My Blog List

Saturday, May 9, 2020

ವೆಂಟಿಲೇಟರ್ ವಾಸದಲ್ಲಿ 38 ದಿನದ ಬಳಿಕ ಕೋವಿಡ್ ಗೆದ್ದ ಪ್ರಥಮ ಭಾರತೀಯ

ವೆಂಟಿಲೇಟರ್ ವಾಸದಲ್ಲಿ 38 ದಿನದ ಬಳಿಕ ಕೋವಿಡ್ ಗೆದ್ದ ಪ್ರಥಮ ಭಾರತೀಯ
ನವದೆಹಲಿ: ದಕ್ಷಿಣ ಕೋಲ್ಕತದ ೫೨ರ ಹರೆಯದ ನಿತಾಯಿದಾಸ್ ಮುಖರ್ಜಿ ಅವರು ೩೮ ದಿನಗಳ ವೆಂಟಿಲೇಟರ್ ವಾಸದ ಬಳಿಕ ಸಂಪೂರ್ಣ ಗುಣಮುಖರಾಗಿ ಕೋವಿಡ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ 2020 ಮೇ 09ರ ಶನಿವಾರ ಪಾತ್ರರಾದರು.
ಮಧ್ಯೆ, ೩೩೨೦ ಹೊಸ ಪ್ರಕರಣಗಳೊಂದಿಗೆ ಭಾರತದ ಕೊರೋನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ೫೯,೬೬೨ಕ್ಕೆ ಏರಿತು. ೨೪ ಗಂಟೆಗಳಲ್ಲಿ ೯೫ ಸಾವುಗಳೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ೧೯೮೧ಕ್ಕೇ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.
ಒಟ್ಟು ಪ್ರಕರಣಗಳಲ್ಲಿ ೧೬,೫೪೦ ಮಂದಿ ಚೇತರಿಸಿಕೊಳ್ಳುವುದರೊಂದಿಗೆ ಭಾರತದ ಕೋವಿಡ್-೧೯ ಚೇತರಿಕೆ ಪ್ರಮಾಣವು ಶೇಕಡಾ ೨೯.೩೬ಕ್ಕೆ ಏರಿದೆ. ಶುಕ್ರವಾರ ಒಂದೇ ದಿನ ,೨೭೩ ಮಂದಿ ಗುಣಮುಖರಾಗಿದ್ದಾರೆ. ಸತತವಾಗಿ ಎರಡು ಬಾರಿ ನೆಗೆಟಿವ್ ವರದಿ ಬಂದವರನ್ನು ಮಾತ್ರವೇ ಗುಣಮುಖರಾಗಿದ್ದಾರೆ ಎಂಬುದಾಗಿ ಪರಿಗಣಿಸಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ಹೇಳಿದವು.
ಕೇಂದ್ರ ಸರ್ಕಾರವು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ತನ್ನ ನೀತಿಯನ್ನೂ ಬದಲಾಯಿಸಿದ್ದು, ಬಿಡುಗಡೆಗೆ ಮುನ್ನ ಈಗ ಅತ್ಯಂತ ತೀವ್ರವಾಗಿ ಬಾಧಿಸಲ್ಪಟ್ಟವರನ್ನು ಮಾತ್ರವೇ ಪರೀಕ್ಷಿಸಲಾಗುತ್ತಿದೆ. ಜೂನ್-ಜುಲೈ ತಿಂಗಳಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ ಏರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಯಿತು.
೩೮ ದಿನಗಳ ವೆಂಟಿಲೇಟರ್ ವಾಸದ ಬಳಿಕ ಶನಿವಾರ ಮನೆಗೆ ವಾಪಸಾದ ನಿತಾಯಿದಾಸ್ ಮುಖರ್ಜಿ ಅವರಿಗೆ ನೆರೆಹೊರೆಯ ಮಂದಿ ವೀರೋಚಿತ ಸ್ವಾಗತ ನೀಡಿದರು.

ಇಷ್ಟೊಂದು ದೀರ್ಘಕಾಲ ವೆಂಟಿಲೇಟರಿನಲ್ಲಿ ಇದ್ದ ವ್ಯಕ್ತಿ ಚೇತರಿಸಿಕೊಂಡು ಗುಣಮುಖರಾಗಿ ಮನೆಗೆ ತೆರಳಿದ್ದು ಆಸ್ಪತ್ರೆಯ ಅಧಿಕಾರಿಗಳಿಗೆ ಪವಾಡಸದೃಶ ಘಟನೆಯಾಗಿದೆ  ಎಂದು ಆಸ್ಪತ್ರೆಯ ವೈದ್ಯರು ಹೇಳಿದರು.

