Saturday, June 27, 2020

ಕೊರೋನಾ: ಭಾರತದಲ್ಲಿ ಮತ್ತೆ ದಾಖಲೆ ಏರಿಕೆ, ಚೇತರಿಕೆ ಶೇಕಡಾ ೫೮ಕ್ಕೆ

ಕೊರೋನಾ: ಭಾರತದಲ್ಲಿ ಮತ್ತೆ ದಾಖಲೆ ಏರಿಕೆ,
ಚೇತರಿಕೆ
ಶೇಕಡಾ ೫೮ಕ್ಕೆ

ನವದೆಹಲಿ: ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ೧೮,೫೦೦ ಹೊಸ ಕೊರೋನಾ ಸೋಂಕು ಪ್ರಕರಣಗಳನ್ನು ದಾಖಲಿಸುವುದರೊಂದಿಗೆ ಭಾರತವು 2020 ಜೂನ್ 27ರ  ಶನಿವಾರ ಗರಿಷ್ಠ ಏಕದಿನ ಸೋಂಕಿನ ಇನ್ನೊಂದು ಅನಪೇಕ್ಷಿತ ದಾಖಲೆಯನ್ನು ನಿರ್ಮಿಸಿತು. ಆದರೆ ಇದೇ ವೇಳೆಗೆ ಚೇತರಿಕೆಯ ಪ್ರಮಾಣ ಶೇಕಡಾ ೫೮ಕ್ಕೆ ಏರಿದ ಆಶಾದಾಯಕ ಬೆಳವಣಿಗೆಯ ಮಾಹಿತಿಯನ್ನೂ ಕೇಂದ್ರ ಸರ್ಕಾರ ಒದಗಿಸಿತು.

ಸೋಂಕು ಆರಂಭವಾದಂದಿನಿಂದ ಈವರೆಗೆ ದಾಖಲಾಗಿರುವ ,೦೮,೯೫೩ ಪ್ರಕರಣಗಳ ಪೈಕಿ ಲಕ್ಷಕ್ಕೆ ಸಮೀಪದ ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ರೋಗದಿಂದ ಗುಣಮುಖರಾಗಿ ಚೇತರಿಕೆ ಕಂಡವರ ಪ್ರಮಾಣ ಶೇಕಡಾ ೫೮ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದರು.

ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಕೇವಲ ಶೇಕಡಾ ೩ರಷ್ಟಿದ್ದು, ಸೋಂಕು ದುಪ್ಪಟ್ಟುಗೊಳ್ಳುವ ದಿನಗಳ ಅಂತರ ಅಂದಾಜು ೧೯ರಷ್ಟಿದೆ. ಮಾರ್ಚ್ ೨೫ರಂದು ರಾಷ್ಟ್ರವ್ಯಾಪಿ ದಿಗ್ಬಂಧನ ಹೇರಿಕೆಗೆ ಮುನ್ನ ದೇಶದಲ್ಲಿ ದಿನಗಳಿಗೆ ಒಮ್ಮೆ ಪ್ರಕರಣಗಳು ದುಪ್ಪಟ್ಟು ಆಗುತ್ತಿದ್ದುದಕ್ಕೆ ಹೋಲಿಸಿದರೆ ಇದು ದೊಡ್ಡ ಅಂತರ ಎಂದು ಸಚಿವರು ನುಡಿದರು.

ನಮ್ಮ ಚೇತರಿಕೆಯ ಪ್ರಮಾಣ ಶೇಕಡಾ ೫೮ನ್ನು ದಾಟಿದೆ. ಸುಮಾರು ಲಕ್ಷ ಮಂದಿ ಕೋವಿಡ್ -೧೯ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಶೇಕಡಾ ೩ರಷ್ಟಿದ್ದು, ಇದು ಅತ್ಯಂತ ಕೆಳಗಿನ ಸಂಖ್ಯೆಯಾಗಿದೆ. ಸೋಂಕು ದುಪ್ಪಟ್ಟು ಆಗುವಲ್ಲಿನ ದಿನಗಳ ಅಂತರ ಸುಮಾರು ೧೯ ದಿನಗಳಿಗೆ ಏರಿದೆ. ಲಾಕ್ ಡೌನ್‌ಗೆ ಮುನ್ನ ಇದು ದಿನಗಳಾಗಿದ್ದವು ಎಂದು ಹರ್ಷವರ್ಧನ್ ಹೇಳಿದರು.

