Saturday, May 9, 2020

ವಿದ್ಯುತ್ ಕಂಪೆನಿಗಳ ಕರಾಮತ್ತು: ಚೀನಾ ಆಕ್ಷೇಪಕ್ಕೆ ತೆಪ್ಪಗಾಯಿತು ಪಾಕ್

ವಿದ್ಯುತ್ ಕಂಪೆನಿಗಳ ಕರಾಮತ್ತು:  ಚೀನಾ ಆಕ್ಷೇಪಕ್ಕೆ  ತೆಪ್ಪಗಾಯಿತು ಪಾಕ್
ನವದೆಹಲಿ: ಪ್ರಶ್ನಾರ್ಹ ಒಪ್ಪಂದಗಳ ಮೂಲಕ ಕೋಟ್ಯಂತರ ಡಾಲರ್ ಹಣ ಮಾಡುತ್ತಿರುವ ಸ್ವತಂತ್ರ ವಿದ್ಯುತ್ ಉತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಅತ್ಯುತ್ಸಾಹ ಚೀನಾ ಮಧ್ಯಪ್ರವೇಶದ ಬಳಿಕ ಜರ್ರನೆ ಇಳಿದಿದ್ದು, ವಿದ್ಯುತ್ ಕಂಪೆನಿಗಳ ವಿರುದ್ಧದ ಕ್ರಮಗಳನ್ನು ಅವರು ತಡೆ ಹಿಡಿದಿದ್ದಾರೆ ಎಂದು ವರದಿಗಳು 2020 ಮೇ 09ರ ಶನಿವಾರ ತಿಳಿಸಿದವು.

ಸ್ವತಂತ್ರ ವಿದ್ಯುತ್ ಉತ್ಪಾದಕರ ವಿರುದ್ಧದ ತನಿಖಾ ಕ್ರಮಗಳು ಪಾಕಿಸ್ತಾನಕ್ಕೆ ತಿರುಗುಬಾಣವಾಗಬಹುದು ಎಂಬುದಾಗಿ ಚೀನಾವು ಖಾನ್ ಅವರಿಗೆ ಎಚ್ಚರಿಕೆ ನೀಡಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಚೀನಾದ ವಿದ್ಯುತ್ ಉತ್ಪಾದಕ ಕಂಪೆನಿಗಳು ಸೇರಿದಂತೆ ಹಲವಾರು ವಿದ್ಯುತ್ ಉತ್ಪಾದಕ ಕಂಪೆನಿಗಳಿಗೆ ನೀಡಿದ ಸಾಲ ಮತ್ತು ಸಬ್ಸಿಡಿಗಳಿಂದಾಗಿ ರಾಷ್ಟ್ರಕ್ಕೆ ಟ್ರಿಲಿಯನ್ ರೂಪಾಯಿಗಳಿಗೂ ಹೆಚ್ಚಿನ ನಷ್ಟವಾಗಿದೆ ಎಂದು ತಮ್ಮ ಸರ್ಕಾರ ರಚಿಸಿದ್ದ ತನಿಖಾ ಸಮಿತಿಯೊಂದು ಕಳೆದ ಆಗಸ್ಟ್ ತಿಂಗಳಲ್ಲಿ ವರದಿ ನೀಡಿದ ಬಳಿಕ ದೇಶದಲ್ಲಿನ ಸ್ವತಂತ್ರ ವಿದ್ಯುತ್ ಉತ್ಪಾದಕ ಕಂಪೆನಿಗಳ ಬಗ್ಗೆ ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಏಪ್ರಿಲ್ ೨೧ರಂದು ಆದೇಶ ನೀಡಿತ್ತು.

ಪಾಕಿಸ್ತಾನದಲ್ಲಿನ ಗ್ರಾಹಕರು ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ದರಗಳನ್ನು ಪಾವತಿ ಮಾಡಬೇಕಾಗಿ ಬಂದಿರುವುದು ಏಕೆ ಎಂಬುದಾಗಿ ಪತ್ತೆ ಮಾಡುವಂತೆ ಸರ್ಕಾರವು ತನಿಖಾ ಸಮಿತಿಗೆ ಆದೇಶ ನೀಡಿತ್ತು. ೧೬ ಸ್ವತಂತ್ರ ವಿದ್ಯುತ್ ಉತ್ಪಾದಕ ಕಂಪೆನಿಗಳು (ಐಪಿಪಿ) ಸುಮಾರು ೬೦ ಬಿಲಿಯನ್ (೬೦೦೦ ಕೋಟಿ) ರೂಪಾಯಿಗಳನ್ನು ಹೂಡಿಕೆ ಮಾಡಿ ಸುಮಾರು ೪೦೦ ಬಿಲಿಯನ್ (೪೦,೦೦೦ ಕೋಟಿ) ರೂಪಾಯಿಗಳಷ್ಟು ಲಾಭವನ್ನು ಎರಡರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ  ಮಾಡಿವೆ ಎಂದು ಸಮಿತಿ ಹೇಳಿತ್ತು.

ಆದರೆ ವಾರ ಇಮ್ರಾನ್ ಖಾನ್ ಅವರು ಸಮಿತಿಯ ವರದಿ ಮೇಲಿನ ತನಿಖಾ ಕ್ರಮವನ್ನು ದಿಢೀರನೆ ಎರಡು ತಿಂಗಳ ಅವಧಿಗೆ ಮುಂದೂಡಿದ್ದಾರೆ.

ಪಾಕಿಸ್ತಾನಿ ವಾರ್ತಾ ಸಚಿವ ಶಿಬ್ಲಿ ಫರಾಜ್ ಅವರು ಸರ್ಕಾರವು ಕೋವಿಡ್-೧೯ ಸಮರ ಕ್ರಮಗಳ ಬಗ್ಗೆ ಗಮನ ಹರಿಸಬೇಕಾಗಿರುವುದರಿಂದ ತನಿಖೆಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವರದಿಗಾರರಿಗೆ ತಿಳಿಸಿದರು.

ನಾವು ಅದನ್ನು ಮೂಲೆಗೆ ಬಿಸಾಕವುದಿಲ್ಲ ಎಂದು ಅವರು ಇಸ್ಲಾಮಾಬಾದಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಚೀನಾದ ವಿದ್ಯುತ್ ಉತ್ಪಾದಕ ಕಂಪೆನಿಗಳು ಸೇರಿದಂತೆ ಸ್ವತಂತ್ರ ವಿದ್ಯುತ್ ಉತ್ಪಾದಕರ ಜೊತೆಗೆ ಅರ್ಥಪೂರ್ಣ ಮಾತುಕತೆ ನಡೆಸಲು ಎರಡು ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿದೆ ಎಂದು ಮೂಲಗಳು ಹೇಳಿದವು.

ಚೀನೀ ರಾಯಭಾರಿ ಯಾವೋ ಜಿಂಗ್ ಅವರು ಮಧ್ಯಪ್ರವೇಶ ಮಾಡಿ ಪಾಕ್ ಸರ್ಕಾರದ ತನಿಖಾ ಕ್ರಮದ ಬಗ್ಗೆ ತಮ್ಮ ಸರ್ಕಾರದ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸಿದ ಬಳಿಕ ಇಮ್ರಾನ್ ಖಾನ್ ಸರ್ಕಾರ ತನಿಖೆಗೆ ತಡೆ ಹಾಕುವ ನಿರ್ಧಾರ ಕೈಗೊಂಡಿತು ಎಂದು ನವದೆಹಲಿ ಮತ್ತು ಇಸ್ಲಾಮಾಬಾದಿನ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಚೀನೀ ವಿದ್ಯುತ್ ಉತ್ಪಾದಕ ಕಂಪೆನಿಗಳ ವಿರುದ್ಧ ಕೈಗೊಳ್ಳಲಾಗುವ ಯಾವುದೇ ಕ್ರಮ ತಿರುಗುಬಾಣವಾದೀತು ಎಂಬುದಾಗಿ ಚೀನೀ ರಾಯಭಾರಿ ಚೀನಾಕ್ಕೆ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ಹೇಳಿವೆ. ಹಸ್ತಕ್ಷೇಪದ ಬಳಿಕವೇ ತಮಿತಿಯ ವರದಿಯನ್ನೂ ಬಹಿರಂಗ ಪಡಿಸದೇ ಇರುವ ನಿರ್ಧಾರವನ್ನು ಖಾನ್ ಸರ್ಕಾರ ಕೈಗೊಂಡಿತು ಎಂದು ಮೂಲಗಳು ಹೇಳಿವೆ.

ಆದರೆ, ಮೊಹಮ್ಮದ್ ಅಲಿ ನೇತೃತ್ವದ ಆಯೋಗದ ವರದಿ ವೇಳೆಗಾಗಲೇ ಸೋರಿಕೆಯಾಗಿತ್ತು.

