My Blog List

Wednesday, June 24, 2020

ಕೊರೋನಾ: ದೆಹಲಿಯಲ್ಲಿ ಪ್ರತಿ ಮನೆ ಪರೀಕ್ಷೆ

ಕೊರೋನಾ: ದೆಹಲಿಯಲ್ಲಿ ಪ್ರತಿ ಮನೆ ಪರೀಕ್ಷೆ

ನವದೆಹಲಿ: ಒಂದೇ ದಿನದಲ್ಲಿ ,೯೪೭ ಹೊಸ ಸೋಂಕುಗಳು ದೃಢಪಡುವುದರೊಂದಿಗೆ ದೆಹಲಿಯ ಕೋವಿಡ್-೧೯ ಪ್ರಕರಣಗಳು ೬೬,೦೦೦ರ ಗಡಿ ದಾಟಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹೊಸ ತಂತ್ರವನ್ನು ರೂಪಿಸಿದೆ.

ಜೂನ್ ೩೦ ರೊಳಗೆ ಕಂಟೈನ್ಮೆಂಟ್ ವಲಯಗಳಲ್ಲಿನ ಎಲ್ಲಾ ಮನೆಗಳನ್ನು ಸ್ಕ್ರೀನಿಂಗ್ ಮಾಡಲಾಗುವುದು ಮತ್ತು ಜುಲೈ ೬ರ ವೇಳೆಗೆ ರಾಷ್ಟ್ರ ರಾಜಧಾನಿಯ ಪ್ರತಿಯೊಂದು ಮನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಜ್ರಿವಾಲ್ ನಡುವಿನ ಸಭೆಗಳ ನಂತರ ಬಿಡುಗಡೆ ಮಾಡಲಾದ  ಹೊಸ ಕೋವಿಡ್ ಹತೋಟಿ ಯೋಜನೆಯ ಭಾಗವಾಗಿ ಸರ್ಕಾರ 2020 ಜೂನ್ 24ರ ಬುಧವಾರ ತಿಳಿಸಿತು.

ಕಳೆದ ವಾರ ಶುಕ್ರವಾರ ಮತ್ತು ಭಾನುವಾರದ ನಡುವೆ ,೦೦೦ ಅಥವಾ ಹೆಚ್ಚಿನ ಹೊಸ ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿವೆ. ಸೋಮವಾರ ನಗರದಲ್ಲಿ ,೯೦೯ ಪ್ರಕರಣಗಳು ದಾಖಲಾಗಿವೆ.

ಕಳೆದ ೨೪ ಗಂಟೆಗಳಲ್ಲಿ ಅರವತ್ತೆಂಟು ಸಾವು-ನೋವುಗಳು ದಾಖಲಾಗಿವೆ ಎಂದು ದೆಹಲಿ ಆರೋಗ್ಯ ಇಲಾಖೆಯ ಬುಲೆಟಿನ್ ಮಂಗಳವಾರ ತಿಳಿಸಿದೆ.

ಕೊರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ,೩೦೧ಕ್ಕೆ ಏರಿದೆ ಮತ್ತು ಒಟ್ಟು ಪ್ರಕರಣಗಳ ಸಂಖ್ಯೆ ೬೬,೬೦೨ಕ್ಕೆ ಏರಿದೆ ಎಂದು ಅದು ಹೇಳಿದೆ.

ಕೋವಿಡ್-೧೯ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ದೆಹಲಿಯಲ್ಲಿ ಸೋಮವಾರ ,೨೩೩ಕ್ಕೆ ಏರಿದೆ. ದೆಹಲಿಯ ಪರಿಷ್ಕೃತ ಕೋವಿಡ್ ಹತೋಟಿ ಯೋಜನೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಬುಲೆಟಿನ್ ತಿಳಿಸಿದೆ.

ಕೋವಿಡ್ -೧೯ ರೋಗಿಗಳ ಮೇಲ್ವಿಚಾರಣೆಗಾಗಿ ೬೮ ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ಶುಶ್ರೂಷಾ ಅಧಿಕಾರಿಗಳನ್ನು ನೇಮಿಸಲು ಆದೇಶ ಹೊರಡಿಸಲಾಗಿದೆ ಎಂದು ಅದು ಹೇಳಿದೆ.

ಬುಲೆಟಿನ್ ಪ್ರಕಾರ, ದೆಹಲಿಯಲ್ಲಿ ಸಕ್ರಿಯ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೨೪,೯೮೮ ಆಗಿದೆ. ಒಟ್ಟು ೩೯,೩೧೩ ರೋಗಿಗಳು ಚೇತರಿಸಿ ಆಸ್ತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ,೦೧,೬೪೮ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಬುಲೆಟಿನ್ ತಿಳಿಸಿದೆ. ಮಂಗಳವಾರದ ಹೊತ್ತಿಗೆ, ರಾಷ್ಟ್ರ ರಾಜಧಾನಿಯಲ್ಲಿ ೨೬೧ ಧಾರಕ ವಲಯಗಳಿವೆ (ಕಂಟೈನ್ ಮೆಂಟ್ ಝೋನ್).

