Wednesday, June 24, 2020

ರಿಸರ್ವ್ ಬ್ಯಾಂಕ್ ವಾಪ್ತಿಗೆ ೧೫೦೦ ಸಹಕಾರಿ ಬ್ಯಾಂಕುಗಳು

ರಿಸರ್ವ್ ಬ್ಯಾಂಕ್ ವಾಪ್ತಿಗೆ ೧೫೦೦ ಸಹಕಾರಿ ಬ್ಯಾಂಕುಗಳು

ನವದೆಹಲಿ: ದೇಶಾದ್ಯಂತ ಸುಮಾರು ಕೋಟಿ ಲಕ್ಷ ಖಾತೆದಾರರಿಂದ ಅಂದಾಜು ಲಕ್ಷ ಕೋಟಿ ರೂಪಾಯಿ ಮೌಲ್ಯದ ಠೇವಣಿಗಳನ್ನು ಹೊಂದಿರುವ ,೫೪೦ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ವ್ಯಾಪ್ತಿಗೆ ತರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರವು 2020 ಜೂನ್ 24ರ ಬುಧವಾರ ಅನುಮತಿ ನೀಡಿತು.

ಶೆಡ್ಯೂಲ್ಡ್ ಬ್ಯಾಂಕುಗಳ ಮಾದರಿಯಲ್ಲಿಯೇ ಸಹಕಾರಿ ಬ್ಯಾಂಕುಗಳೂ ಇನ್ನು ಮುಂದೆ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ ಠೇವಣಿದಾರರಿಗೆ ರಕ್ಷಣೆ ಲಭಿಸಲಿದ್ದು, ದುರುಪಯೋಗದ ಅವಕಾಶ ತಗ್ಗಲಿದೆ.

ಎಲ್ಲ ನಗರ ಸಹಕಾರಿ ಬ್ಯಾಂಕುಗಳು ಮತ್ತು ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆ ವ್ಯಾಪ್ತಿಗೆ ತರಲಾಗುತ್ತಿದೆ. ಸುಮಾರು ಕೋಟಿ ಲಕ್ಷ ಖಾತೆದಾರರಿಂದ ಸುಮಾರು ಲಕ್ಷ ಕೋಟಿ ರೂಪಾಯಿ ಮೌಲ್ಯದ ಠೇವಣಿಗಳನ್ನು ಇಂತಹ ಬ್ಯಾಂಕುಗಳು ಹೊಂದಿವೆ. ಬ್ಯಾಂಕುಗಳ ಸಂಖ್ಯೆ ಸುಮಾರು ೧೫೪೦ರಷ್ಟು ಇವೆ ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದರು.

ಇದಕ್ಕೆ ಮುನ್ನ ವರ್ಷ ಫೆಬ್ರುವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹಕಾರಿ ಬ್ಯಾಂಕುಗಳನ್ನು ಆರ್ಬಿಐಯ ಮೇಲ್ವಿಚಾರಣೆ ವ್ಯಾಪ್ತಿಗೆ ತರುವ ಸರ್ಕಾರದ ಇಂಗಿತವನ್ನು ಪ್ರಕಟಿಸಿದ್ದರು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಇದನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದರು.

ಸಂಬಂಧವಾಗಿ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಬುಧವಾರ ಹೊರಡಿಸಿದೆ ಎಂದು ಜಾವಡೇಕರ್ ಹೇಳಿದರು.

ಹೊಸ ವ್ಯವಸ್ಥೆಯ ಅಡಿಯಲ್ಲಿ ಇಂತಹ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಸಿಇಒ ನೇಮಕಕ್ಕೆ ನಿಯಂತ್ರಣ ಪ್ರಾಧಿಕಾರವಾದ ಆರ್ಬಿಐಯ ಪೂರ್ವಭಾವಿ ಒಪ್ಪಿಗೆ ಪಡೆಯಬೇಕಾಗುತ್ತದೆ.

ಸಾರ್ವಜನಿಕ ಹಣವನ್ನು ಇಟ್ಟುಕೊಳ್ಳುವ ಬ್ಯಾಂಕುಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸರ್ಕಾರ ಮುನ್ನ ಹೇಳಿತ್ತು. ಇಂತಹ ಬ್ಯಾಂಕುಗಳಲ್ಲಿ ಆಗಾಗ ದುರುಪಯೋಗ, ಭ್ರಷ್ಟಾಚಾರದ ಪರಿಣಾಮವಾಗಿ ಹಗರಣಗಳು ಸಂಭವಿಸಿದ ನಿರ್ದಶನಗಳಿವೆ.

ಪುಸ್ತಕಗಳಲ್ಲಿ ಲೆಕ್ಕ ತಪ್ಪಿಸುವುದು, ಸಾಲಗಳ ದುರುಪಯೋಗ ಇತ್ಯಾದಿಗಳ ಮೂಲಕ ಇಂತಹ ಬ್ಯಾಂಕುಗಳಲ್ಲಿ ವಂಚನೆಗಳ ಹಲವಾರು ಪ್ರಕರಣಗಳು ನಡೆದಿದ್ದು ಠೇವಣಿಗಳಿಗೆ ಅಪಾಯ ಉಂಟಾಗಿ ರಾಷ್ಟ್ರದ ಹಣಕಾಸು ವ್ಯವಸ್ಥೆಯ ಸ್ಥಿರತೆಗೆ ಧಕ್ಕೆ ಉಂಟಾದ ಪ್ರಕರಣಗಳನ್ನು ಅನುಸರಿಸಿ ಸರ್ಕಾರ ಕ್ರಮ ಕೈಗೊಂಡಿದೆ.

No comments:

Advertisement