My Blog List

Saturday, May 23, 2020

ದೆಹಲಿ: ಕಿತ್ತಳೆಗೆ ತಿರುಗಿದ 46 ಧಾರಕ ವಲಯಗಳು

ದೆಹಲಿ:  ಕಿತ್ತಳೆಗೆ ತಿರುಗಿದ 46 ಧಾರಕ ವಲಯಗಳು
ನವದೆಹಲಿ: ದೆಹಲಿಯ ೯೨ ಸಕ್ರಿಯ ಧಾರಕವಲಯಗಳ (ಕಂಟೈನ್ ಮೆಂಟ್) ಪೈಕಿ ಅರ್ಧದಷ್ಟು ವಲಯಗಳಲ್ಲಿ ಕಳೆದ ೧೪ ದಿನಗಳಿಂದ ಒಂದೇ ಒಂದು ಕೊರೋನಾಸೋಂಕು ವರದಿಯಾಗಿಲ್ಲ, ಹೀಗಾಗಿ ಪ್ರಸ್ತುತ ಕಿತ್ತಳೆ ವಲಯಕ್ಕೆ ತಿರುಗಿರುವ ವಲಯಗಳು ಮುಂದಿನ ಎರಡು ವಾರಗಳಲ್ಲಿ ಹಸಿರು ವಲಯಕ್ಕೆ ತಿರುಗುವ ಆಶಯವಿದೆ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು 2020 ಮೇ 23ರ ಶನಿವಾರ ಹೇಳಿದರು.

ನಗರ ಸರ್ಕಾರವು ಕೋವಿಡ್ -೧೯ ಪ್ರಕರಣಗಳು ಕಂಡು ಬಂದ ಪ್ರದೇಶಗಳನ್ನು ಕಂಟೈನ್ ಮೆಂಟ್ ವಲಯಗಳು ಎಂಬುದಾಗಿ ಮಾರ್ಚ್ ಕೊನೆಯಿಂದ ಪ್ರಕಟಿಸಲು ಆರಂಭಿಸಿತ್ತು. ಒಟ್ಟು ೧೨೬ ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯಗಳು ಎಂಬುದಾಗಿ ಘೋಷಿಸಲಾಗಿತ್ತು. ಕಳೆದ ಕೆಲವು ವಾರಗಳಲ್ಲಿ ಅಧಿಕಾರಿಗಳು ಪೈಕಿ ಸುಮಾರು ೩೪ ಪ್ರದೇಶಗಳನ್ನು ತನ್ನ ಧಾರಕ ವಲಯಗಳ ಪಟ್ಟಿಯಿಂದ ತೆಗೆದುಹಾಕಿದ್ದು, ಸಕ್ರಿಯ ವಲಯಗಳ ಸಂಖ್ಯೆ ೯೨ಕ್ಕೆ ಇಳಿದಿದೆ.

ಕಂಟೈನ್‌ಮೆಂಟ್ ವಲಯಗಳಲ್ಲಿ ಅಪಾರ್ಟ್ ಮೆಂಟ್ ಬ್ಲಾಕ್‌ಗಳು, ಗೇಟೆಡ್ ಕಮ್ಯೂನಿಟಿಗಳು, ಕೊಳಚೆಗೇರಿಗಳು, ಬೀದಿಗಳು ಮತ್ತು ಸಂಪೂರ್ಣ ನೆರೆಹೊರೆ ಪ್ರದೇಶಗಳು ಸೇರಿವೆ. ಅವುಗಳನ್ನು ಸಂಪೂರ್ಣ ಕ್ವಾರಂಟೈನ್ ವಲಯಗಳು ಎಂಬುದಾಗಿ ಘೋಷಿಸಲಾಗಿದ್ದು, ಯಾರಿಗೂ ಹಾಲು, ಹಣ್ಣು, ತರಕಾರಿಯಂತಹ ಅಗತ್ಯ ವಸ್ತುಗಳನ್ನು ತರಲು ಕೂಡಾ ಹೊರಕ್ಕೆ ಬಿಡಲಾಗುವುದಿಲ್ಲ.

ಎಲ್ಲ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್‌ಗಳನ್ನು ಒಳಗಲ್ಲಿಗಳಲ್ಲಿ ಕೂಡಾ ಅಡ್ಡಗಟ್ಟೆಗಳನ್ನು (ಬ್ಯಾರಿಕೇಡ್) ಹಾಕಲಾಗುತ್ತದೆ. ಆಯ್ದ ವ್ಯಾಪಾರಿಗಳಿಗೆ ಮಾತ್ರ ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ನೆರೆಹೊರೆಯವರಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ನಾಗರಿಕರ ರಕ್ಷಣಾ ಸ್ವಯಂಸೇವಕರ ನೆರವಿನೊಂದಿಗೆ ಸರಬರಾಜು ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸುತ್ತಾರೆ.

