My Blog List

Tuesday, August 11, 2020

ಯಾವ ಹುದ್ದೆಗೂ ಒತ್ತಾಯಿಸಿಲ್ಲ: ಸಚಿನ್ ಪೈಲಟ್

 ಯಾವ ಹುದ್ದೆಗೂ ಒತ್ತಾಯಿಸಿಲ್ಲ: ಸಚಿನ್ ಪೈಲಟ್

ಪ್ರಿಯಾಂಕಾರದ್ದೇ ಸಂಧಾನದಲ್ಲಿ ದೊಡ್ಡ ಪಾತ್ರ

ಜೈಪುರ: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜೊತೆ ಶಾಂತಿ ಒಪ್ಪಂದಕ್ಕೆ ಮೊಹರು ಹಾಕಿದ ಒಂದು ದಿನದ ನಂತರ, 2020 ಆಗಸ್ಟ್ 11ರ ಮಂಗಳವಾರ ಜೈಪುರಕ್ಕೆ ವಾಪಸಾದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರುಪಕ್ಷದಿಂದ ಯಾವುದೇ ಹುದ್ದೆಗೆ ಒತ್ತಾಯಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.

ನಾನು ಪಕ್ಷದಿಂದ ಯಾವುದೇ ಹುದ್ದೆಯನ್ನು ಕೋರಿಲ್ಲ ಆದರೆ ಶಾಸಕರು ಸಮಸ್ಯೆಗಳನ್ನು ಎತ್ತಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ರಾಜಕೀಯ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ ಎಂದು ಪೈಲಟ್ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯವೈಖರಿ ಅಥವಾ ಆಲೋಚನೆಗಳ ಮೇಲೆ ಭಿನ್ನಾಭಿಪ್ರಾಯಗಳು ಸೈದ್ಧಾಂತಿಕವಾಗಿರಬಹುದು, ಆದರೆ ರಾಜಕೀಯದಲ್ಲಿ, ಸೇಡಿಗೆ ಸ್ಥಳವಿಲ್ಲ ಎಂದು ಅವರು ಹೇಳಿದರು. "ನಾನು ಎಲ್ಲ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇ ಎಂದು ಅವರು ಹೇಳಿದರು.

"ಪಕ್ಷದ ನಾಯಕತ್ವವು ಕಾರ್ಯವೈಖರಿ, ಅಭಿವೃದ್ಧಿ, ಕಾರ್ಮಿಕರ ಭಾಗವಹಿಸುವಿಕೆ, ಸ್ವಾಭಿಮಾನ ಇತ್ಯಾದಿಗಳಿಗೆ ಸಂಬಂಧಿಸಿದ ನಮ್ಮ ಸಮಸ್ಯೆಯನ್ನು ಪರಿಶೀಲಿಸಲು ಮುಂದಾಗಿರುವುದು ನನಗೆ ಸಂತಸ ತಂದಿದೆ. ಎಐಸಿಸಿಯು ಒಂದು ಸಮಿತಿಯನ್ನು ರಚಿಸಿದೆ, ಅದು ಸಮಯಕ್ಕೆ ತಕ್ಕಂತೆ ಸಮಸ್ಯೆಗಳನ್ನು ಬಗೆಹರಿಸುತ್ತದೆ" ಎಂದು ಪೈಲಟ್ ಹೇಳಿದರು.

ಜೈಪುರಕ್ಕೆ ಆಗಮಿಸಿದಾಗ, ಅವರ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಕಾರ್‍ಯಕರ್ತರ ದೊಡ್ಡ ಗುಂಪು ಪೈಲಟ್ ಅವರನ್ನು ಸ್ವಾಗಟ್ತು.

ನಮ್ಮ ಬಂಡಾಯ ಎಂದಿಗೂ "ಪಕ್ಷ ವಿರೋಧಿ ಅಲ್ಲ, ಆದರೆ ರಾಜಸ್ಥಾನದಲ್ಲಿ ನಡೆದ ಘಟನೆಗಳನ್ನು ನಿರೂಪಿಸುವ ಸಾಧನವಾಗಿದೆ ಎಂದು ಇದಕ್ಕೂ ಮುನ್ನ ಪೈಲಟ್ ಹೇಳಿದ್ದರು

ಸೋಮವಾರ ಕೂಡ ಅವರು ತಾವು ಯಾವುದೇ ಹುದ್ದೆಯ ಹಿಂದೆ ಬಿದ್ದಿಲ್ಲ ಎಂದು ಹೇಳಿದ್ದರು, ಪಕವು ಒಂದು ಸ್ಥಾನವನ್ನು ನಿಗದಿಪಡಿಸಿತ್ತು. ಅದನ್ನು ಹಿಂದಕ್ಕೆ ತೆಗೆದುಕೊಳ್ಳಬಹುದು ಎಂದು ಪೈಲಟ್ ಹೇಳಿದ್ದರು.