ವಿಶ್ವದಲ್ಲಿ ಕೊರೋನಾ ಅತಿಬಾಧಿತ ದೇಶಗಳ ಸಾಲಿನಲ್ಲಿ ಭಾರತವು ೪ನೇ ಸ್ಥಾನದಲ್ಲಿದೆ. ಅತ್ಯಧಿಕ ಸೋಂಕು ಇರುವ ಅಮೆರಿಕ ಮೊದಲ ಸ್ಥಾನದಲ್ಲಿ ಇದ್ದರೆ, ಬ್ರೆಜಿಲ್ ಮತ್ತು ರಶ್ಯಾ ಎರಡು ಮತ್ತು ಮೂರನೇ ಸಾಲಿನಲ್ಲಿವೆ. ಆದರೆ ಒಟ್ಟು ಸಾವಿನ ಸಂಖ್ಯೆಯನ್ನು ಗಮನಿಸಿದರೆ ಭಾರತವು ೮ನೇ ಸ್ಥಾನದಲ್ಲಿದೆ. ನಾಲ್ಕು ರಾಷ್ಟ್ರಗಳಲ್ಲಿ ರಶ್ಯಾದಲ್ಲಿ ಮಾತ್ರವೇ ಕಡಿಮೆ ಸಾವುಗಳಿವೆ, ಆದರೆ ಅಲ್ಲೂ ಸಾವಿನ ಸಂಖ್ಯೆ ಭಾರತಕ್ಕಿಂತ ಹೆಚ್ಚಿದೆ. ಭಾರತದಲ್ಲಿ ಪ್ರಸ್ತುತ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ ೧೫,೬೮೫ ಎಂದು ಆರೋಗ್ಯ ಸಚಿವಾಲಯದ ಒದಗಿಸಿರುವ ಇತ್ತೀಚಿನ ಅಂಕಿಸಂಖ್ಯೆ ತಿಳಿಸಿದೆ.

ದೇಶದಲ್ಲಿ ಸೋಂಕು ದುಪ್ಪಟ್ಟಾಗುವ ದಿನಗಳ ಅಂತಹ ಹೆಚ್ಚಿದೆ ಎಂಬುದಾಗಿ ಸರ್ಕಾರ ಪ್ರತಿಪಾದಿಸಿದ್ದರೂ, ಒಂದು ಲಕ್ಷದ ಗಡಿದಾಟಲು ೧೧೦ ದಿನಗಳನ್ನು ತೆಗೆದುಕೊಂಡಿದ್ದ ದೇಶ, ಜೂನ್ ೨೭ರಂದು ಐದು ಲಕ್ಷದ ಗಡಿದಾಟಲು ತೆಗೆದುಕೊಂಡ ದಿನಗಳ ಸಂಖ್ಯೆ ಕೇವಲ ೩೯ ಎಂಬುದು ಕಳವಳ ಹುಟ್ಟಿಸಿರುವ ವಿದ್ಯಮಾನವಾಗಿದೆ. ,೧೮,೪೧೮ರಷ್ಟು ಸೋಂಕಿನ ಪ್ರಕರಣಗಳು ಜೂನ್ ೧ರ ಬಳಿಕ ಕೇವಲ ೧೭ ದಿನಗಳಲ್ಲಿ ದಾಖಲಾಗಿವೆ ಎಂದು ಮಾಹಿತಿಗಳು ಹೇಳಿವೆ.

ಭಾರತದಲ್ಲಿ ಪ್ರಸ್ತುತ ,೯೭,೩೮೭ ಸಕ್ರಿಯ ಪ್ರಕರಣಗಳಿವೆ. ಆದರೆ ಸೋಂಕು ಹೆಚ್ಚಳದ ಪ್ರವೃತ್ತಿ ಇಳಿಕೆಯ ಲಕ್ಷಣವನ್ನೇ ತೋರಿಸುತ್ತಿಲ್ಲ. ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇರುವುದು ಮತ್ತು ಚೇತರಿಕೆ ಪ್ರಮಾಣ ಹೆಚ್ಚಾಗಿರುವುದು ಆಶಾದಾಯಕಬೆಳ್ಳಿರೇಖೆಯನ್ನು ತೋರಿಸಿದೆ. ಶನಿವಾರದವರೆಗೆ ,೯೫,೮೮೦ ಮಂದಿ ಚೇತರಿಸಿದ್ದಾರೆ.