ವಲಯಗಳಲ್ಲಿ ಸಂಭಾವ್ಯ ಪ್ರಕರಣಗಳು, ಅಂತಹವರ ಸಂಪರ್ಕ ಇತಿಹಾಸ ಪತ್ತೆಗಾಗಿ ಆರೋಗ್ಯ ಕಾರ್‍ಯಕರ್ತರು ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ, ಪರೀಕ್ಷೆಗಳನ್ನು ನಡೆಸುತ್ತಾರೆ ಮತ್ತು ಪ್ರದೇಶದಲ್ಲಿ ನೈರ್ಮಲ್ಯ ರಕ್ಷಣೆ ಬಗ್ಗೆ ಗಮನ ಹರಿಸುತ್ತಾರೆ.

ಹೆಚ್ಚು ಪ್ರದೇಶಗಳಲ್ಲಿ ಕೋವಿಡ್-೧೯ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೮೦ರಿಂದ ೯೨ಕ್ಕೆ ಏರಿಕೆಯಾಗಿತ್ತು ಮತ್ತು ಅವುಗಳನ್ನು ಕಠಿಣ ದಿಗ್ಬಂಧನಕ್ಕೆ (ಲಾಕ್ ಡೌನ್) ಒಳಪಡಿಸಲಾಗಿತ್ತು.

ಕಂಟೈನ್ ಮೆಂಟ್ ವಲಯಗಳತ್ತ ಹೆಚ್ಚಿನ ಗಮನ ಹರಿಸಿ ಕೈಗೊಂಡ ಕ್ರಮಗಳು s ನೀಡುತ್ತಿವೆ ಎಂಬುದು ನಮ್ಮ ವಿಶ್ಲೇಷಣೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ನುಡಿದರು.

೪೫ ಕಂಟೈನ್ ಮೆಂಟ್ ವಲಯಗಳ ಪೈಕಿ ಒಟ್ಟು ೧೩ ವಲಯಗಳಲ್ಲಿ ಕಳೆದ ೧೪ ದಿನಗಳಿಂದ ಒಂದೇ ಒಂದು ಹೊಸ ಪ್ರಕರಣ ವರದಿಯಾಗಿಲ್ಲ, ಆದ್ದರಿಂದ ಇವುಗಳನ್ನು ಕಿತ್ತಳೆ ವಲಯಗಳು ಎಂಬುದಾಗಿ ವರ್ಗೀಕರಿಸಲಾಗಿದೆ. ಇವೆಲ್ಲವೂ ದಕ್ಷಿಣ ಜಿಲ್ಲೆಯಲ್ಲಿವೆ ಎಂದು ಅಧಿಕಾರಿ ಹೇಳಿದರು.

೪೫ ವಲಯಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಯಾವುದೇ ಕೊರೋನಾ ಪ್ರಕರಣಗಳು ವರದಿಯಾಗದೇ ಇದ್ದಲ್ಲಿ ಸುಮಾರು . ಲಕ್ಷಕ್ಕಿಂತಲೂ ಹೆಚ್ಚಿನ ಮಂದಿ ಮಾಮೂಲಿ ಬದುಕು ಸಾಗಿಸಲು ಮುಕ್ತರಾಗುತ್ತಾರೆ. ಪೈಕಿ ಹೆಚ್ಚಿನ ಮಂದಿ ಕೇಂದ್ರ ದೆಹಲಯ ಸದರ್ ಬಜಾರ್ ಮತ್ತು ನಬಿ ಕರೀಮ್ ಎರಡು ಕಂಟೈನ್ ಮೆಂಟ್ ವಲಯಗಳಲ್ಲಿ ಇದ್ದಾರೆ. ಎರಡು ವಲಯಗಳ ಜನರು ಕಳೆದ ೪೦ಕ್ಕೂ ಹೆಚ್ಚು ದಿನಗಳಿಂದ ಕಠಿಣ ಲಾಕ್ ಡೌನ್ ಅಡಿಯಲ್ಲಿ ಬದುಕುತ್ತಿದ್ದಾರೆ.

ಕೇಂದ್ರ ದೆಹಲಿ ಜಿಲ್ಲೆಯ ಮೂರು ಇತರ ಕಂಟೈನ್ ಮೆಂಟ್ ವಲಯಗಳಾದ ಚಾಂದನಿ ಮಹಲ್, ಬರ ಹಿಂದು ರಾವ್ ಮತ್ತು ನವಾಬ್ ಗಂಜ್ ಈಗಾಗಲೇ ವರ್ಗೀಕರಿಸಲಾಗಿರುವಕೆಂಪು ವಲಯಗಳಾಗಿ ಮುಂದುವರೆಯುತ್ತವೆ. ಏಕೆಂದರೆ ಹೊಸ ಪ್ರಕರಣಗಳು ಪ್ರದೇಶಗಳಿಂದಲೇ ವರದಿಯಾಗುತ್ತಿವೆ ಎಂದು ವರದಿಗಳು ಹೇಳಿವೆ.

No comments:

Advertisement