My Blog List

Saturday, July 11, 2020

ಹಿಮಾಲಯದಲ್ಲಿ ಭಾರೀ ಭೂಕಂಪ: ತಜ್ಞರ ಎಚ್ಚರಿಕೆ

ಹಿಮಾಲಯದಲ್ಲಿ ಭಾರೀ ಭೂಕಂಪ: ತಜ್ಞರ ಎಚ್ಚರಿಕೆ

ನವದೆಹಲಿ: ಹಿಮಾಲಯ ಪ್ರದೇಶದಲ್ಲಿ ಭಾರೀ ಭೂಕಂಪವೊಂದು ಸಂಭವಿಸುವ ಸಾಧ್ಯತೆ ಬಗ್ಗೆ ಭೂಕಂಪ ತಜ್ಞರು 2020 ಜುಲೈ 11ರ ಶನಿವಾರ ಎಚ್ಚರಿಕೆ ನೀಡಿದ್ದು, ಶಿಮ್ಲಾದಂತಹ ಪರ್ವತ ಪಟ್ಟಣಗಳು ಮತ್ತು ದೆಹಲಿಯಂತಹ ಪ್ರಸ್ಥಭೂಮಿ ನಗರಗಳು ಭಾರೀ ಭೂಕಂಪ ಎದುರಿಸಲು ಸಜ್ಜಾಗಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

೨೦೧೫ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪವೇ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ್ದ ಕೊನೆಯ ದೊಡ್ಡ ಭೂಕಂಪವಾಗಿತ್ತು. ರಿಕ್ಟರ್ ಮಾಪಕದಲ್ಲಿ .೮ರ ತೀವ್ರತೆಯ ಭೂಕಂಪದಲ್ಲಿ ೯೦೦೦ ಜನರು ಸಾವನ್ನಪ್ಪಿ, ಇತರ ೨೨,೦೦೦ ಮಂದಿ ಗಾಯಗೊಂಡಿದ್ದರು. ಭೂಕಂಪದಿಂದ ನೇಪಾಳದ ರಾಜಧಾನಿ ಕಠ್ಮಂಡುವಿನ ಬಹುತೇಕ ಭಾಗ ನೆಲಸಮವಾಗಿತ್ತು.

ಭೂಕಂಪ ತಜ್ಞರು ಪ್ರಕಟಿಸಿರುವ ಲೇಖನ ಒಂದರ ಪ್ರಕಾರ ಭೂಕಂಪದ ಪರಿಣಾಮವಾಗಿ ಕಠ್ಮಂಡುವಿನ ದಕ್ಷಿಣ ಭಾಗವು . ಮೀಟರಿನಷ್ಟು ಪಕ್ಕಕ್ಕೆ ಸರಿದಿತ್ತು. ಆದರೂ ಎಂಡಬ್ಲ್ಯೂ೮ನ್ನೂ ಮೀರಿದ ಭೂಕಂಪದಷ್ಟು ದೊಡ್ಡ ಭೂಕಂಪ ಇದಾಗಿರಲಿಲ್ಲ. ಆದರೆ ಇನ್ನೂ ದೊಡ್ಡ ಭೂಕಂಪಗಳಿಗೆ ಸೂಕ್ತವಾದ ಸ್ಥಿತಿಯನ್ನು ಇದು ನಿರ್ಮಾಣ ಮಾಡಿತು ಎಂದು ತಜ್ಞರು ಹೇಳಿದ್ದಾರೆ.

ಬೃಹತ್ ಭೂಕಂಪವು ಯಾವಾಗ ಸಂಭವಿಸಬಹುದು ಎಂಬ ಬಗ್ಗೆ ಭೂಕಂಪ ತಜ್ಞರಿಗೆ ಖಚಿತತೆ ಇಲ್ಲ. ಇದು ಬಹುಬೇಗನೇ ಸಂಭವಿಸಬಹುದು ಅಥವಾ ಕೆಲವು ನೂರು ವರ್ಷಗಳ ಬಳಿಕ ಸಂಭವಿಸಬಹುದು. ಬೇಗನೇ ಸಂಭವಿಸಲಿ ಅಥವಾ ತಡವಾಗಿ ಸಂಭವಿಸಲಿ, ರಾಷ್ಟ್ರವು ಭಾರೀ ಭೂಕಂಪವನ್ನು ಎದುರಿಸಲು ಸಜ್ಜಾಗಿ ಇರುವುದು ಒಳಿತು ತಜ್ಞರು ಹೇಳಿದ್ದಾರೆ.