ಪಾಕಿಸ್ತಾನದಲ್ಲಿ ಸುಮಾರು ೪೦ ಸ್ವತಂತ್ರ್ರ ವಿದ್ಯುತ್ ಉತ್ಪಾದಕ ಕಂಪೆನಿಗಳು ಕಾರ್ ನಿರ್ವಹಿಸುತ್ತಿವೆ. ಕಂಪೆನಿ ಪ್ರತಿನಿಧಿಗಳು ತಮ್ಮಿಂದ ತಪ್ಪಾಗಿದೆ ಎಂಬ ವರದಿಗಳನ್ನು ನಿರಂತರವಾಗಿ ತಳ್ಳಿಹಾಕುತ್ತಲೇ ಬಂದಿದ್ದಾರೆ.

ಚೀನೀ ಹಿತಾಸಕ್ತಿ
ಈಗಾಗಲೇ ಜಾರಿಯಾಗಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಡಿಯಲ್ಲಿನ ೧೭ ಯೋಜನೆಗಳ ಪೈಕಿ ಯೋಜನೆಗಳು ಈಗಾಗಲೇ ಚಾಲನೆ ಪಡೆದಿವೆ. ಐಪಿಪಿ ತನಿಖಾ ವರದಿಯು ವಿವರವಾಗಿ ತನಿಖೆ ನಡೆಸಿರುವ ಎರಡು ಕಲ್ಲಿದ್ದಲು ಆಧಾರಿತ ಘಟಕಗಳಿಂದ ಪಾಕಿಸ್ತಾನಕ್ಕೆ ತಲಾ . ಬಿಲಿಯನ್ ಅಮೆರಿಕನ್ ಡಾಲರುಗಳಷ್ಟು ನಷ್ಟವಾಗಬಹುದು. ಪಾಕಿಸ್ತಾನದ ಪಂಜಾಬಿನಲ್ಲಿ ಹ್ಯುಯೆಂಗ್ ಶಾನ್ಡೊಂಗ್ ರೂಯಿ (ಇಂಧನ) ಲಿಮಿಟೆಡ್  ,೩೨೦ ಮೆವಾ ಸಾಹಿವಾಲ್ ಕಲ್ಲಿದ್ದಲು ಇಂಧನ ಘಟಕವನ್ನು ನಿರ್ವಹಿಸುತ್ತಿದೆ. ಪೋರ್ಟ್ ಖಾಸಿಂ ಎನರ್ಜಿ ಹೋಲ್ಡಿಂಗ್ಗೆ ಚೈನಾ ಪವರ್ ಕನ್ ಸ್ಟ್ರಕ್ಷನ್ ಕಾರ್ಪೋರೇಷನ್ / ಸಿನೊಹ್ಯೊಡ್ರೊ ರಿಸೋರ್ಸಸ್ ಲಿಮಿಟೆಡ್ ಹಣಕಾಸು ಒದಗಿಸಿದ್ದು ಇದು ಕೂಡಾ ಕರಾಚಿಯಿಂದ ೩೭ ಕಿಮೀ ದೂರದಲ್ಲಿ ೧೩೨೦ ಮೆವಾ ವಿದ್ಯುತ್ ಘಟಕದ ಯೋಜನೆಯನ್ನು ಹೊಂದಿದೆ.

ಘಟಕಗಳ ನಿರ್ಮಾಣವೆಚ್ಚದ ಬಗ್ಗೆ ತಪ್ಪು ಮಾಹಿತಿಗಳನ್ನು ಒದಗಿಸಲಾಗಿದೆಯಲ್ಲದೆ ಆಂತರಿಕ ದರದ ಬಗೆಗೂ ತಪ್ಪು ಲೆಕ್ಕಾಚಾರ ಮಾಡಲಾಗಿದೆ ಎಂದ ತನಿಖಾ ವರದಿ ಆಪಾದಿಸಿತ್ತು. ತಪ್ಪು ಲೆಕ್ಕಾಚಾರಗಳು ಪಾಕಿಸ್ತಾನಕ್ಕೆ ೩೦ ವರ್ಷಗಳ ಅವಧಿಯಲ್ಲಿ ಸುಮಾರು ೧೬೦ ಬಿಲಿಯನ್ ರೂಪಾಯಿಗಳಷ್ಟು ನಷ್ಟ ಉಂಟು ಮಾಡುತ್ತವೆ ಎಂದೂ ವರದಿ ಹೇಳಿತ್ತು. ಸಾಹಿವಾಲ್ ಮತ್ತು ಪೋರ್ಟ್ ಖಾಸಿಮ್ ಘಟಕಗಳ ಯೋಜನಾ ವೆಚ್ಚದಲ್ಲಿ ೩೨.೪೬ ಬಿಲಿಯನ್ ರೂಪಾಯಿಗಳನ್ನು ಕಡಿತಗೊಳಿಸುವಂತೆಯೂ ವರದಿ ಶಿಫಾರಸು ಮಾಡಿತ್ತು.

No comments:

Advertisement