ಆಗಸ್ಟ್ ೧೪ ರಂದು ನಡೆಯಲಿರುವ ವಿಧಾನಸಭೆ ಅಧಿವೇಶನಕ್ಕೆ ಮುಂಚಿತವಾಗಿ ಅಶೋಕ್ ಗೆಹ್ಲೋಟ್ ಸರ್ಕಾರದ ಉಳಿವಿಗೆ ಬೆದರಿಕೆ ಒಡ್ಡಿದದ ರಾಜ್ಯ ಘಟಕದಲ್ಲಿನ ಬಂಡಾಯವನ್ನು ಕೊನೆಗೊಳಿಸಲು ಪೈಲಟ್ ಸೋಮವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು.

 

ಪಕ್ಷದ ಹೈಕಮಾಂಡ್ ಸೋಮವಾರ ಗೆಹ್ಲೋಟ್ ವಿರುದ್ಧದ ಸಮಸ್ಯೆಗಳನ್ನು ಪರಿಶೀಲಿಸುವ ಭರವಸೆ ನೀಡಿದ ನಂತರ ಅವರು ತಮ್ಮ ಬಂಡಾಯವನ್ನು ಶೈತ್ಯಾಗಾರದಲ್ಲಿ ಇರಿಸಿದರು.

ಗೆಹ್ಲೋಟ್ ಅವರೊಂದಿಗೆ ಭಿನ್ನಾಭಿಪ್ರಾಯಗಳು ತಲೆದೋರಿದ ನಂತರ ಕಳೆದ ತಿಂಗಳು ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. 

ಪೈಲಟ್ ಅವರು ಸೋಮವಾರ ತನ್ನ ಶಾಂತಿ ಹಾದಿಗೆ ಮರಳಿದ ಬಳಿಕ, ಗೆಹ್ಲೋಟ್ ಅವರು ಮಂಗಳವಾರಶಾಂತಿ ಮತ್ತು ಸಹೋದರತ್ವವು ಪಕ್ಷದಲ್ಲಿ ಉಳಿಯುತ್ತದೆ ಎಂದು ಹೇಳುವ ಮೂಲಕ ತಮ್ಮ ಸ್ನೇಹ ಹಸ್ತವನ್ನು ಚಾಚಿದರು.

ಮಧ್ಯೆ, ಪತ್ರಿಕಾ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೈಲಟ್ ಸಂಧಾನದ ಹಿಂದೆ ಪ್ರಿಯಾಂಕಾ ಗಾಂಧಿ ವಾದ್ರ ಅವರ ಪಾತ್ರವು ಬಹು ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

ನಮ್ಮ ಬಂಡಾಯವು ಎಂದಿಗೂ ಪಕ್ಷ ವಿರೋಧಿ ಆಗಿರಲಿಲ್ಲ. ರಾಜ್ಯದಲ್ಲಿನ ಘಟನಾವಳಿಗಳ ಬಗ್ಗೆ ಬೆಳಕು ಚೆಲ್ಲುವ ಯತ್ನವಾಗಿತ್ತು. ರಾಜ್ಯ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ವಿರುದ್ಧ ತಮಗೆ ಯಾವುದೇ ವೈರತ್ವ ಅಥವಾ ಕೆಟ್ಟ ಭಾವನೆ ಇಲ್ಲ ಎಂದು ಪೈಲಟ್ ಸಂದರ್ಶನದಲ್ಲಿ ಹೇಳಿದರು.

ಮುಖ್ಯಮಂತ್ರಿಯವರು ಮಾಡಿದನಿಖಾನಾಮ ಟೀಕೆಗೆ ಹೇಗೆ ಪ್ರತಿಕ್ರಿಯಿಸುವಿರಿ, ೧೪ರಂದು ಭೇಟಿ ಮಾಡಿದಾಗ ಮುಖ್ಯಮಂತ್ರಿಯ ಕಹಿ ಮಾತಿಗೆ ಹೇಗೆ ಉತ್ತರಿಸುವಿರಿ ಎಂಬ ಪ್ರಶ್ನೆಗೆ ಮೊದಲು ನಕ್ಕ ಪೈಲಟ್ನನ್ನ ವಿರುದ್ಧ ಬಳಸಿದ ಕೆಲವೊಂದು ಭಾಷೆ ನನಗೆ ಆಳವಾದ ಘಾಸಿ ಉಂಟುಮಾಡಿದೆ. ಆದರೆ ನೀಡಲು ನನ್ನ ಬಳಿ ಒಳ್ಳೆಯ ಪದಗಳು ಬಿಟ್ಟು ಬೇರೇನೂ ಇಲ್ಲ ಎಂದು ಸಚಿನ್ ಹೇಳಿದರು.

No comments:

Advertisement