Wednesday, July 1, 2020

ಎಲ್ಎಸಿ ಗಡಿಯಲ್ಲಿ ಹಂತ ಹಂತವಾಗಿ ಉದ್ವಿಗ್ನತೆ ಶಮನ

ಎಲ್ಎಸಿ ಗಡಿಯಲ್ಲಿ ಹಂತ ಹಂತವಾಗಿ ಉದ್ವಿಗ್ನತೆ ಶಮನ

ಭಾರತ-ಚೀನೀ ಸೇನಾ ನಾಯಕರ ಒತ್ತು

ನವದೆಹಲಿ:  ವಿವಾದಾತ್ಮಕವಾದ ನೈಜ ನಿಯಂತ್ರಣ ರೇಖೆಯಲ್ಲಿ ತ್ವರಿತ ಹಾಗೂ ಹಂತ ಹಂತವಾಗಿ ಉದ್ವಿಗ್ನತೆ ಶಮನಕ್ಕೆ ಯತ್ನಗಳು ಮುಂದುವರೆಯಬೇಕು ಎಂದು ಲಡಾಖ್ ಚುಶುಲ್ನಲ್ಲಿ 2020 2020 ಜೂನ್ 30ರ ಮಂಗಳವಾರ ನಡೆದ ಹಿರಿಯ ಸೇನಾ ಕಮಾಂಡರ್ಗಳ ೧೨ ಗಂಟೆಗಳ ಮಾತುಕತೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಗಡಿ ಉದ್ವಿಗ್ನತೆ ನಿವಾರಣೆಯ ಯತ್ನಗಳಲ್ಲಿ ನಿರಂತರವಾಗಿ ಪಾಲ್ಗೊಂಡಿರುವ, ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು 2020 ಜುಲೈ 01ರ ಬುಧವಾರ ವಿಚಾರವನ್ನು ತಿಳಿಸಿದರು.

ವಿವಾದಿತ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ಕಡೆಯ ಬದ್ಧತೆಯನ್ನು ಚರ್ಚೆಗಳು ಪ್ರತಿಬಿಂಬಿಸಿವೆ. ಏನಿದ್ದರೂ ಸೇನೆ ವಾಪಸಾತಿ ಪ್ರಕ್ರಿಯೆಯು ಸಂಕೀರ್ಣವಾದುದಾಗಿದೆ ಎಂದು ಅಧಿಕಾರಿ ನುಡಿದರು.

"ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಪರಸ್ಪರ ಸಮ್ಮತಿಸಬಹುದಾದ ಪರಿಹಾರವನ್ನು ತಲುಪಲು ಮತ್ತು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳ ಪ್ರಕಾರ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಭೆಗಳನ್ನು ನಿರೀಕ್ಷಿಸಲಾಗಿದೆ" ಎಂದು ಅವರು ಹೇಳಿದರು.

ಲೆಹ್ ಮೂಲದ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ಪ್ರದೇಶದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನೇತೃತ್ವದಲ್ಲಿ ನಡೆದ ಸೇನಾ ನಿಯೋಗಗಳ ನಡುವಣ ಮೂರನೇ ಸಭೆ ಇದಾಗಿದ್ದು, ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಎರಡನೆಯದು. ಗಲ್ವಾನ್ ಘರ್ಷಣೆಯಲ್ಲಿ ೨೦ ಮಂದಿ ಭಾರತೀಯರು ಹುತಾತ್ಮರಾಗಿದ್ದು, ಅಸಂಖ್ಯ ಚೀನೀ ಸೈನಿಕರೂ ಸಾವನ್ನಪ್ಪಿದ್ದರು.

ಜೂನ್ ೧೫ ರಂದು ನಡೆದ ಗಲ್ವಾನ್ ಕಣಿವೆ ಘರ್ಷಣೆಯು, ಸೇನೆ ವಾಪಸಾತಿಗೆ ಸಂಬಂಧಿಸಿದಂತೆ ಹಿಂದಿನ ಸಭೆಯಲ್ಲಿ ರೂಪಿಸಲಾಗಿದ್ದ ಯೋಜನೆಯ ಹಳಿ ತಪ್ಪಿಸಿತ್ತು.

"ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿನ ಎಲ್ಎಸಿಯ ಉದ್ದಕ್ಕೂ ಬಿಕ್ಕಟ್ಟು ಬಗೆಹರಿಸಲು ಸೇನಾ ಮತ್ತು ರಾಜತಾಂತ್ರಿಕ ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ದೇಶಗಳು ಚರ್ಚೆಯಲ್ಲಿ ತೊಡಗಿವೆಎಂದು ಇನ್ನೊಬ್ಬ ಅಧಿಕಾರಿ ನುಡಿದರು.

No comments:

Advertisement