ಏತನ್ಮಧ್ಯೆ, ಪ್ರತಿ ಕೋವಿಡ್-೧೯ ರೋಗಿಗಳು ಕ್ಲಿನಿಕಲ್ ಮೌಲ್ಯಮಾಪನಕ್ಕಾಗಿ ಸರ್ಕಾರ ನಡೆಸುವ ಕೇಂದ್ರಕ್ಕೆ ಭೇಟಿ ನೀಡುವುದನ್ನು ಕಡ್ಡಾಯಗೊಳಿಸಿರುವ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಆಪ್ ಸರ್ಕಾರ ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಒತ್ತಾಯಿಸಿದೆ.

ಐಟಿಬಿಪಿ ನಿರ್ವಹಿಸಲಿರುವ ದಕ್ಷಿಣ ದೆಹಲಿಯ ರಾಧಾ ಸಾಮಿ ಸತ್ಸಂಗ್ ಬಿಯಾಸ್ (ಆರ್ಎಸ್ಎಸ್ಬಿ) ಆವರಣದಲ್ಲಿ ೧೦,೦೦೦ ಹಾಸಿಗೆಗಳ  ಕೋವಿಡ್-೧೯ ಸೌಲಭ್ಯವು ಜೂನ್ ೨೬ ರೊಳಗೆ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೈದ್ಯರು ಮತ್ತು ದಾದಿಯರಿಂದ ಮಾಹಿತಿ ಪಡೆದ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿಳಿಸಿದರು. ಕೇಂದ್ರವನ್ನು ನಡೆಸಲು ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆಯ ವೈದ್ಯ ಸಿಬ್ಬಂದಿಯ ನೆರವು ಕೋರಲಾಗಿದೆ.

ದೆಹಲಿಯು ಸೋಮವಾರ ತಮಿಳುನಾಡನ್ನು ಹಿಂದಿಕ್ಕುವ ಮೂಲಕ ಅತಿ ಹೆಚ್ಚು ಬಾಧಿತವಾದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಪ್ರದೇಶವಾಯಿತು. ೬೮ ಹೊಸ ಪ್ರಕರಣಗಳೊಂದಿಗೆ, ಸಾವಿನ ಸಂಖ್ಯೆ ಈಗ ,೩೦೧ಕ್ಕೆ ತಲುಪಿದೆ.

ಆಧ್ಯಾತ್ಮಿಕ ಸಂಸ್ಥೆ ಆರ್ಎಸ್ಎಸ್ಬಿಯ ವಿಸ್ತಾರವಾದ ಕ್ಯಾಂಪಸ್ನಲ್ಲಿ  ವ್ಯವಸ್ಥೆ ಮಾಡಲಾಗಿರುವ ಸೌಲಭ್ಯವನ್ನು ವೀಕ್ಷಿಸಲು ಮುಖ್ಯಮಂತ್ರಿಯವರು ಶಾ ಅವರನ್ನು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್-೧೯ ರೋಗಿಗಳಿಗಾಗಿ ೨೫೦ ಐಸಿಯು ಹಾಸಿಗೆಗಳನ್ನು ಹೊಂದಿರುವ ,೦೦೦ ಹಾಸಿಗೆಗಳ ಪೂರ್ಣ ಪ್ರಮಾಣದ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ನಿರ್ವಹಿಸುವ ಸೌಲಭ್ಯವು ಮುಂದಿನ ೧೦ ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಶಾ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.

"ಪ್ರಿಯ ಕೇಜ್ರಿವಾಲ್ ಜಿ, ಇದನ್ನು ದಿನಗಳ ಹಿಂದೆಯೇ ನಮ್ಮ ಸಭೆಯಲ್ಲಿ ನಿರ್ಧರಿಸಲಾಗಿದೆ ಮತ್ತು ದೆಹಲಿಯ ರಾಧಾ ಸ್ವಾಮಿ ಬಿಯಾಸ್ನಲ್ಲಿರುವ ೧೦,೦೦೦ ಹಾಸಿಗೆಗಳ ಕೋವಿಡ್ ಕೇರ್ ಸೆಂಟರನ್ನು ಐಟಿಬಿಪಿಗೆ ನಿರ್ವಹಿಸುವ ಕೆಲಸವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ವಹಿಸಿದೆ. ಕಾರ್ಯವು ಭರದಿಂದ ಸಾಗುತ್ತಿದೆ ಮತ್ತು ಹೆಚ್ಚಿನ ಭಾಗ ಸೌಲಭ್ಯವು ಜೂನ್ ೨೬ ರೊಳಗೆ ಕಾರ್ಯನಿರ್ವಹಿಸಲಿದೆ ಎಂದು ಶಾ ಹೇಳಿದರು.

