My Blog List

Saturday, May 23, 2020

ಸುಧಾರಿಸಿತೇ ಮಹಾರಾಷ್ಟ್ರ ? ಕೋವಿಡ್ ಸಾವಿನ ದರ ಇಳಿಕೆ

ಸುಧಾರಿಸಿತೇ ಮಹಾರಾಷ್ಟ್ರ ?  ಕೋವಿಡ್ ಸಾವಿನ ದರ ಇಳಿಕೆ
ಮುಂಬೈ: ಮಹಾರಾಷ್ಟ್ರದಲ್ಲಿ ಗುರುವಾರದವರೆಗಿನ ಅಂಕಿ ಅಂಶದಂತೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಡ್-೧೯ ಸಾವಿನ ಪ್ರಮಾಣ ಶೇಕಡಾ .೭೬ರಿಂದ ಶೇಕಡಾ .೪೯ಕ್ಕೆ ಕುಸಿದಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ  2020 ಮೇ 23ರ ಶನಿವಾರ  ಮಾಹಿತಿ ನೀಡಿತು.
ಆದಾಗ್ಯೂ, ಇದೇ ಅವಧಿಯಲ್ಲಿ ಸಾವಿನ ಸಂಖ್ಯೆಗಳು ಏಪ್ರಿಲ್ ೨೨ರಂದು ಇದ್ದ ೨೬೯ರಿಂದ ಗುರುವಾರದ ವೇಳೆಗೆ ,೪೫೪ಕ್ಕೆ ಏರಿವೆ.

ಏಪ್ರಿಲ್ ೨೨ರಂದು ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ,೬೪೯ ಇತ್ತು. ವೇಳೆಗೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ .೭೬ರಷ್ಟು ಇತ್ತು. ಮೇ ೨೧ರಂದು ರಾಜ್ಯದಲ್ಲಿನ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ೪೧,೬೪೨. ಇದೇ ವೇಳೆಗೆ ಸಾವಿನ ಪ್ರಮಾಣ ಶೇಕಡಾ .೪೯.

ಶನಿವಾರದ ಅಂಕಿಸಂಖ್ಯೆಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೪೪,೫೮೨ ಮತ್ತು ಸಾವಿನ ಸಂಖ್ಯೆ ,೫೧೭. ಅಂದರೆ ಸಾವಿನ ಪ್ರಮಾಣ ಶೇಕಡಾ .೪೦. ಏನಿದ್ದರೂ ಶನಿವಾರದ ಮಾಹಿತಿಯ ವಿಶ್ಲೇಷಣೆಯನ್ನು ಮಹಾರಾಷ್ಟ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ.

ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಕಳೆದ ಒಂದು ತಿಂಗಳಿಂದ ಗಮನಾರ್ಹವಾಗಿ ಕುಸಿದಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಏಪ್ರಿಲ್ ೨೨ರಂದು ಸಾವಿನ ಪ್ರಮಾಣ ಶೇಕಡಾ .೭೬ ಆಗಿದ್ದರೆ ಏಪ್ರಿಲ್ ೨೬ರಂದು ಶೇಕಡಾ .೨೪, ಏಪ್ರಿಲ್ ೩೦ರಂದು ಶೇಕಡಾ .೩೭, ಮೇ ೧ರಂದು ಶೇಕಡಾ .೨೨, ಮೇ ೯ರಂದು ಶೇಕಡಾ .೮೫, ಮೇ ೧೪ರಂದು ಶೇಕಡಾ ., ಮೇ ೧೬ರಂದು ಶೇಕಡಾ .೬೨ ಮತ್ತು ಮೇ ೨೧ರಂದು ಶೇಕಡಾ .೪೯.

ಅವಧಿಯಲ್ಲಿ ಪರೀಕ್ಷಾ ಪ್ರಮಾಣವೂ ಹೆಚ್ಚಾಗಿದೆ. ಏಪ್ರಿಲ್ ೨೨ರಂದು ೮೯,೦೦೦ದಷ್ಟು ಇದ್ದ ಪರೀಕ್ಷೆಗಳ ಸಂಖ್ಯೆ ಶನಿವಾರದ ವೇಳೆಗೆ .೨೨ ಲಕ್ಷಕ್ಕೆ ಏರಿತ್ತು.

ನಾಯರ್ ಆಸ್ಪತ್ರೆಯಲ್ಲಿನ ಮಾಜಿ ಸೂಕ್ಷ್ಮಾಣು ವಿಜ್ಞಾನಿ (ಮೈಕ್ರೋ ಬಯಾಲಜಿಸ್ಟ್) ಮಾಧವ ಸಾಥೆ ಅವರುಸಾವಿನ ಸಂಖ್ಯೆ ಹೆಚ್ಚ್ಚುತ್ತಿದ್ದರೂ ಸಾವಿನ ಪ್ರಮಾಣ (ದರ) ಇಳಿಮುಖವಾಗುತ್ತಿರುವುದು ನಿಜವಾಗಿ ಒಳ್ಳೆಯ ವಿಚಾರ. ಒಟ್ಟು ಪರೀಕ್ಷೆಗಳ ಸಂಖ್ಯೆ ಮತ್ತು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೂಡಾ ಹೆಚ್ಚಿದೆ ಎಂದು ಹೇಳಿದರು.