ಚೇತರಿಕೆಯ ವಿಚಾರದಲ್ಲೂ ಅಮೆರಿಕ, ಬ್ರೆಜಿಲ್ ಮತ್ತು ರಶ್ಯಾದ ಬಳಿಕ ಭಾರತ ೪ನೇ ಸ್ಥಾನದಲ್ಲಿದೆ. ಹೆಚ್ಚಿನ ಚೇತರಿಕೆಯ ಪ್ರಮಾಣ ಕೆಲವೊಮ್ಮೆ ದಾರಿ ತಪ್ಪಿಸುವ ಸಾಧ್ಯತೆ ಇದೆ. ಏಕೆಂದರೆ ಅದು ಪ್ರದೇಶದ ಹೆಚ್ಚು ಸಂಖ್ಯೆಯ ಪಾಸಿಟಿವ್ ಪ್ರಕರಣಗಳಿಗೆ ನೇರವಾಗಿ ಸಂಬಂಧಿರುತ್ತದೆ ಎಂದು ತಜ್ಞರು ಬೊಟ್ಟು ಮಾಡಿದ್ದಾರೆ. ಉದಾಹರಣೆಗೆ ಅಮೆರಿಕದಲ್ಲಿ ಪ್ರಸ್ತುತ ಚೇತರಿಕೆಯ ಪ್ರಮಾಣ ಶೇಕಡಾ ೪೦ರಷ್ಟಿದೆ. ಆದರೆ ಅಮೆರಿಕದಲ್ಲಿ ಸೋಂಕಿನ ಸಂಖ್ಯೆಯೂ ಅಧಿಕವಾಗಿದ್ದು, ಪ್ರಸ್ತುತ ೨೫,೫೩,೦೬೮ ಸೋಂಕಿತರಿದ್ದಾರೆ. ೧೨,೮೦,೦೫೪ ಪ್ರಕರಣಗಳು ಇರುವ ಬ್ರೆಜಿಲ್‌ನಲ್ಲಿ ಅಮೆರಿಕಕ್ಕಿಂತ ಉತ್ತಮ ಚೇತರಿಕೆ ಪ್ರಮಾಣವಿದ್ದು ಇಲ್ಲಿನ ಚೇತರಿಕೆ ಪ್ರಮಾಣ ಶೇಕಡಾ ೫೪ರಷ್ಟಿದೆ. ಅಂಕಿಸಂಖ್ಯೆಗಳ ಪ್ರಕಾರ ಬ್ರೆಜಿಲ್‌ನಲ್ಲಿ ೬೯,೦೦೦  ಮಂದಿ ಚೇತರಿಸಿದ್ದಾರೆ.

ಒಂದು ಮಿಲಿಯನ್ ಅಥವಾ ೧೦ ಲಕ್ಷ ಜನಸಂಖ್ಯೆಗೆ ಒಟ್ಟು ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಭಾರತವು ಅಮೆರಿಕ, ಬ್ರೆಜಿಲ್ ಮತ್ತು ರಶ್ಯಾಕ್ಕಿಂತ ಉತ್ತಮ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಒಂದು ದಶಲಕ್ಷ ಜನಸಂಖ್ಯೆಗೆ ,೭೧೪ ಪ್ರಕರಣಗಳಿದ್ದರೆ, ಬ್ರೆಜಿಲ್‌ನಲ್ಲಿ ,೦೨೩ ಪ್ರಕರಣಗಳಿವೆ. ರಶ್ಯಾದಲ್ಲಿ ಸಂಖ್ಯೆ ,೩೦೧ ಆಗಿದ್ದರೆ, ಭಾರತದಲ್ಲಿ ಇದು ಕೇವಲ ೩೭೦. ವಿಶ್ವದಲ್ಲೇ ಭಾರತದ ಸಂಖ್ಯೆ ಅತ್ಯಂತ ಕಡಿಮೆ. ಮಾನದಂಡದ ಪ್ರಕಾರ ಭಾರತವು ೨೧೦ ಕೊರೋನಾಸೋಂಕಿತ ರಾಷ್ಟ್ರಗಳ ಸಾಲಿನಲ್ಲಿ ೧೧೭ನೇ ಸ್ಥಾನದಲ್ಲಿದೆ.

ಆದಾಗ್ಯೂ ಇದನ್ನು ದಶಲಕ್ಷ ಜನಸಂಖ್ಯೆಯ ಮೇಲೆ ನಡೆಸಿದ ಪರೀಕ್ಷೆಗಳನ್ನು ಆಧರಿಸಿ ನೋಡಬೇಕು ಎಂದು ತಜ್ಞರು ಹೇಳುತ್ತಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ಭಾರತದಲ್ಲಿ ೭೯,೯೬,೭೦೭ ಮಾದರಿಗಳನ್ನು ಜೂನ್ ೨೬ರವರೆಗೆ ಪರೀಕ್ಷಿಸಲಾಗಿದೆ. ಶುಕ್ರವಾರ ,೨೦,೪೭೯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಂಕು ಆರಂಭವಾದಂದಿನಿಂದ ಇಲ್ಲಿಯವರೆಗೆ ನಡೆದ ಪರೀಕ್ಷೆಗಳಲ್ಲಿ ಶುಕ್ರವಾರ ನಡೆಸಿದ ಪರೀಕ್ಷೆಯೇ ಅತ್ಯಧಿಕ. ಪರೀಕ್ಷೆಗಳನ್ನು ಹೆಚ್ಚಿಸಿದ್ದರ ಹೊರತಾಗಿಯೂ ಭಾರತವು ದಶಲಕ್ಷ ಜನಸಂಖ್ಯೆಯ ಮೇಲೆ ನಡೆಸಿದ ಪರೀಕ್ಷೆಯಲ್ಲಿ ೧೩೯ನೇ ಸ್ಥಾನದಲ್ಲಿದೆ. ಅಮೆರಿಕದ ದಶಲಕ್ಷ ಜನಸಂಖ್ಯೆಗೆ ೯೪,೭೩೩ ಪರೀಕ್ಷೆ, ಬ್ರೆಜಿಲ್‌ನ ದಶಲಕ್ಷ ಜನಸಂಖ್ಯೆಗೆ ೧೩,೭೬೬ ಪರೀಕ್ಷೆ ಮತ್ತು ರಶ್ಯಾದ ದಶಲಕ್ಷ ಜನಸಂಖ್ಯೆಗೆ ,೨೮,೧೪೦ ಪರೀಕ್ಷೆಗೆ ಹೋಲಿಸಿದರೆ ಭಾರತವು ದಶಲಕ್ಷ ಜನಸಂಖ್ಯೆಗೆ ನಡೆಸಿದ ,೭೯೫ ಪರೀಕ್ಷೆಗಳು ಗಮನಾರ್ಹವಾಗಿ ಕೆಳಮಟ್ಟದಲ್ಲಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೯೯,೫೨,೨೨೬, ಸಾವು ,೯೭,೯೩೮ ಚೇತರಿಸಿಕೊಂಡವರು- ೫೩,೯೪,೬೭೬

ಅಮೆರಿಕ ಸೋಂಕಿತರು ೨೫,೫೪,೮೬೯, ಸಾವು ,೨೭,೬೯೧

ಸ್ಪೇನ್ ಸೋಂಕಿತರು ,೯೪,೯೮೫, ಸಾವು ೨೮,೩೩೮

ಇಟಲಿ ಸೋಂಕಿತರು ,೩೯,೯೬೧, ಸಾವು ೩೪,೭೦೮

ಜರ್ಮನಿ ಸೋಂಕಿತರು ,೯೪,೪೪೫, ಸಾವು ,೦೨೬

ಚೀನಾ ಸೋಂಕಿತರು ೮೩,೪೮೩, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೦೯,೩೬೦, ಸಾವು ೪೩,೪೧೪

ಭಾರತ ಸೋಂಕಿತರು ,೧೮,೯೩೬, ಸಾವು ೧೫,೮೮೦

ಅಮೆರಿಕದಲ್ಲಿ ೫೧, ಇರಾನಿನಲ್ಲಿ ೧೨೫, ಬೆಲ್ಜಿಯಂನಲ್ಲಿ , ಇಂಡೋನೇಷ್ಯ ೩೭, ನೆದರ್ ಲ್ಯಾಂಡ್ಸ್‌ನಲ್ಲಿ , ರಶ್ಯಾದಲ್ಲಿ ೧೮೮, ಪಾಕಿಸ್ತಾನದಲ್ಲಿ ೭೩, ಮೆಕ್ಸಿಕೋದಲ್ಲಿ ೭೧೯, ಭಾರತದಲ್ಲಿ ೧೯೧, ಒಟ್ಟಾರೆ ವಿಶ್ವಾದ್ಯಂತ ,೮೫೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೦೨,೯೪೫ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement