Saturday, June 27, 2020

ಲಡಾಖ್: ಅಸಹಜ ಸ್ಥಿತಿ ಮುಂದುವರಿಕೆ

ಲಡಾಖ್:  ಅಸಹಜ ಸ್ಥಿತಿ ಮುಂದುವರಿಕೆ

ನವದೆಹಲಿ: ಪೀಪಲ್ಸ್ ಲಿಬರೇಶನ್ ಆರ್ಮಿಯು ಜೂನ್ ೬ರ ಒಪ್ಪಂದದ ಪ್ರಕಾರ ಉದ್ವಿಗ್ನತೆ ಶಮನಗೊಳಿಸುವ ಮತ್ತು ಪಶ್ಚಿಮ ವಿಭಾಗದ ,೫೯೭ ಕಿಮೀ ನೈಜ ನಿಯಂತ್ರಣ ರೇಖೆಯಲ್ಲಿನ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಬದ್ಧತೆ ಈಡೇರಿಸುವುದಕ್ಕಾಗಿ ಭಾರತ ಕಾಯುತ್ತಿದೆ. ಹೀಗಾಗಿ ಪೂರ್ವ ಲಡಾಖ್‌ನಲ್ಲಿ ಅಸಹಜ ಸ್ಥಿತಿ ಹಾಗೆಯೇ ಮುಂದುವರೆದಿದೆ.

ಪೂರ್ವ ಲಡಾಖ್‌ನಲ್ಲಿ ಗಡಿಯಲ್ಲಿ  ಉಭಯ ಸೇನೆಗಳೂ ಮುಂಚೂಣಿಯಲ್ಲಿ ಇದ್ದರೂ, ನಾಲ್ಕು ಪಾಯಿಂಟ್‌ಗಳ ಪೈಕಿ ಎರಡರಲ್ಲಿ ಉಭಯ ಕಡೆಗಳಲ್ಲೂ ಉದ್ವಿಗ್ನತೆ ಕಡಿಮೆಗೊಳಿಸಲಾಗುತ್ತಿದೆ ಎಂಬ ವರದಿಗಳಿವೆ. ಆದಾಗ್ಯೂ ಉಭಯ ಕಡೆಗಳೂ ಉನ್ನತ ಸೇನಾ ಕಟ್ಟೆಚ್ಚರವನ್ನು ಮುಂದುವರೆಸಿವೆ.

ಗಡಿ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ. ಯಥಾಸ್ಥಿತಿ ಸ್ಥಾಪನೆಯ ಹೊಣೆಗಾರಿಕೆ ಪಿಎಲ್‌ಎ ಮೇಲೆಯೇ ಇದೆ. ಏಕೆಂದರೆ ಅದು ಕಳೆದ ತಿಂಗಳು ಎಲ್ಲ ಒಪ್ಪಂದಗಳನ್ನು ಮತ್ತು ವಿಶ್ವಾಸ ನಿರ್ಮಾಣದ ಕ್ರಮಗಳನ್ನು ಕೂಡಾ ಉಲ್ಲಂಘಿಸಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಯತ್ನಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಹೊಸ ಸ್ಥಿತಿಯನ್ನೇ ಮಾಮೂಲು ಸ್ಥಿತಿ ಎಂಬುದಾಗಿ ಪಿಎಲ್‌ಎ ಪ್ರತಿಪಾದಿಸುವಂತಿಲ್ಲ ಮತ್ತು ಪಿಎಲ್ ಶಾಂತಿ ಸ್ಥಾಪನೆಗಾಗಿ ತನ್ನ ಹಿಂದಿನ ನೆಲೆಗಳಿಗೆ ವಾಪಸಾಗಬೇಕು ಮತ್ತು ದ್ವಿಪಕ್ಷೀಯ ಬಾಂಧವ್ಯಗಳನ್ನು ಪುನಸ್ಥಾಪನೆ ಮಾಡಬೇಕು ಎಂಬುದಾಗಿ ಭಾರತ ಬಯಸುತ್ತದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚೀನಾಕ್ಕೆ ಖಂಡತುಂಡವಾಗಿ ತಿಳಿಸಿದೆ.

No comments:

Advertisement