಗಿ ೧೫೯೪ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೩೦,೦೦೦ದ ಸಮೀಪಕ್ಕೆ ಬಂದಿದೆ. ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೨೯,೯೭೪ಕ್ಕೆ ಏರಿಕೆಯಾಯಿತು.
ಕಳೆದ ೨೪ ಗಂಟೆಗಲ್ಲಿ ೫೧ ಮಂದಿಯ ಸಾವಿನೊಂದಿಗೆ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ೯೩೭ಕ್ಕೆ ಏರಿದೆ. ೨೯,೯೭೪ ಕೊರೋನಾಸೋಂಕು ಪ್ರಕರಣಗಳಲ್ಲಿ ,೦೨೭ ರೋಗಿಗಳು ಗುಣಮುಖರಾಗಿದ್ದು ೨೨,೦೧೦ ಸೋಂಕಿನ ಸಕ್ರಿಯ ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ತಿಳಿಸಿದರು.

ಕಳೆದ ೨೮ ದಿನಗಳಲ್ಲಿ ೧೭ ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಎಂದೂ ಲವ ಅಗರವಾಲ್ ನುಡಿದರು.

ಮಧ್ಯೆ ಕೋವಿಡ್-೧೯ ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಜುಲೈ ೩೧ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಎಲ್ಲ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ತಿಳಿಸಿದರು.

ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತ ಸಚಿವರು ವಿವಿಧ ರಾಜ್ಯಗಳಿಂದ ಮಾಹಿತಿ ಪಡೆದರು.

ದಿಗ್ಬಂಧನ ಬಳಿಕ ರಾಜ್ಯ ಐಟಿ ವಲಯ ಎದುರಿಸುತ್ತಿರುವ ಸವಾಲುಗಳು, ಕಂಡುಕೊಂಡಿರುವ ಪರಿಹಾರಗಳು ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷ ಮಾರ್ಚ್ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಪ್ರಸ್ತುತ ಜುಲೈ ೩೧ರ ವರೆಗೆ ಮನೆಯಿಂದಲೇ ಕೆಲಸ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಐಟಿ ವಲಯ ಸದ್ಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ರಾಜ್ಯದ ಐಟಿ ವೃತ್ತಿಪರರ ಜೊತೆ ಪ್ರತ್ಯೇಕ ವಿಡಿಯೋ ಸಂವಹನ  ನಡೆಸಬೇಕೆಂಬ ಉಪಮುಖ್ಯಮಂತ್ರಿಗಳ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ರವಿ ಶಂಕರ್ ಪ್ರಸಾದ್, ಶೀಘ್ರದಲ್ಲೇ ವಿಡಿಯೋ ಸಂವಹನ ನಡೆಸುವ ಭರವಸೆ ನೀಡಿದರು.

ರಾಷ್ಟ್ರಮಟ್ಟದ ಕಾರ್ಯತಂತ್ರ ಸಮಿತಿ
ಕೋರೋನಾವೈರಸ್ನಂತಹ ಪರಿಸ್ಥಿತಿ ಎದುರಾದಾಗ ಐಟಿ ಹಾಗೂ ಸಂಬಂಧಿತ ವಲಯಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು. ವಿಪತ್ತಿನ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ಪರಿಹಾರ ಕ್ರಮಗಳು ಏನು ಎಂಬ ಬಗ್ಗೆ ರೂಪುರೇಷೆ ತಯಾರಿಸಲು ರಾಷ್ಟ್ರಮಟ್ಟದ ಕಾರ್ಯತಂತ್ರ ಸಮಿತಿ ರಚಿಸಲಾಗುವುದು, ಎಂದು ಪ್ರಸಾದ್ ಹೇಳಿದರು.

ಐಟಿ ವಲಯ ಮಾತ್ರವೇ ಅಲ್ಲ, ಅನ್ವೇಷಣೆ, ನವೋದ್ಯಮಗಳ (ಸ್ಟಾರ್ಟ್ಅಪ್) ಅಭಿವೃದ್ಧಿಗೆ ಆದ್ಯತೆ ನೀಡಬೇಕು. -ಆಡಳಿತ, -ಪಾಸ್ಗಳ ಪರಿಣಾಮಕಾರಿ ಜಾರಿಗೆ ಗಮನ ನೀಡಲಾಗುವುದು. ಅಲ್ಲದೆ ಕೋವಿಡ್ ಸಮಸ್ಯೆ ಎದುರಾದಾಗಿನಿಂದ ಬಹುತೇಕ ಎಲ್ಲ ವಲಯಗಳ ಕೆಲಸದ ರೀತಿ ನೀತಿ ಬದಲಾಗಿದ್ದು, ಶೇ. ೮೦ರಷ್ಟು ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್ ಲೈನ್  ಮೂಲಕವೇ ನಡೆಯುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಭಾರತ್ ನೆಟ್ ಯೋಜನೆ ಮೂಲಕ ದೇಶದ ಮೂಲೆಮೂಲೆಗೂ ಇಂಟರ್ನೆಟ್ ಸಂಪರ್ಕ ಜಾಲ ಬಲಪಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.

ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ ಯೋಜನೆಗಳ ಕಾರ್ಯರೂಪಕ್ಕೆ ಇದು ಸಕಾಲ. ಕೊರೋನಾ ನಂತರದಲ್ಲಿ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ಒತ್ತು ನೀಡಬೇಕು. ನಿಟ್ಟಿನಲ್ಲಿ ನಾವು ತಕ್ಕ ಮಟ್ಟಿನ ಯಶಸ್ಸು ಪಡೆದಿದ್ದರೂ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವುದಕ್ಕೂ ಮೊದಲು ದೇಶದಲ್ಲಿ ಇದ್ದ ಮೊಬೈಲ್ ಉತ್ಪಾದಕ ಸಂಸ್ಥೆಗಳ ಸಂಖ್ಯೆ ರಿಂದ ೨೬೮ಕ್ಕೆ ಏರಿದೆ.  ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ ಎಂದು ಸಚಿವರು ವಿವರಿಸಿದರು.

ಅಂತರ್ಜಾಲ ಆರೋಗ್ಯ ಸೇವೆ
ಕೋರನಾ ನಂತರ ಆರೋಗ್ಯ ಸೇವೆಯಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಿದ್ದು ಅಂತರ್ಜಾಲ ಆರೋಗ್ಯ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಂತರ್ಜಾಲ ಆರೋಗ್ಯ ಸೇವೆ ಉತ್ತಮವಾಗಿದ್ದು, ಇತರ ರಾಜ್ಯಗಳಲ್ಲೂ ಇದು ವಿಸ್ತರಣೆ ಆಗಬೇಕು ಎಂದು ಅವರು ಸಲಹೆ ಮಾಡಿದರು.

ಆಪ್ತ ಮಿತ್ರ ಸಹಾಯವಾಣಿ
ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಮುಂತಾದ ಹಲವು ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು  ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದನ್ನು ಡಾ. ಅಶ್ವತ್ಥನಾರಾಯಣ ವಿಡಿಯೋ ಸಂವಹನದಲ್ಲಿ ವಿವರಿಸಿದರು.

೫೦೦ಕ್ಕೂ ಹೆಚ್ಚು ವೃತ್ತಿಪರರು ಆಪ್ತ ಮಿತ್ರ ಸಹಾಯವಾಣಿಯ ಕಾಲ್ ಸೆಂಟರಿನಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು ೫೦ ಸಾವಿರ ಕರೆಗಳನ್ನು ಸ್ವೀಕರಿಸಿ, ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾರೆ. -ಕಾಮರ್ಸ್ ಗೆ ಪರ್ಯಾಯವಾದ ವ್ಯವಸ್ಥೆ ಕಂಡುಕೊಂಡಿದ್ದು, ಕೆಂಪು ವಲಯದಲಿರುವ (ರೆಡ್ ಝೋನ್) ಜನ ಮನೆಯಿಂದ ಹೊರ ಬರುವ ಅಗತ್ಯ ಬಾರದಂತೆ ಎಲ್ಲ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತಿದೆ.  ದಿನಸಿ, ಹಾಲು, ಔಷಧ, ತರಕಾರಿ ಮುಂತಾದ ವಸ್ತುಗಳನ್ನು ಮನೆಗೆ ತಲುಪಿಸಲು ವಿಧಿಸುತ್ತಿರುವ ದರ ಕೇವಲ ೧೦ ರೂಪಾಯಿ.  ಒಂದೇ ರೀತಿಯ ಸೇವೆ (ಪರಿಹಾರ ಸಾಮಗ್ರಿಗಳು) ಬೇರೆ ಬೇರೆ ಇಲಾಖೆಗಳಿಂದ ಪುನರಾವರ್ತನೆ ಆಗದಂತೆ ತಡೆಯಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ, ಎಂದು ಉಪಮುಖ್ಯಮಂತ್ರಿ ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೩೦,೮೭,೮೩೧ ಸಾವು ,೧೨,೭೭೪
ಚೇತರಿಸಿಕೊಂಡವರು- ,೩೫,೧೧೫
ಅಮೆರಿಕ ಸೋಂಕಿತರು ೧೦,೧೨,೮೫೫, ಸಾವು ೫೭,೦೧೬
ಸ್ಪೇನ್ ಸೋಂಕಿತರು ,೩೨,೧೨೮, ಸಾವು ೨೩,೮೨೨
ಇಟಲಿ ಸೋಂಕಿತರು ,೯೯,೪೧೪,  ಸಾವು ೨೬,೯೭೭
ಜರ್ಮನಿ ಸೋಂಕಿತರು ,೫೯,೦೩೮, ಸಾವು ,೧೬೧
ಚೀನಾ ಸೋಂಕಿತರು ೮೨,೮೩೬, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೫೭,೧೪೯, ಸಾವು ೨೧,೦೯೨

ಅಮೆರಿಕದಲ್ಲಿ ೨೧೯, ಇರಾನಿನಲ್ಲಿ ೭೧, ಬೆಲ್ಜಿಯಂನಲ್ಲಿ ೧೨೪, ಸ್ಪೇನಿನಲ್ಲಿ ೩೦೧, ಸ್ವೀಡನ್ನಲ್ಲಿ ೮೧, ಮೆಕ್ಸಿಕೋದಲ್ಲಿ ೮೩, ಒಟ್ಟಾರೆ ವಿಶ್ವಾದ್ಯಂತ ,೩೨೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement