Friday, July 10, 2020

ಏಷ್ಯಾದ ಅತಿದೊಡ್ಡ ಸೌರ ಸ್ಥಾವರ: ರಾಷ್ಟ್ರಾರ್ಪಣೆ ಮಾಡಿದ ಪ್ರಧಾನಿ ಮೋದಿ

ಏಷ್ಯಾದ ಅತಿದೊಡ್ಡ ರೇವಾ ಸೌರ ಸ್ಥಾವರ: 
ರಾಷ್ಟ್ರಾರ್ಪಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಸ್ಥಾಪಿಸಲಾಗಿರುವ ಏಷ್ಯಾದ ಅತಿದೊಡ್ಡ ರೇವಾ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಯು ರಾಜ್ಯಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸ್ವಚ್ಛ, ಖಂಡಿತ ಮತ್ತು ಶುದ್ಧ ಪರಿಸರಕ್ಕೆ ಸುರಕ್ಷಿತ ಅಡಿಪಾಯವಾಗಿ ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಜುಲೈ 10ರ ಶುಕ್ರವಾರ ಹೇಳಿದರು.

೭೫೦ ಮೆಗಾವ್ಯಾಟ್ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಸ್ಥಾವರವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟಕ್ಕೆ ಸಮರ್ಪಿಸಿದ ಪ್ರಧಾನಿ, ಪ್ರತಿವರ್ಷ ಸುಮಾರು ೧೫ ಲಕ್ಷ ಟನ್ಗೆ ಸಮಾನವಾದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಇದು ನಿವಾರಿಸುತ್ತದೆ ಎಂದು ಹೇಳಿದರು.

"ಸೌರ ಶಕ್ತಿಯು ಇಂದು ಮಾತ್ರವಲ್ಲದೆ ೨೧ ನೇ ಶತಮಾನದಲ್ಲಿ ಶಕ್ತಿಯ ಅಗತ್ಯಗಳ ಪ್ರಮುಖ ಮಾಧ್ಯಮವಾಗಲಿದೆ. ಏಕೆಂದರೆ ಸೌರಶಕ್ತಿ ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿz ಎಂದು ಪ್ರಧಾನಿ ಹೇಳಿದರು.

ಇಂದು, ರೇವಾ ನಿಜವಾಗಿಯೂ ಇತಿಹಾಸವನ್ನು ಸೃಷ್ಟಿ ಮಾಡಿದೆ. ರೇವಾವನ್ನು ತಾಯಿ ನರ್ಮದಾ ಮತ್ತು ಬಿಳಿ ಹುಲಿಯ ಹೆಸರಿನೊಂದಿಗೆ ಗುರುತಿಸಲಾಗಿದೆ. ಈಗ, ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಯೋಜನೆಯ ಹೆಸರು ಸಹಾ ಇದಕ್ಕೆ ಸೇರಿದೆ ಎಂದು ಅವರು ಹೇಳಿದರು.

ನಾನು ರೇವಾ ಮತ್ತು ಮಧ್ಯಪ್ರದೇಶದ ಜನರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸೌರ ಸ್ಥಾವರವು ದಶಕದಲ್ಲಿ ಇಡೀ ಪ್ರದೇಶವನ್ನು ಶಕ್ತಿಯ ದೊಡ್ಡ ಕೇಂದ್ರವನ್ನಾಗಿ ಮಾಡಲು ರೇವಾ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂzಣ್ದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಮತ್ತು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಸ್ವಾಮ್ಯದ ಸೌರಶಕ್ತಿ ನಿಗಮ (ಎಸ್ಇಸಿಐ) ಮತ್ತು ಮಧ್ಯಪ್ರದೇಶ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ (ಎಂಪಿಯುವಿಎನ್ಎಲ್) ಜಂಟಿ ಉದ್ಯಮವಾದ ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (ಆರ್ಯುಎಂಎಸ್ಎಲ್) ೫೦೦ ಹೆಕ್ಟೇರ್ನಲ್ಲಿ ಸ್ಥಾಪಿಸಿರುವ ಯೋಜನೆಯು ೨೫೦ ಮೆಗಾವ್ಯಾಟ್ ಮೂರು ಸೌರ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. ಒಟ್ಟು ೧೫೦೦ ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಜಮೀನಿನಲ್ಲಿ ಸೌರ ಉದ್ಯಾವನ್ನು ನಿರ್ಮಿಸಲಾಗಿದೆ.

ಭಾರತವು ಅಭಿವೃದ್ಧಿಯ ಹೊಸ ಶಿಖರಗಳತ್ತ ಸಾಗುತ್ತಿರುವಾಗ, ಜನರ ಆಶಯಗಳು ಮತ್ತು ಆಕಾಂಕ್ಷೆಗಳು ಮತ್ತು ಶಕ್ತಿ ಮತ್ತು ವಿದ್ಯುಚ್ಛಕ್ತಿಯ ಅವಶ್ಯಕತೆಯಿದೆ ಎಂದು ಪ್ರಧಾನಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಸ್ವಾವಲಂಬಿ ಭಾರತಕ್ಕೆ ವಿದ್ಯುತ್ನಲ್ಲಿ ಸ್ವಯಂಪೂರ್ಣತೆ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

ನಾವು ಸ್ವಾವಲಂಬನೆ ಮತ್ತು ಪ್ರಗತಿಯ ಬಗ್ಗೆ ಮಾತನಾಡುವಾಗ, ಆರ್ಥಿಕತೆಯು ಒಂದು ಪ್ರಮುಖ ಅಂಶವಾಗಿದೆ. ಪ್ರಪಂಚದಾದ್ಯಂತದ ನೀತಿ ನಿರೂಪಕರು ಆರ್ಥಿಕತೆ ಅಥವಾ ಪರಿಸರದ ಬಗ್ಗೆ ಯೋಚಿಸಬೇಕೆ ಎಂದು ಬಹಳ ವರ್ಷಗಳಿಂದ ಸಂದಿಗ್ಧ ಸ್ಥಿತಿಯಲ್ಲಿದ್ದಾg ಎಂದು ಪ್ರಧಾನಿ ಹೇಳಿದರು.

"ನಾವು ನವೀಕರಿಸಬಹುದಾದ ಶಕ್ತಿಯ ದೊಡ್ಡ ಯೋಜನೆಗಳನ್ನು ಪ್ರಾರಂಭಿಸುತ್ತಿರುವುದರಿಂದ, ಶುದ್ಧ ಶಕ್ತಿಯ ಕಡೆಗೆ ನಮ್ಮ ದೃಢನಿಶ್ಚಯವು ಜೀವನದ ಪ್ರತಿಯೊಂದು ಅಂಶಗಳಲ್ಲೂ ಕಂಡುಬರುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದರ ಪ್ರಯೋಜನಗಳು ದೇಶದ ಮೂಲೆ ಮೂಲೆಗೆ, ಸಮಾಜದ ಪ್ರತಿಯೊಂದು ವಿಭಾಗಕ್ಕೆ, ಪ್ರತಿಯೊಬ್ಬ ನಾಗರಿಕರಿಗೆ ತಲುಪಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತವು ಸೌರಶಕ್ತಿಯನ್ನು ಬಳಸಿಕೊಳ್ಳುವ ವಿಧಾನ ಮತ್ತು ಶುದ್ಧ ಶಕ್ತಿಯನ್ನು ಅತ್ಯಂತ ಆಕರ್ಷಕ ಮಾರುಕಟ್ಟೆಯೆಂದು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನಿ ನುಡಿದರು.

"ಭಾರತವು ಪ್ರಪಂಚದ ರಕ್ಷಣೆಯ ಮತ್ತು ಮಾನವೀಯತೆಯ ನಿರೀಕ್ಷೆಯನ್ನು ಮುಂದಿಟ್ಟುಕೊಂಡು ಇಡೀ ಜಗತ್ತನ್ನು ಸಂಪರ್ಕಿಸಲು ಯತ್ನಿಸುತ್ತಿದೆ. ಚಿಂತನೆಯ ಫಲಿತಾಂಶವೆಂದರೆ ಅಂತಾರಾಷ್ಟ್ರೀಯ ಸೌರ ಒಕ್ಕೂಟವಾದ ಐಎಸ್ಎಯ ರಚನೆ. ಇದು ಒಂದು ಪ್ರಪಂಚದ ಹಿಂದಿನ ಚೇತನ, ಒಂದು ಸೂರ್ಯ, ಒಂದು ಗ್ರಿಡ್ ಎಂದು ಮೋದಿ ಹೇಳಿದರು.

ಸೌರ ಉದ್ಯಾನದ ಅಭಿವೃದ್ಧಿಗೆ ಆರ್ಎಂಎಸ್ಎಲ್ಗೆ ಕೇಂದ್ರವು ೧೩೮ ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.

ಮಹೀಂದ್ರಾ ರಿನ್ಯೂವೆಬಲ್ಸ್ ಪ್ರೈವೇಟ್ ಲಿಮಿಟೆಡ್, ಎಸಿಎಂಇ ಜೈಪುರ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಮತ್ತು ಅರಿನ್ಸುನ್ ಕ್ಲೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಇವುಗಳನ್ನೂ ಮೂರು ಸೌರ ಉತ್ಪಾದನಾ ಘಟಕಗಳನ್ನು ಅಭಿವೃದ್ಧಿಪಡಿಸಲು ರಿವರ್ಸ್ ಹರಾಜಿನ ಮೂಲಕ ಆರೆಂಎಸ್ಎಲ್ ಆಯ್ಕೆ ಮಾಡಿದೆ.

ಯೋಜನೆಯು ರಾಜ್ಯದ ಹೊರಗಿನ ಸಾಂಸ್ಥಿಕ ಗ್ರಾಹಕನಾಗಿರುವ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಡಿಎಂಆರ್ಸಿ) ವಿದ್ಯುತ್ ಸರಬರಾಜು ಮಾಡುವ ಮೊದಲ ನವೀಕರಿಸಬಹುದಾದ ಇಂಧನ ಯೋಜನೆಯಾಗಿದೆ.

ಮೆಟ್ರೋ ರೈಲು ನಿಗಮಕ್ಕೆ ಯೋಜಯ  ಶೇಕಡಾ ೨೪ರಷ್ಟು ಇಂಧನ ಲಭಿಸಲಿದೆ. ಉಳಿದ ಶೇಕಡಾ ೭೬ರಷ್ಟನ್ನು  ಮಧ್ಯಪ್ರದೇಶದ ರಾಜ್ಯ ಡಿಸ್ಕೋಮ್ಗಳಿಗೆ ಪೂರೈಸಲಾಗುತ್ತದೆ.

No comments:

Advertisement