ಶಾ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಕಷ್ಟದ ಸಂದರ್ಭಗಳಲ್ಲಿ ಆಪ್ ಸರ್ಕಾರ ಮತ್ತು ದೆಹರಿಗೆ  ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

"ದೇಶದ ಸೇನೆ, ವೈದ್ಯರು, ಸಾಮಾಜಿಕ ಸಂಸ್ಥೆಗಳು, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ - ಎಲ್ಲರೂ ದೆಹಲಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೊರೋನಾವನ್ನು ಸೋಲಿಸುತ್ತೇವೆ ಎಂದು ನನಗೆ ಖಾತ್ರಿಯಿದೆ. ಕಷ್ಟದ ಸಂದರ್ಭಗಳಲ್ಲಿ ದೆಹಲಿ ಸರ್ಕಾgವು ದೆಹಲಿ ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳುಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದರು.

ದೆಹಲಿಯಲ್ಲಿ ಇರಿಸಲಾಗಿರುವ ರೈಲ್ವೆ ಬೋಗಿಗಳಲ್ಲಿ ಕೋವಿಡ್-೧೯ ರೋಗಿಗಳಿಗೆ ವೈದ್ಯಕೀಯ ಆರೈಕೆ ಒದಗಿಸುವ ಬಗ್ಗೆ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ವಿವರಿಸಲಾಗಿದೆ ಎಂದು ಶಾ ಹೇಳಿದರು.

ಕೋವಿಡ್ ಆರೈಕೆ ಕೇಂದ್ರಗಳನ್ನು ನಿರ್ಮಿಸಲು ದೆಹಲಿ ಸರ್ಕಾರದ ವಿಲೇವಾರಿಯಲ್ಲಿ ಒಟ್ಟು ,೦೦೦ ಹೆಚ್ಚುವರಿ ಹಾಸಿಗೆಗಳನ್ನು ಈಗಾಗಲೇ ಇರಿಸಲಾಗಿದೆ ಎಂದು ಶಾ ಹೇಳಿದರು.

ಇತರ ರಾಜ್ಯಗಳಿಂದ ಚಿಕಿತ್ಸೆಗಾಗಿ ಜನರು ನಗರಕ್ಕೆ ಬರಲು ಪ್ರಾರಂಭಿಸಿದ ನಂತರ ಜುಲೈ ೩೧ ರೊಳಗೆ ದೆಹಲಿಗೆ . ಲಕ್ಷ ಹಾಸಿಗೆಗಳು ಬೇಕಾಗುತ್ತವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಕೋವಿಡ್-೧೯ ಪ್ರಕರಣಗಳು ಶೀಘ್ರವಾಗಿ ಹೆಚ್ಚಾಗುತ್ತವೆ ಎಂಬುದಾಗಿ ಅಂಕಿಸಂಖ್ಯೆಗಳು ತೋರಿಸಿರುವ ಹಿನ್ನೆಲೆಯಲ್ಲಿ ತಮ್ಮ ಸರ್ಕಾರವು "ಅಭೂತಪೂರ್ವ ಸವಾಲುಗಳನ್ನು"  ಎದುರಿಸುತ್ತಿದೆ ಎಂದು ಅವರು ಹೇಳಿzರು.

ಕಳೆದ ವಾರ, ಬೈಜಾಲ್ ಆದೇಶ ಹೊರಡಿಸಿದ್ದ ಆದೇಶದ ಪ್ರಕಾರ ಪ್ರತಿ ಹೊಸ ಕೋವಿಡ್-೧೯ ರೋಗಿಯು ಐದು ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗುವುದು ಕಡ್ಡಾಯವಾಗಿತ್ತು. ಆದರೆ, ಆಪ್ ಸರ್ಕಾರದ ವಿರೋಧದ ನಂತರ ಇದನ್ನು ತಿದ್ದುಪಡಿ ಮಾಡಲಾಯಿತು.

ಪ್ರತಿ ಕೊರೋನವೈರಸ್ ರೋಗಿಯು ಈಗ ಆಸ್ಪತ್ರೆಗೆ ದಾಖಲಾಗಬೇಕೇ ಅಥವಾ ಮನೆಯಲ್ಲಿಯೇ ಪ್ರತ್ಯೇಕತೆವಾಗಿರಬೇಕೆ ಎಂದು ಖಚಿತಪಡಿಸಿಕೊಳ್ಳಲು ಕ್ಲಿನಿಕಲ್ ಮೌಲ್ಯಮಾಪನಕ್ಕಾಗಿ ಆರೈಕೆ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

No comments:

Advertisement