Tuesday, July 14, 2020

ಸಚಿನ್ ಪೈಲಟ್ ಗೆ ಅರ್ಧಚಂದ್ರ: ಉಭಯ ಸ್ಥಾನಗಳಿಂದ ವಜಾ

ಸಚಿನ್ ಪೈಲಟ್ ಗೆ ಅರ್ಧಚಂದ್ರ: ಉಭಯ ಸ್ಥಾನಗಳಿಂದ ವಜಾ

ನವದೆಹಲಿ: ಅಶೋಕ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಬಹಿರಂಗವಾಗಿ ಬಂಡಾಯ ಎದ್ದ ಎರಡು ದಿನಗಳ ಬಳಿಕ ರಾಜಸ್ಥಾನದ ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಹುದ್ದೆಗಳಿಂದ ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್  2020 ಜುಲೈ 14ರ ಮಂಗಳವಾರ ವಜಾ ಮಾಡಿತು.

ಬಂಡಾಯ ನಾಯಕನ ಮೇಲೆ ಚಾಟಿ ಬೀಸಿದ ಪಕ್ಷವು, ಸಚಿನ್ ನಿಷ್ಠಾವಂತರಾದ ವಿಶ್ವವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನು ಕೂಡಾ ರಾಜ್ಯ ಸಚಿವ ಸಂಪುಟದಿಂದ ಕಿತ್ತುಹಾಕಿತು. ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಅಧಿಕಾರದ ಜಗಳದ ನಡುವೆ ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲಾ ನಿರ್ಧಾರವನ್ನು ಪ್ರಕಟಿಸಿದರು.

"ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಹೂಡಿದ ಸಂಚಿನಲ್ಲಿ ಪೈಲಟ್ ಸಿಕ್ಕಿಹಾಕಿಕೊಂಡಿದ್ದಾರೆ. ನಾವು ಅವರಿಗೆ ಅನೇಕ ಅವಕಾಶಗಳನ್ನು ನೀಡಿದ್ದೇವೆ. ಅವರು ಸಂಸದರು ಮತ್ತು ಸಂಪುಟ ಸಚಿವರು ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಸಚಿನ್ ಪೈಲಟ್ ಮತ್ತು ಅವರ ಕೆಲವು ಸಹೋದ್ಯೋಗಿಗಳು ಪತನಗೊಂಡಿದ್ದಾರೆ ಎಂದು ನನಗೆ ಬೇಸರವಿದೆ. ಬಿಜೆಪಿ ಹಾಕಿದ ಬಲೆ  ಸ್ವೀಕಾರಾರ್ಹವಲ್ಲ ಎಂದು ಸುರ್ಜೆವಾಲಾ ಹೇಳಿದರು.

ನಿರ್ಧಾರ ತೆಗೆದುಕೊಂಡ ಕೂಡಲೇ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯಪಾಲ ಕಲರಾಜ್ ಮಿಶ್ರಾ ಅವರನ್ನು ಭೇಟಿಯಾದರು, ಸಂದರ್ಭದಲ್ಲಿ ಅವರು ಆಡಳಿತಾರೂಢ ಪಕ್ಷದ ಬಲದ ಬಗ್ಗೆ ರಾಜ್ಯಪಾಲರಿಗೆ ಭರವಸೆ ನೀಡಿದ್ದಾರೆಂದು ನಂಬಲಾಗಿದೆ ಮತ್ತು ಪೈಲಟ್ ಮತ್ತು ಅವರ ಇಬ್ಬರು ಸಹಾಯಕರು ಸೇರಿ ಮೂವರನ್ನು ಸಂಪುಟದಿಂದ ಕಿತ್ತು ಹಾಕುವ ಬಗ್ಗೆ ಶಿಫಾರಸು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಸಚಿನ್ ಪೈಲಟ್ ಮತ್ತು ಅವರ ಸಹಾಯಕರ ಪಕ್ಷಾಂತರವನ್ನು ಬಿಜೆಪಿ ಪ್ರಾಯೋಜಿಸಿದೆ ಎಂದು ಗೆಹ್ಲೋಟ್ ಪ್ರತಿಪಾದಿಸಿದರೆ, ಮತ್ತೊಂದೆಡೆ ಪೈಲಟ್ ಅವರು ಟ್ವೀಟ್ ಮೂಲಕಸತ್ಯವನ್ನು ಭ್ರಮನಿರಸನಗೊಳಿಸಬಹುದು ಆದರೆ ಸೋಲಿಸಲಾಗುವುದಿಲ್ಲ ಎಂದು ಒಂದೇ ವಾಕ್ಯದ ಪ್ರತಿಕ್ರಿಯೆ ನೀಡಿದರು.

ಪೈಲಟ್ ಅವರ ಬದಲಿಗೆ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸ್ರಾ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಸಿಸಿ) ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಪೈಲಟ್ ಬಂಡಾಯವನ್ನು ಬೆಂಬಲಿಸಿದ ಎಲ್ಲ ಶಾಸಕರ ಅನರ್ಹತೆಯನ್ನು ಪಕ್ಷವು ಕೋರುವ ನಿರೀಕ್ಷೆಯಿದೆ.

ಪೈಲಟ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಮತ್ತು ಮುಂದಿನ ರಾಜಕೀಯ ನಡೆಯ ಬಗ್ಗೆ ಹೇಳಿಕೆ ನೀಡುವ ಸಾಧ್ಯತೆಗಳಿವೆ. ಮಧ್ಯಾಹ್ನ ಪ್ರಕಟಿಸಿದ ಟ್ವೀಟಿನಲ್ಲಿ ಪೈಲಟ್, ’ಸತ್ಯ ಕೋ ಪರೇಶಾನ್ ಕಿಯಾ ಜಾ ಸಕ್ತಾ ಹೈ ಪರಾಜಿತ್ ನಹಿ [ಸತ್ಯವನ್ನು ನಿರಾಶೆಗೊಳಿಸಬಹುದು, ಆದರೆ ಸೋಲಿಸಲಾಗದು]’ ಎಂದು ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ಮುಂದಿನ ನಡೆಗಳ ಬಗ್ಗೆ ತೀವ್ರವಾದ ಊಹಾಪೋಹಗಳು ನಡೆಯುತ್ತಿದ್ದರೆ, ಅನೇಕ ರಾಜಕೀಯ ವೀಕ್ಷಕರು ಕೂಡ ರಾಜ್ಯಪಾಲರ ಮುಂದಿನ ನಡೆಯ ಬಗ್ಗೆ ನಿಗಾ ಇಟ್ಟಿದ್ದಾರೆ.

ಸದನ ಬಲಾಬಲ ಪರೀಕ್ಷೆಗೆ ಬಿಜೆಪಿ ಒತ್ತಾಯಿಸಿದರೆ ಮತ್ತು ರಾಜ್ಯಪಾಲರು ಅದಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದರೆ, ಪಕ್ಷೇತರರು ಮತ್ತು ಭಾರತೀಯ ಬುಡಕಟ್ಟು ಪಕ್ಷದ (ಬಿಟಿಪಿ) ಇಬ್ಬರು ಶಾಸಕರು ನಿರ್ಣಾಯಕವಾಗುವ ಹಿನ್ನೆಲೆಯಲ್ಲಿ ಬೆಳವಣಿಗೆ ಕುತೂಹಲಕಾರಿಯಾಗಬಹುದು.

ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಿಟಿಪಿಯು ತಾನು ಬಲಾಬಲ ಪರೀಕ್ಷೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.

ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸಿಪಿಐ (ಎಂ) ಮತ್ತು ಆರ್‌ಜೆಡಿಯ ತಲಾ ಒಬ್ಬ ಶಾಸಕರು ಮತ್ತು ೧೩ ಪಕ್ಷೇತರರು ಸೇರಿದಂತೆ ೧೦೭ ಶಾಸಕರ ಬೆಂಬಲವನ್ನು ಹೊಂದಿದೆ, ಇದು ಅಧಿಕಾರದಲ್ಲಿ ಉಳಿಯಲು ಬೇಕಾದ ಸಂಖ್ಯೆಗಿಂತ ಆರು ಹೆಚ್ಚು. ಬಿಜೆಪಿ ೭೨ ಶಾಸಕರನ್ನು ಹೊಂದಿದ್ದು, ಅದರ ರಾಜಕೀಯ ಮಿತ್ರ ಪಕ್ಷ ಆರ್‌ಎಲ್‌ಪಿ ಮೂರು ಸದಸ್ಯರನ್ನು ಹೊಂದಿದೆ.

"ಕಳೆದ ಆರು ತಿಂಗಳಿನಿಂದ ಬಿಜೆಪಿಯು ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಮಾಡಿದ್ದನ್ನು ಇಲ್ಲಿ ಪುನರಾವರ್ತನೆ ಮಾಡಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿತ್ತು. ಕುದುರೆ ವ್ಯಾಪಾರ ನಡೆಯುತ್ತಿದೆ. ರೆಸಾರ್ಟ್ [ಪೈಲಟ್ ಮತ್ತು ಅವರ ಸಹಾಯಕರು ಉಳಿದುಕೊಂಡಿರುವ ಸ್ಥಳ] ಬಿಜೆಪಿಯ ಒಡೆತನದಲ್ಲಿದೆ ಇತರ ರಾಜ್ಯಗಳಿಂದ ಸರ್ಕಾರಗಳನ್ನು ಉರುಳಿಸುವುದನ್ನು ಮೇಲ್ವಿಚಾರಣೆ ಮಾಡಿದ ಬಿಜೆಪಿಯ ಅದೇ ಜನರು ಈಗ ಇಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ "ಎಂದು ಗೆಹ್ಲೋಟ್ ಹೇಳಿದರು.

ಪೈಲಟ್ ಮತ್ತು ಅವರ ಬೆಂಬಲಿಗರು ಕಳೆದ ಆರು ತಿಂಗಳುಗಳಿಂದ ಪ್ರತಿನಿತ್ಯ ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳನ್ನು ಅನುಸರಿಸಿ, ಮಂಗಳವಾರ ಸಿಎಲ್‌ಪಿ ಸಭೆ ನಡೆಸಿ ಪೈಲಟ್ ಮತ್ತು ಅವರ ಬೆಂಬಲಿಗರನ್ನು ವಜಾಗೊಳಿಸುವ ನಿರ್ಧಾರವನ್ನು ಕೈಗೊಳ್ಳುವುದು ಅನಿವಾರ್‍ಯವಾಗಿತ್ತು ಎಂದು ಗೆಹ್ಲೋಟ್ ಹೇಳಿದರು.

No comments:

Advertisement