ಭೂಗರ್ಭದಲ್ಲಿ ಯುರೇಷಿಯನ್ ತಟ್ಟೆಯೊಂದಿಗೆ ಭಾರತೀಯ ತಟ್ಟೆಯ ಟೆಕ್ಟಾನಿಕ್ ಘರ್ಷಣೆಯಿಂz ೨೦೧೫ರ ನೇಪಾಳ ಭೂಕಂಪ ಸಂಭವಿಸಿದೆ. ಹಿಮಾಲಯದ ಮೂರು ಪ್ರಮುಖ ದೋಷ ರೇಖೆಗಳು ಟೆಕ್ಟೋನಿಕ್ ಚಲನೆಗಳಿಂದಾಗಿ ಭಾರೀ ಒತ್ತಡವನ್ನು ಉಂಟು ಮಾಡುತ್ತವೆ.

ದುರದೃಷ್ಟಕರವಾಗಿ ಒತ್ತಡವು ಬಿಡುಗಡೆಯಾಗುವ ಅತ್ಯಂತ ಪರಿಣಾಮಕಾರಿ ಮಾರ್ಗ ಭೂಕಂಪಗಳಾಗಿದ್ದು, ಇವು ಮಾನವರಿಗೆ ಅಹಿತಕಾರಿಯಾಗಿವೆ. ಒತ್ತಡ ಬಿಡುಗಡೆಯ ಪ್ರಕ್ರಿಯೆಯು ಎಂಡಬ್ಲ್ಯೂ ಅಥವಾ ಅದಕ್ಕೂ ಹೆಚ್ಚಿನ ಗಾತ್ರದ ಭೂಕಂಪಗಳನ್ನು ಪದೇ ಪದೇ ಉಂಟು ಮಾಡಬಹುದು. ಒತ್ತಡ ನಿವಾರಣೆಗಾಗಿಬಿರುಕು ಕೂಡಾ ಉಂಟಾಗಬಹುದು.


ಕೊಲರಾಡೋ ಬೌಲ್ಡರ್ ವಿಶ್ವ ವಿದ್ಯಾಲಯದ ಪರಿಸರ ವಿಜ್ಞಾನದ ಸಂಶೋಧನಾ ಸಹಕಾರ ಸಂಸ್ಥೆಯ ಭೂಗರ್ಭ ವಿಜ್ಞಾನಿ ರೋಗರ್ ಬಿಲ್ಹಾಮ್ ಅವರ ಪ್ರಕಾರ ಭೂಗರ್ಭದ ಒಳಗಿನ ಒತ್ತಡ ಹೊರಹಾಕಲು ಹಿಮಾಲಯ ಪ್ರದೇಶದಲ್ಲಿ (ಎಂಡಬ್ಲ್ಯೂ ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರದ) ಯಾವುದೇ ಭಾರೀ ಭೂಕಂಪ ಕಳೆದ ೫೦೦ ವರ್ಷಗಳಲ್ಲಿ ಸಂಭವಿಸಿಲ್ಲ.

೧೦೦ ವರ್ಷಗಳ ಅವಧಿಯಲ್ಲಿ ಸಂಗ್ರಹಗೊಳ್ಳುವ ಒತ್ತಡ ನಿವಾರಣೆಗೆ ಎಂಡಬ್ಲ್ಯೂ . ಗಾತ್ರದ ಭೂಕಂಪ ಬೇಕಾಗುತ್ತದೆ. ೩೫೦ ವರ್ಷಗಳ ಅವಧಿಯಲ್ಲಿ ಭೂಗರ್ಭದೊಳಗಿನ ಒತ್ತಡ ನಿವಾರಣೆಗೆ ಎಂಡಬ್ಲ್ಯೂ೯ ಗಾತ್ರದ ಭೂಕಂಪ ಅನಿವಾರ್ಯ.