ಆಸ್ಪತ್ರೆ ಮತ್ತು ತಂಡದ ವೈದ್ಯರು ನನಗೆ ಹೊಸ ಬದುಕು ನೀಡಿದ್ದಾರೆ. ಇದು ನನ್ನ ಎರಡನೇ ಬದುಕು ಎಂದು ನೀವು ಹೇಳಬಹುದು. ಅವರಿಲ್ಲದೇ ಹೋಗಿದ್ದರೆ, ವೇಳೆಗೆ ನಾನು ಹೆಣವಾಗಿರುತ್ತಿದ್ದೆ. ಅವರು ನಿಜವಾದ ಹೀರೋಗಳು ಎಂದು ಮುಖರ್ಜಿ ನುಡಿದರು. ಮುಖರ್ಜಿ ಎಷ್ಟು ದುರ್ಬಲರಾಗಿದ್ದರು ಎಂದರೆ ದೂರವಾಣಿಯಲ್ಲಿ ಮಾತುಗಳಿಗಿಂತ ಹೆಚ್ಚು ಮಾತನಾಡಲು ಅವರಿಗೆ ಸಾಧ್ಯವಾಗಲಿಲ್ಲ.

೨೦೧೭ರಲ್ಲಿ ನ್ಯುಮೋನಿಯಾಕ್ಕೆ ಗುರಿಯಾಗಿದ್ದ ಮುಖರ್ಜಿ ಅವರಿಗೆ ಮಾರ್ಚ್ ತಿಂಗಳ ಮಧ್ಯಾವಧಿಯಲ್ಲಿ ತೀವ್ರ ಕೆಮ್ಮು ಮತ್ತು ಶೀತಬಾಧೆ ಕಾಡಿತ್ತು. ಆಗಾಗ ಕಾಡುವ ಸಮಸ್ಯೆಗೆ ಚಿಕಿತ್ಸೆ ಪಡೆದು ವಾಪಸಾಗಬಹುದು ಎಂದು ಕುಟುಂಬ ಭಾವಿಸಿತ್ತು. ಆದರೆ ಬಳಿಕ ಜ್ವರವೂ ಇದರ ಜೊತೆಗೆ ಸೇರಿಕೊಂಡಿತ್ತು.

ನಮ್ಮಲ್ಲಿ ಯಾರಿಗೂ ಪ್ರವಾಸ ಮಾಡಿದ ಇತಿಹಾಸವಿಲ್ಲ. ಆದರೆ ಲಕ್ಷಣಗಳು ಕೋವಿಡ್-೧೯ನ್ನೇ ಹೋಲುತ್ತಿದ್ದವು. ನಾವು ಮೇ ೨೯ರಂದು ಅವರನ್ನು ಖಾಸಗಿ ಆಸ್ಪತ್ರೆಗೆ ಒಯ್ಯಲು ನಿರ್ಧರಿಸಿದೆವು. ಆದರೆ ಅವರ ಸ್ಥಿತಿ ಹದಗೆಟ್ಟಿತು.  ರಾತ್ರಿಯೇ ಅವರನ್ನು ವೆಂಟಿಲೇಟರಿನಲ್ಲಿ ಇರಿಸಲಾಯಿತು. ಮರುದಿನ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಎಂಬುದು ಗೊತ್ತಾಯಿತು. ಅಲ್ಲಿಂದಲೇ ಸಾವಿನೊಂದಿಗೆ ಅವರ ಯುದ್ಧ ಶುರುವಾಯಿತು ಎಂದು ನಿತಾಯಿದಾಸ್ ಪತ್ನಿ ಅಪರಜಿತಾ ಮುಖರ್ಜಿ ಹೇಳಿದರು.

ಅವರ ಸ್ಥಿತಿ ಹದಗೆಟ್ಟಾಗ, ವೈದ್ಯರು ಟ್ರಾಕಿಯೊಸ್ಟೊಮಿ, ಶಸ್ತ್ರಚಿಕಿತ್ಸೆಯ ವಿಧಾನವನ್ನು ಗಂಟಲಿನ ಮೇಲೆ ಮತ್ತು ಶ್ವಾಸನಾಳದಲ್ಲಿ ಎರಡು ಛೇದನಗಳ ಮೂಲಕ ನೇರ ವಾಯುಮಾರ್ಗವನ್ನು ರಚಿಸಿದರು.

ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದರು. ಆದರೆ ಅವರು ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ಹೋರಾಟ ಮುಂದುವರೆಸಿದರು. ಅವರನ್ನು ಮತ್ತೆ ಕಾಣುವೆನೇ ಎಂಬುದು ನನಗೆ ಗೊತ್ತಿರಲಿಲ್ಲ. ನಾನು ದೇವರನ್ನು ಪ್ರಾರ್ಥಿಸಿದೆ. ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದು ಎನ್ ಜಿಒ ಒಂದನ್ನು ನಡೆಸುತ್ತಿದ್ದಾರೆ. ಅವರಿಂದ ಹಿಂದೆ ಸಹಾಯ ಪಡೆದ ಎಲರ ಪ್ರಾರ್ಥನೆಗಳು ಅವರಿಗೆ ನೆರವಾಗಿದ್ದು ಅವರು ಜೀವಂತವಾಗಿ ಉಳಿಯಲು ಸಹಕರಿಸಿವೆ ಎಂಬುದು ನನ್ನ ನಂಬಿಕೆ ಎಂದು ಅಪರಾಜಿತಾ ನುಡಿದರು.

ನಿತಾಯಿದಾಸ್ ಅವರು ೩೮ ದಿನಗಳ ವೆಂಟಿಲೇಟರ್ನಲ್ಲಿ ಇದ್ದುದರ ಹೊರತಾಗಿಯೂ ಕೋವಿಡ್-೧೯ನ್ನು ಜಯಿಸಿದ ಮೊದಲ ರೋಗಿ ಎನಿಸಿಕೊಳ್ಳುವ ಮೂಲಕ ಭಾರತದಲ್ಲಿ ದಾಖಲೆ ನಿರ್ಮಿಸಿದ್ದಾರೆ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿತು.

ಇದು ನಿಶ್ಚಿತವಾಗಿಯೂ ಒಂದು ದಾಖಲೆ. ವೆಂಟಿಲೇಟರಿನಲ್ಲಿ ಇರುವುದು ಮತ್ತು ಗುಣಮುಖರಾಗಿ ಮನೆಗೆ ಹಿಂತಿರುಗುವುದು ಒಂದು ಅಸಾಮಾನ್ಯ ಘಟನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಚಿಸಿದ ವೈದ್ಯರ ಸಲಹಾ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಸುಕುಮಾರ್ ಮುಖರ್ಜಿ ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೦,೪೪,೭೯೨ ಸಾವು ,೭೭,೦೮೭
ಚೇತರಿಸಿಕೊಂಡವರು- ೧೪,೦೫,೦೪೨
ಅಮೆರಿಕ ಸೋಂಕಿತರು ೧೩,೨೫,೫೧೯, ಸಾವು ೭೮,೭೬೨
ಸ್ಪೇನ್ ಸೋಂಕಿತರು ,೬೨,೭೮೩, ಸಾವು ೨೬,೪೭೮
ಇಟಲಿ ಸೋಂಕಿತರು ,೧೭,೧೮೫,  ಸಾವು ೩೦,೨೦೧
ಜರ್ಮನಿ ಸೋಂಕಿತರು ,೭೦,೬೪೩, ಸಾವು ,೫೧೦
ಚೀನಾ ಸೋಂಕಿತರು ೮೨,೮೮೭, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೧೧,೩೬೪, ಸಾವು ೩೧,೨೪೧
ಅಮೆರಿಕದಲ್ಲಿ ೧೪೭, ಇರಾನಿನಲ್ಲಿ ೪೮, ಬೆಲ್ಜಿಯಂನಲ್ಲಿ ೬೦, ಸ್ಪೇನಿನಲ್ಲಿ ೧೭೯, ನೆದರ್ ಲ್ಯಾಂಡ್ಸ್ನಲ್ಲಿ ೬೩, ರಶ್ಯಾದಲ್ಲಿ ೧೦೪, ಸ್ವೀಡನ್ನಲ್ಲಿ ೪೫, ಮೆಕ್ಸಿಕೋದಲ್ಲಿ ೧೯೯, ಒಟ್ಟಾರೆ ವಿಶ್ವಾದ್ಯಂತ ,೧೧೧ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement