Wednesday, June 24, 2020

ಭಾರತದಿಂದ ಪ್ರಚೋದನೆ: ಚೀನಾ ಹೊಸ ಆರೋಪ

ಭಾರತದಿಂದ ಪ್ರಚೋದನೆ: ಚೀನಾ ಹೊಸ ಆರೋಪ

ಬೀಜಿಂಗ್: ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು ಗಲ್ವಾನ್ ಕಣಿವೆಯಲ್ಲಿ ಜೂನ್ ೧೫ರಂದು ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ 2020 ಜೂನ್ 24ರ ಬುಧವಾರ ಅವಳಿ ರಾಜತಾಂತ್ರಿಕ ದೂಷಣೆಗಳನ್ನು ಮಾಡಿದವು ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಭಾರತೀಯ ಮಾಧ್ಯಮಗಳು ಘಟನೆ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಆಪಾದಿಸಿದವು.

ಉದ್ವಿಗ್ನತೆಯನ್ನು ಕಡಿಮೆಗೊಳಿಸಲುಮತ್ತುಭಿನ್ನಾಭಿಪ್ರಾಯಗಳನ್ನು ಸಮರ್ಪಕವಾಗಿ ನಿಭಾಯಿಸಲುಜೂನ್ ೨೨ರಂದು ಸೇನಾ ಕಮಾಂಡರ್ ಮಟ್ಟದ ಮಾತುಕತೆಗಳನ್ನು ನಡೆಸಿದ ಒಂದು ದಿನದ ಬಳಿ ಉಭಯ ಸಚಿವಾಲಯಗಳು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಘರ್ಷಣೆಯನ್ನು ಪ್ರಚೋದಿಸಿದ್ದಕ್ಕಾಗಿ ಭಾರತವನ್ನು ಪ್ರತ್ಯೇಕವಾಗಿ ದೂಷಿಸಿದವು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ರಶ್ಯಾ, ಭಾರತ ಮತ್ತು ಚೀನಾ ವಿದೇಶಾಂಗ ಸಚಿವರ ಸಭೆಯ ವೇಳೆಯಲ್ಲಿ ಅಂತಾರಾಷ್ಟ್ರೀಯ ನಿಯಮಗಳ ಮಹತ್ವದ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಚೀನೀ ವಿದೇಶಾಂಗ ಸಚಿವಾಲಯವುಅಂತಾರಾಷ್ಟ್ರೀಯ ನಿಯಮಗಳ ಉಲ್ಲೇಖ ಮಾಡಿದೆ ಎಂದು ಭಾವಿಸಲಾಗಿದೆ.

ಗಲ್ವಾನ್ ಘರ್ಷಣೆಯಲ್ಲಿ ಭಾರತದ ೨೦ ಮಂದಿ ಯೋಧರು ಹುತಾತ್ಮರಾಗಿದ್ದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್) ಅಸಂಖ್ಯಾತ ಸೈನಿಕರು ಸಾವನ್ನಪ್ಪಿದ್ದಾರೆ.

ಘಟನೆಯ ಬಗೆಗಿನ ಚೀನಾದ ಒಂದು ಏಕಮುಖ ವಿವರಣೆಯನ್ನು ಭಾರತ ತಳ್ಳಿಹಾಕಿದ್ದರ ಜೊತೆಗೆ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಹೊಸದಾಗಿ ಮಾತುಕತೆ ಆರಂಭವಾಗಿರುವುದರ ಹೊರತಾಗಿಯೂ, ವಿವಾದದ ಅಂಶಗಳನ್ನು ಚೀನೀ ವಿದೇಶಾಂಗ ಸಚಿವಾಲಯವು ಪದೇ ಪದೇ ಎತ್ತುತ್ತಿರುವುದು ಏಕೆ ಎಂಬ ಪ್ರಶ್ನೆಗೆನನ್ನ ಈದಿನದ ಹೇಳಿಕೆಯು ಸಂಪೂರ್ಣ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡುವಂತಹುದು ಮತ್ತು ಪ್ರತಿಯೊಬ್ಬರಿಗೂ ಸತ್ಯವನ್ನು ತಿಳಿಸುವಂತಹುದು. ಭಾರತದಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಮಾಧ್ಯಮ ಕೆಲವು ಸುಳ್ಳು ಸುದ್ದಿಗಳನ್ನು ಹರಡುತ್ತಿವೆಯಾದ್ದರಿಂದ ನಾವು ಹೇಳಿಕೆ ನೀಡಿದ್ದೇವೆಎಂದು ಝಾವೋ ಲಿಜಿಯನ್ ಹೇಳಿದರು.

ಭಾರತೀಯ ಸೇನೆಯಲ್ಲಿ ಸಂಭವಿಸಿರುವ ಸಾವು ನೋವಿನ ದುಪ್ಪಟ್ಟು ಸಂಖ್ಯೆಯ ಸಾವು ನೋವು ಪಿಎಲ್ ಕಡೆಯಲ್ಲಿ ಆಗರಬಹುದು ಎಂಬುದಾಗಿ ಭಾರತದ ಸಚಿವ ವಿಕೆ ಸಿಂಗ್ ಅವರು ನೀಡಿರುವ ಹೇಳಿಕೆ ಸುಳ್ಳು ಸುದ್ದಿ ಎಂದು ಝಾವೋ ಮಂಗಳವಾರ ನಿರಾಕರಿಸಿದ್ದರು.

ಸಚಿವಾಲಯದ ಸುದ್ದಿಗೋಷ್ಠಿ ಮುಗಿದ ಬಳಿಕ ಹೇಳಿಕೆಯನ್ನು ಓದಿ ಹೇಳಿದ ಝಾವೋ, ’ಮೇ ೬ರ ನಸುಕಿನಲ್ಲಿ ಭಾರತದ ಗಡಿ ಪಡೆಗಳು ಕತ್ತಲ ವೇಳೆಯಲ್ಲಿ ಚೀನೀ ಭಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಘಟನೆಗೆ ಪ್ರಚೋದನೆ ನೀಡಿದವು. ಚೀನೀ ಪಡೆಗಳು ತಮ್ಮ ಪ್ರತಿಕ್ರಿಯೆಯನ್ನು ಬಲ ಪಡಿಸಲು ಮತ್ತು ಗಡಿ ಪ್ರದೇಶಗಳ ನಿರ್ವಹಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿ ಬಂದಿತುಎಂದು ಹೇಳಿದ್ದರು.

ಎರಡನೆಯದಾಗಿ ಭಾರತದ ಕಡೆಯವರು ದ್ವಿಪಕ್ಷೀಯ ಒಪ್ಪಂದವನು ಉಲ್ಲಂಘಿಸುವ ಮೂಲಕ ಮೊದಲ ಪ್ರಚೋದನೆ ನೀಡಿದರು. ನಮ್ಮ ರಾಜತಾಂತ್ರಿಕ ಮತ್ತು ಸೇನಾ ಪ್ರಯತ್ನಗಳ ಬಳಿಕ ಭಾರತದ ಕಡೆಯವರು ಗಲ್ವಾನ್ ಕಣಿವೆಯಿಂದ ತಮ್ಮ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲು ಮೊದಲು ಒಪ್ಪಿದರು ಮತ್ತು ಹಾಗೆ ಮಾಡಿದರು. ಅಲ್ಲದೆ ಚೀನಾ ಕಡೆಯ ಮನವಿಯಂತೆ ಅವರು ತಮ್ಮ ಸವಲತ್ತುಗಳನ್ನು ಕಿತ್ತು ಹಾಕಿzರುಎಂದು ಝಾವೋ ನುಡಿದರು.

ಬಳಿಕ ಝಾವೋ ಘಟನಾವಳಿಗಳ ಒಂದೊಂದೇ ವಿವರಗಳನ್ನು ನೀಡಿದರು.

ಜೂನ್ ೬ರಂದು ಕಮಾಂಡರ್ಗಳ ಮೊದಲ ಸಭೆಯ ವೇಳೆಯಲ್ಲಿ ಗಲ್ವಾನ್ ಕಣಿವೆಯಲ್ಲಿ ಪಹರೆ ಮತ್ತು ಕಟ್ಟಡ ನಿರ್ಮಾಣ ಸಲುವಾಗಿ ಯಾವುದೇ ಅತಿಕ್ರಮಣ ನಡೆಸುವುದಿಲ್ಲ ಎಂದು ಭಾರತ ಬದ್ಧತೆ ವ್ಯಕ್ತ ಪಡಿಸಿತು. s ಕಡೆಗಳೂ ಗಲ್ವಾನ್ ನದಿಯ ಅಳಿಯವೆಯ ಉಭಯ ಕಡೆಗಳಲ್ಲಿ ವೀಕ್ಷಣಾ ಠಾಣೆಗಳನ್ನು ನಿರ್ಮಿಸಲು ಎರಡೂ ಕಡೆಗಳು ಒಪ್ಪಿದವು. ಆದರೆ ಭಾರತ ಒಪ್ಪಂದಗಳಿಂದ ಹಿಂದೆ ಸರಿಯಿತು ಮತ್ತು ಚೀನಾಕ್ಕೆ ಚೀನಾದ ಠಾಣೆಗಳನ್ನು ನಾಶಪಡಿಸಲು ಸೂಚಿಸಿತು. ಅಲ್ಲದೆ ರೇಖೆಯನ್ನು ದಾಟುವ ಮೂಲಕ ಘರ್ಷಣೆಗೆ ಪ್ರಚೋದನೆ ನೀಡಿತುಎಂದು ಅವರು ನುಡಿದರು.

ಝಾವೋ ಪ್ರತಿಪಾದನೆಗಳಿಗೆ ಭಾರತದ ಕಡೆಯಿಂದ ಯಾವುದೇ ತತ್ ಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಜೂನ್ ೧೫ರಂದು ಸಂಜೆ ಭಾರತದ ಮುಂಚೂಣಿ ಪಡೆಗಳು ಕಮಾಂಡರ್ ಮಟ್ಟದ ಸಭೆಯಲ್ಲಿ ರೂಪಿಸಲಾದ ಒಪ್ಪಂದಕ್ಕೆ ವಿರುದ್ಧವಾಗಿ ಎಲ್ಎಸಿಯನ್ನು ದಾಟಿದವು ಮತ್ತು ಚೀನಾ ಕಡೆಯ ಟೆಂಟ್ಗಳನ್ನು ನಾಶಪಡಿಸಿದವು ಎಂದು ಝಾವೋ ಹೇಳಿದರು.

ಚೀನಾದ ಗಡಿ ಪಡೆಗಳು ಶಿಷ್ಟಾಚಾರದಂತೆ ಮಾತುಕತೆ ನಡೆಸಲು ಹೊರಟಾಗ ಭಾರತದ ಕಡೆಯವರು ದಿಢೀರನೆ ಚೀನೀ ಸಿಬ್ಬಂದಿಯ ಮೇಲೆ ಹಿಂಸಾತ್ಮಕ ದಾಳಿ ನಡೆಸಿದರು. ಇದು ಭೀಕರ ಘರ್ಷಣೆಗಳಿಗೆ ಮತ್ತು ಸಾವುನೋವಿಗೆ ಕಾರಣವಾಯಿತು. ಭಾರತದ ಕಡೆಯ ಅಪಾಯಕಾರಿ ವರ್ತನೆಯು ಉಭಯ ರಾಷ್ಟ್ರಗಳ ನಡುವಣ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ಬಾಂಧವ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಮೂಲ ನಿಯಮಗಳ ಉಲ್ಲಂಘನೆಯಾಗಿದೆ. ಇದು ಗಂಭೀರವಾದದ್ದು ಮತ್ತು ತೀವ್ರ ಪರಿಣಾಮ ಬೀರುವಂತಹುದು ಎಂದು ಝಾವೋ ನುಡಿದರು.

ಚೀನಾ ರಕ್ಷಣಾ ಸಚಿವಾಲಯ ಕೂಡಾ ಪ್ರತ್ಯೇಕ ಹೇಳಿಕೆ ನೀಡಿ ಹಿಂದಿನ ಚೀನೀ ಹೇಳಿಕೆಗಳನ್ನು ಅಕ್ಷರಶಃ ಪುನರಾವರ್ತನೆ ಮಾಡಿತು.

ಘಟನೆಗೆ ಸಂಬಂಧಿಸಿದ ಚೀನಾ ವಿವರಣೆಯನ್ನು ಭಾರತವು ಈಗಾಗಲೇ ತಿರಸ್ಕರಿಸಿದೆ.

ಗಲ್ವಾನ್ ಕಣಿವೆ ಘರ್ಷಣೆಗೆ ಸಂಬಂಧಿಸಿದಂತೆ ಭಾರತವು ಜೂನ್ ೨೦ರಂದು ೨ನೇ ಬಾರಿಗೆ ತಿರಸ್ಕರಿಸಿದೆ.

No comments:

Advertisement