ಭಾರತದಲ್ಲಿ ಬೃಹತ್ ಭೂಕಂಪ ಎಂದರೆ ೨೦೦೫ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ್ದ (ಎಂಡಬ್ಲ್ಯೂ೭.) ಭೂಕಂಪವಾಗಿದ್ದು, ಇದಕ್ಕೆ ನೈಜ ನಿಯಂತ್ರಣ ರೇಖೆಯ ಉಭಯ ಕಡೆಗಳಲ್ಲಿ ೮೬,೦೦೦ ಜನರು ಬಲಿಯಾಗಿದ್ದರು.

ಕಳೆದ ೧೦೦ ವರ್ಷಗಳಲ್ಲಿ ಹಿಮಾಲಯದಲ್ಲಿ ಭಾರೀ ಭೂಕಂಪ ಸಂಭವಿಸದೇ ಇರುವುದರಿಂದ ಭೂಗರ್ಭದಲ್ಲಿ ಭಾರೀ ಒತ್ತಡ ನಿರ್ಮಾಣವಾಗಿದ್ದು, ಇದರ ನಿವಾರಣೆಗಾಗಿ ಭಾರೀ ಭೂಕಂಪ ಅನಿವಾರ್ ಎಂದು ತಜ್ಞರು ಹೇಳುತ್ತಾರೆ. ಆದರೆ ಭೂಮಿ ಯಾವಾಗ ನಡುಗುತ್ತದೆ ಎಂಬ ಬಗ್ಗೆ ಮಾತ್ರ ಅವರಿಗೆ ಸ್ಪಷ್ಟತೆ ಇಲ್ಲ.

ಭಾರತದ ದುರಂತ ನಿರ್ವಹಣೆಯ ಯೋಜನೆಯಲ್ಲಿ ಭೂಕಂಪಗಳು ಸ್ಥಾನ ಗಳಿಸಿಲ್ಲ ಎಂಬುದು ಮಹತ್ವದ ವಿಚಾರ.

೨೦೧೯ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್ಡಿಎಂಎ) ಭೂಕಂಪ ವಿಕೋಪ ಅಪಾಯ ಸೂಚ್ಯಂಕ (ಇಡಿಆರ್) ವರದಿಯೊಂದನ್ನು ಪ್ರಕಟಿಸಿತು. ಇದು ಭೂಕಂಪ ಮತ್ತು ವಲಯದ ನಗರಗಳು ಮತ್ತು ಮೆಟ್ರೋಗಳು ಸೇರಿದಂತೆ ೫೦ ನಗರಗಳ ಬಗ್ಗೆ ಸಮೀಕ್ಷಾ ಮಾಹಿತಿ ನೀಡಿತು. ಸಮೀಕ್ಷೆ ನಡೆಸಲಾದ ನಗರಗಳ ಪೈಕಿ ದೆಹಲಿ ಸೇರಿದಂತೆ ೩೦ ನಗರಗಳು ಮಧ್ಯಮ ವಲಯದ ಅಪಾಯ ಹೊಂದಿದ್ದರೆ, ೧೩ ನಗರಗಳು (ಶಿಮ್ಲಾ ಸೇರಿದಂತೆ ಬಹುತೇಕ ಹಿಮಾಲಯದ ನಗರಗಳು) ಅತ್ಯಂತ ಹೆಚ್ಚು ಅಪಾಯದ ನಗರಗಳು ಎಂದು ತಿಳಿಸಲಾಗಿತ್ತು.

ಯಾವುದೇ ತಂತ್ರಜ್ಞಾನ ರಹಿತವಾಗಿ ನಿರ್ಮಾಣಗೊಂಡಿರುವ ದೆಹಲಿ ಕೂಡಾ ಭಾರೀ ತೀವ್ರತೆಯ ಅಪಾಯಕ್ಕೆ ಗುರಿಯಾಗಬಹುದಾದ ನಗರ ಎಂದು ಸಮೀಕ್ಷೆ ಹೇಳಿತ್ತು.

ಜೂನ್ ತಿಂಗಳಲ್ಲಿ ದೆಹಲಿ ಹೈಕೋರ್ಟ್ ರಾಷ್ಟ್ರೀಯ ರಾಜಧಾನಿಯಲ್ಲಿ ಭೂಕಂಪ ತಾಳಿಕೊಳ್ಳಬಲ್ಲ ಕಟ್ಟಡಗಳಿಗಾಗಿ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

No comments:

Advertisement