ವೈರಸ್ ಹೆಚ್ಚು ಹರಡಿದಂತೆ ಅದು ಅಪಾಯಕಾರಿಯಾಗುವುದು ಕಡಿಮೆಯಾಗುತ್ತದೆ. ಆದ್ದರಿಂದ ಈಗ ಇರುವುದಕ್ಕಿಂತ ಹೆಚ್ಚು ಅದು ಹರಡಬಲ್ಲುದು. ಆದರೆ ಅದು ತೀವ್ರ ಅಪಾಯಕಾರಿಯಾಗಿರುವುದಿಲ್ಲ. ಅಲ್ಲದೆ ಪ್ರಾರಂಭದಲ್ಲೇ ರೋಗಪತ್ತೆ ಹಾಗೂ ವೈದ್ಯಕೀಯ ಪ್ರಯೋಗಗಳು ಧನಾತ್ಮಕ ಫಲಿತಾಂಶ ನೀಡುತ್ತಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದರೂ, ಸಾವಿನ ಪ್ರಮಾಣ ಈಗಿನಷ್ಟೇ ಇರಬಹುದು ಅಥವಾ ಇನ್ನೂ ಸ್ವಲ್ಪ ಕೆಳಕ್ಕೆ ಇಳಿಯಬಹುದು ಎಂಬುದು ನನ್ನ ಅಂದಾಜು ಎಂದು ಮಾಧವ ಸಾಥೆ ನುಡಿದರು.

ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಯ ಮಾಹಿತಿಯು ರಾಜ್ಯದ ೩೯,೧೪೪ ಕೊರೋನಾ ರೋಗಿಗಳ ಪೈಕಿ ಶೇಕಡಾ ೮೬.೭೪ರಷ್ಟು ಮಂದಿ ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿಸಿದೆ. ಇಲಾಖೆಯು ಮೇ ೨೦ರವರೆಗಿನ ಮಾಹಿತಿಯನ್ನು ವಿಶ್ಲೇಷಿಸಿದೆ.

ರೋಗಿಗಳ ಪೈಕಿ ಶೇಕಡಾ .೬೧ ಪ್ರಕರಣಗಳು ೧೦ ವರ್ಷಗಳ ವರೆಗಿನವರು, ಶೇಕಡಾ .೦೫ರಷ್ಟು ಮಂದಿ ೧೧ ಮತ್ತು ೨೦ ವರ್ಷಗಳ ನಡುವಿನವರು. ಶೇಕಡಾ ೨೧.೦೮ರಷ್ಟು ಮಂದಿ ೨೧ರಿಂದ ೩೦ ವರ್ಷಗಳ ಮಧ್ಯದವರು. ಶೇಕಡಾ ೨೧.೪೪ರಷ್ಟು ಮಂದಿ ೩೧ರಿಂದ ೪೦ ವರ್ಷ ವಯೋಮಾನದವರು. ಶೇಕಡಾ ೧೭.೭೬ರಷ್ಟು ಮಂದಿ ೪೧ರಿಂದ ೫೦ ವರ್ಷಗಳ ಒಳಗಿನವರು ಮತ್ತು ಶೇಕಡಾ ೧೫.೮೦ರಷ್ಟು ಮಂದಿ ೫೧ರಿಂದ ೬೦ ರ್ಷ ಪ್ರಾಯದವರು. ಏನಿದ್ದರೂ, ೫೦ ಮತ್ತು ಅದಕ್ಕಿಂತ ಹೆಚ್ಚು ವಯೋಮಾನದ ಗುಂಪಿನ ಮಂದಿ ರೋಗದಿಂದ ಹೆಚ್ಚು ತೊಂದರೆಗೆ ಒಳಗಾಗುವವರಾಗಿದ್ದು, ಇಲಾಖೆಯ ಮಾಹಿತಿಯ ಪ್ರಕಾರ ೯೯೮ ಸಾವುಗಳಲ್ಲಿ ಶೇಕಡಾ ೭೧ರಷ್ಟು ಸಾವುಗಳು ೫೦ಕ್ಕಿಂತ ಹೆಚ್ಚು ವಯೋಮಾನದ ಗುಂಪಿನಲ್ಲಿ ಸಂಭವಿಸಿದೆ.

ತೀವ್ರ ಸಮಸ್ಯೆಗಳಿದ್ದ ೬೦ ವರ್ಷ ಮೀರಿದ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಕೈಗೊಂಡ ಕ್ರಮಗಳು ಅವರಿಗೆ ಸೋಂಕು ತಗುಲದಂತೆ ರಕ್ಷಿಸಲು ನೆರವಾದವು ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ನುಡಿದರು.

ಕಳೆದ ಆರು ದಿನಗಳಿಂದ ಮಹಾರಾಷ್ಟ್ರದಲ್ಲಿ ಪ್ರತಿದಿನ ೨೦೦೦ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ೧೪,೦೪೨ ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆಗೆ ೩೮೨ ಸಾವುಗಳು ಸಂಭವಿಸಿವೆ. ಮೇ ೬ರಿಂದ ಗಮನಾರ್ಹ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ರಾಜ್ಯ ಕಂಡಿದೆ. ಮೇ ೬ರಿಂದ ಪ್ರತಿದಿನ ೧೦೦೦ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ.

ಆದಾಗ್ಯೂ ರಾಜ್ಯವು ರೋಗದ ಸಾಮುದಾಯಿಕ ವರ್ಗಾವಣೆಯ ಹಂತಕ್ಕೆ ತಲುಪಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಮದ್ಯೆ, ಕೊಂಕಣ ವಿಭಾಗ ಒಂದರಿಂದಲೇ ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಶ್ರಮಿಕ ವಿಶೇಷ ರೈಲುಗಳ ಮೂಲಕ ವಾಪಸಾಗಿದ್ದಾರೆ. ಥಾಣೆ, ಮುಂಬೈ, ರಾಯಗಡ, ರತ್ನಗಿರಿ, ಸಿಂಧುದುರ್ಗ ಮತ್ತು ಪಾಲ್ಘಾರ್ ಜಿಲ್ಲೆಗಳು ಕೊಂP ವಿಭಾಗದಲ್ಲಿ ಬರುತ್ತವೆ.

No comments:

Advertisement