My Blog List

Friday, June 19, 2020

ಚೀನಾ ನಮ್ಮ ಪ್ರದೇಶ ಪ್ರವೇಶಿಸಿಲ್ಲ, ಪೋಸ್ಟ್ ವಶಕ್ಕೆ ಪಡೆದಿಲ್ಲ: ಪ್ರಧಾನಿ ಮೋದಿ

ಚೀನಾ ನಮ್ಮ ಪ್ರದೇಶ ಪ್ರವೇಶಿಸಿಲ್ಲ, ಪೋಸ್ಟ್ ವಶಕ್ಕೆ ಪಡೆದಿಲ್ಲ: 
ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ಚೀನಿಯರು ನಮ್ಮ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ಅವರು ಯಾವುದೇ ನೆಲೆಯನ್ನು (ಪೋಸ್ಟನ್ನು) ವಶಕ್ಕೆ ಪಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನೀ ಪಡೆಗಳ ಜೊತೆ ಸಂಭವಿಸಿದ ಘರ್ಷಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸರ್ವ ಪಕ್ಷ ಸಭೆಯಲ್ಲಿ ಒತ್ತಿ ಹೇಳಿದರು.

"ಅವರು ನಮ್ಮ ಗಡಿಯಲ್ಲಿ ಒಳನುಗ್ಗಿಲ್ಲ, ಅಥವಾ ಯಾವುದೇ ನೆಲೆಯನ್ನೂ ಅವರು (ಚೀನಾ) ವಶಕ್ಕೆ ಪಡೆದಿಲ್ಲ್ಲ. ನಮ್ಮ ಇಪ್ಪತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಭಾರತ ಮಾತೆಗೆ ಸವಾಲು ಹಾಕಬಂದವರಿಗೆ ಸೂಕ್ತ ಪಾಠ ಕಲಿಸಲಾಗಿದೆ ಎಂದು ಪ್ರಧಾನಿ ನುಡಿದರು.

ಭಾರತದ ಶಕ್ತಿಯನ್ನು ಒತ್ತಿಹೇಳುತ್ತಾ, "ನಮ್ಮ ಒಂದು ಅಂಗುಲ ಭೂಮಿಯನ್ನು ಸಹ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಘೋಷಿಸಿದರು.

ಇಂದು, ನಮ್ಮ ಭೂಮಿಯ ಒಂದು ಅಂಗುಲ ಜಾಗದ ಮೇಲೆ ಸಹ ಯಾರೂ ಕಣ್ಣು ಹಾಕಲು ಸಾಧ್ಯವಿಲ್ಲ. ಅಂತಹ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಭಾರತದ ಸಶಸ್ತ್ರ ಪಡೆಗಳಿಗೆ ಒಂದೇ ಸಮಯದಲ್ಲಿ ಅನೇಕ ಕ್ಷೇತ್ರಗಳಿಗೆ ಚಲಿಸುವ ಸಾಮರ್ಥ್ಯವಿದೆಎಂದು ಪ್ರಧಾನಿ ಹೇಳಿದರು.

No comments:

Advertisement