Wednesday, August 12, 2020

ವಿಶ್ವದ ಅತಿ ಹಗುರ ಸಮರ ಹೆಲಿಕಾಪ್ಟರ್ ಲಡಾಖ್‌ನಲ್ಲಿ ನಿಯೋಜನೆ

 ವಿಶ್ವದ ಅತಿ ಹಗುರ ಸಮರ ಹೆಲಿಕಾಪ್ಟರ್ 
ಲಡಾಖ್ನಲ್ಲಿ ನಿಯೋಜನೆ

ನವದೆಹಲಿ: ಚೀನಾ ಜೊತೆಗೆ ನೈಜ ನಿಯಂತ್ರಣ ರೇಖೆಯಲ್ಲಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ ಎರಡು ಹಗುರ ಸಮರ ಹೆಲಿಕಾಪ್ಟರ್ಗಳನ್ನು (ಎಲ್ಸಿಎಚ್) ಲಡಾಖ್ ವಲಯದಲ್ಲಿ ಭಾರತೀಯ ವಾಯುಪಡೆಗೆ ಬೆಂಬಲವಾಗಿ ಕ್ಷಿಪ್ರ ಅವಧಿಯ ನೋಟಿಸ್ ನೀಡಿ ನಿಯೋಜಿಸಲಾಗಿದೆ.

ಹೇಳಿಕೆಯೊಂದರಲ್ಲಿ ಬುಧವಾರ ವಿಚಾರನ್ನು ಎಚ್ಎಎಲ್  2020 ಆಗಸ್ಟ್  12ರ ಬುಧವಾರ ತಿಳಿಸಿತು.

ಭಾರತದ ಸಶಸ್ತ್ರ ಪಡೆಗಳ ವಿಶಿಷ್ಟ ಹಾಗೂ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ ವಿಶ್ವದಲ್ಲೇ ಅತ್ಯಂತ ಹಗುರವಾದ ದಾಳಿ ಹೆಲಿಕಾಪ್ಟರ್ ಇದಾಗಿದ್ದು, ಸ್ವಾವಲಂಬಿ ಭಾರತದಲ್ಲಿ (ಆತ್ಮ ನಿರ್ಭರ ಭಾರತ) ಎಚ್ಎಎಲ್ ವಹಿಸಿರುವ ನಿರ್ಣಾಯಕ ಪಾತ್ರವನ್ನು ಇದು ಪ್ರತಿಬಿಂಬಿಸಿದೆ ಎಂದು ಎಚ್ ಎಎಲ್ ಅಧ್ಯಕ್ಷ ಆರ್. ಮಾಧವನ್ ಇಲ್ಲಿ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ೧೦೧ ವಿವಿಧ ರೀತಿಯ ಶಸ್ತ್ರಾಸ್ತ್ರಗಳು, ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳ ಆಮದನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ಸರ್ಕಾರದ ಋಣಾತ್ಮಕ ಆಮದು ಪಟ್ಟಿಯಲ್ಲಿ ಲಘು ಸಮರ ಹೆಲಿಕಾಪ್ಟರ್ ಸೇರಿದೆ.

ಸರ್ಕಾರಿ ವಿಮಾನ ತಯಾರಕರು ವರ್ಷಾಂತ್ಯದ ವೇಳೆಗೆ ಭಾರತೀಯ ವಾಯುಪಡೆದ (ಐಎಎಫ್) ೧೦ ಮತ್ತು ಸೈನ್ಯಕ್ಕೆ ಐದು ಹೀಗೆ ಒಟ್ಟು ೧೫ ಎಲ್ಸಿಎಚ್ಗಳಿಗೆ ಆದೇಶವನ್ನು ನಿರೀಕ್ಷಿಸುತ್ತಿದ್ದಾರೆ. ಐಎಎಫ್ ಮತ್ತು ಸೈನ್ಯಕ್ಕೆ ಒಟ್ಟಾಗಿ ೧೬೦ ಎಲ್ಸಿಎಚ್ಗಳು ಬೇಕಾಗುತ್ತವೆ.

ಲಡಾಖ್ ವಲಯದಲ್ಲಿ ಅವಳಿ-ಎಂಜಿನ್ ಹೊಂದಿರುವ ಎಲ್ಸಿಎಚ್ ನಿಯೋಜನೆಯು ಸಾಂಕೇತಿಕ ಸ್ವರೂಪದ್ದಾಗಿದೆ ಮತ್ತು ಸಂಸ್ಥೆಯ ಸಾಮರ್ಥ್ಯವನ್ನು ಬಿಂಬಿಸಿದೆ. ಆದರೆ ಭಾರತೀಯ ವಾಯುಪಡೆಯ ಅವಶ್ಯಕತೆಗಳನ್ನು ಪೂರೈಸಲು ಇನ್ನೂ ಸಂಪೂರ್ಣವಾಗಿ ಸಂಸ್ಥೆಯು ಸಜ್ಜಾಗಿಲ್ಲ ಎಂದು ಎಂದು ಎಲ್ಸಿಎಚ್ ಕಾರ್ಯಕ್ರಮದ ಅರಿವು ಇರುವ ಮೂಲಗಳು ಹೇಳಿದವು.

"ಎಲ್ಸಿಎಚ್ ಬಹಳಷ್ಟು ಭರವಸೆಯನ್ನು ಹೊಂದಿದೆ ಆದರೆ ಅದರ ಪ್ರಸ್ತುತ ವ್ಯವಸ್ಥೆಯಲ್ಲಿ ಕಾರ್ಯಗಳನ್ನು ನಿರ್ವಹಿಸಲು ನಿಜವಾಗಿಯೂ ಸಮರ್ಥವಾಗಿಲ್ಲ. ಇದು ವಿರೋಧಿ ರಕ್ಷಾಕವಚ ಮತ್ತು ಗಾಳಿಯಿಂದ ಗಾಳಿಗೆ ಹಾರಿಸಬಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ. ಕಾರ್ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದರು. ಎಲ್ಸಿಎಚ್ ೭೦ ಎಂಎಂ ರಾಕೆಟ್ ಮತ್ತು ಚಿನ್ ಮೌಂಟೆಡ್ ಫಿರಂಗಿಯನ್ನು ಹೊಂದಿದೆ.

"ಪ್ರಸ್ತುತ ಎಲ್ಸಿಎಚ್ ತನ್ನ ಪೂರ್ಣ ಶಸ್ತ್ರಾಸ್ತ್ರಗಳ ಭಾರವನ್ನು ಹೊಂದಿಲ್ಲದೇ ಇರಬಹುದು. ಆದರೆ ಶಸ್ತ್ರಾಸ್ತ್ರ ಕ್ರೋಡೀಕರಣವು ಪೂರ್ಣಗೊಂಡಾಗ ಅದು ತನ್ನ ಮೌಲ್ಯವನ್ನು ಸಾಬೀತುಪಡಿಸುತ್ತದೆ ಎಂದು ವಾಯು ಶಕ್ತಿ ಅಧ್ಯಯನ ಕೇಂದ್ರದ (ಏರ್ ಪವರ್ ಸ್ಟಡೀಸ್ ಸೆಂಟರ್) ಮಹಾನಿರ್ದೇಶಕ ಏರ್ ಮಾರ್ಷಲ್ ಕೆಕೆ ನೊಹ್ವಾರ್ (ನಿವೃತ್ತ) ಹೇಳಿದರು.

ಕಳೆದ ವಾರ ಲಡಾಖ್ ವಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಐಎಎಫ್ ಉಪಾಧ್ಯಕ್ಷ ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೋರಾ ಅವರು ವಿವಾದಾತ್ಮಕ ನೈಜ ನಿಯಂತ್ರಣ ರೇಖೆಯ ಬಳಿಯ ದೌಲತ್ ಬೇಗ್ ಓಲ್ಡಿ ವಾಯುನೆಲೆಯ ಎರಡು ಹಗುರ ಯುದ್ಧ ಹೆಲಿಕಾಪ್ಟರುಗಳ ಪೈಕಿ ಒಂದರಲ್ಲಿ ಹಾರಾಟ ನಡೆಸಿದ್ದರು.

ಸಂದರ್ಭದಲ್ಲಿ ವಿಪರೀತ ತಾಪಮಾನದಲ್ಲಿ ಸ್ಥಳಗಳಲ್ಲಿ ಮುಂದಕ್ಕೆ ಸಾಗಲು ತನಗಿರುವ ತ್ವರಿತ ನಿಯೋಜನೆ ಸಾಮರ್ಥ್ಯವನ್ನು ಎಲ್ಸಿಎಚ್ ಯಶಸ್ವಿಯಾಗಿ ಪ್ರದರ್ಶಿಸಿತು ಎಂದು ಹೇಳಿಕೆ ತಿಳಿಸಿತು.

ಎಲ್ಸಿಎಚ್ ಒಂದು ಪ್ರಬಲ ವೇದಿಕೆಯಾಗಿದ್ದು, ಅದರ ಅತ್ಯಾಧುನಿಕ ವ್ಯವಸ್ಥೆಗಳು ಮತ್ತು ಹೆಚ್ಚು ನಿಖರವಾದ ಶಸ್ತ್ರಾಸ್ತ್ರಗಳು ಹಗಲು ಅಥವಾ ರಾತ್ರಿಯ ಹೊತ್ತಿನಲ್ಲಿ ಯಾವುದೇ ರೀತಿಯ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅದು ಹೇಳಿದೆ.

ಲಡಾಖ್ನಲ್ಲಿ ನಿಯೋಜಿಸಲಾಗಿರುವ ಎರಡು ಎಲ್ಸಿಎಚ್ಗಳು ಮೂಲಮಾದರಿಗಳಾಗಿವೆ ಮತ್ತು ಭಾರತೀಯ ವಾಯುಪಡೆಗೆ ಸರಬರಾಜು ಮಾಡಬೇಕಾದವುಗಳಾಗಿದ್ದು ಅಪೇಕ್ಷಿತ ಶಸ್ತ್ರಾಸ್ತ್ರಗಳ ಸಾಮರ್ಥ್ಯದೊಂದಿಗೆ ಬರಲಿವೆ  ಎಂದು ಹೆಸರು ಹೇಳಲು ಇಚ್ಛಿಸದ ಎಚ್ಎಎಲ್ ಅಧಿಕಾರಿಯೊಬ್ಬರು ಹೇಳಿದರು.

೧೫ ಲಘು ಸಮರ ಹೆಲಿಕಾಪ್ಟರುಗಳಿಗೆ ಮುಂಬರುವ ಆದೇಶದ ಕುರಿತು ಎಚ್ಎಎಲ್, ‘ತಾಂತ್ರಿಕ ಮೌಲ್ಯಮಾಪನ ಮತ್ತು ಬೆಲೆ ಮಾತುಕತೆಗಳನ್ನು ತೀರ್ಮಾನಿಸಲಾಗಿದೆ ಮತ್ತು ಶೀಘ್ರದಲ್ಲೇ ಆದೇಶವನ್ನು ನಿರೀಕ್ಷಿಸಲಾಗಿದೆ.

ಆದಾಗ್ಯೂ, ಪೂರ್ವಭಾವಿ ಕ್ರಮವಾಗಿ ಎಚ್ಎಎಲ್ ತನ್ನ ಬೆಂಗಳೂರು ಸೌಲಭ್ಯದಲ್ಲಿ ಆದೇಶಗಳ ನಿರೀಕ್ಷೆಯಲ್ಲಿ ಸೀಮಿತ ಸರಣಿ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಹೇಳಿತು.

No comments:

Advertisement