Saturday, August 15, 2020

ಚೀನಾ ಹೆಸರು ಹೇಳಲು ಭಯವೇಕೆ? ಕಾಂಗ್ರೆಸ್ ತರಾಟೆ

 ಚೀನಾ ಹೆಸರು ಹೇಳಲು ಭಯವೇಕೆ? ಕಾಂಗ್ರೆಸ್ ತರಾಟೆ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಚೀನಾದ ಹೆಸರು ಹೇಳದೇ ಇದ್ದುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 2020 ಆಗಸ್ಟ್ 15ರ ಶನಿವಾರ ಪುನಃ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ‘ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಚೀನಾದ ಪಡೆಗಳನ್ನು ಹಿಂದಕ್ಕೆ ತಳ್ಳುವ ಬಗ್ಗೆ ಹೇಗೆ ಪ್ರಸ್ತಾಪಿಸಲಾಗುತ್ತದೆ ಎಂಬುದಾಗಿ  ಜನರಿಗೆ ತಿಳಿಸಿ ಎಂದು ಸರ್ಕಾರವನ್ನು ಆಗ್ರಹಿಸಿತು.

ಸರ್ಕಾರದಆತ್ಮನಿರ್ಭರ (ಸ್ವಾವಲಂಬಿ)’ ಘೋಷಣೆಯನ್ನು ಟೀಕಿಸಿದ ಕಾಂಗ್ರೆಸ್ಸಾರ್ವಜನಿಕ ವಲಯದ ೩೨ ಉದ್ಯಮಗಳನ್ನು ಮಾರಾಟ ಮಾಡಿ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಕೈಗಳಿಗೆ ಹಸ್ತಾಂತರಿಸಿರುವ  ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಮತ್ತು ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಮೇಲೆ ದಾಳಿ ಮಾಡಿರುವ ಸರ್ಕಾರವು ದೇಶದ ಸ್ವಾತಂತ್ರ್ಯವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿತು.

"ನಮ್ಮ ಸಶಸ್ತ್ರ, ಅರೆಸೈನಿಕ ಮತ್ತು ಪೊಲೀಸ್ ಪಡೆಗಳ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ನಾವು ೧೩೦ ಕೋಟಿ ಭಾರತೀಯರು ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅವರ ಬಗ್ಗೆ ಹೆಮ್ಮೆ ಪಡುತ್ತೇವೆ. ನಮ್ಮ ಮೇಲೆ ದಾಳಿ ನಡೆದಾಗಲೆಲ್ಲಾ ಅವರು ದಾಳಿಕೋರರಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲಾ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಸಮಾರಂಭದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಆದರೆ ನಮ್ಮ ಆಡಳಿತಗಾರರು ಚೀನಾದ ಹೆಸರನ್ನು ಹೇಳಲು ಏಕೆ ಹೆದರುತ್ತಾರೆ ಎಂಬುದರ ಬಗ್ಗೆಯೂ ನಾವು ಯೋಚಿಸಬೇಕು. ಇಂದು, ಚೀನಾ ನಮ್ಮ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವಾಗ, ಚೀನಾದ ಪಡೆಗಳನ್ನು ಹಿಂದಕ್ಕೆ ತಳ್ಳಲು ಮತ್ತು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಬಗ್ಗೆ ಹೇಗೆ ಪ್ರಸ್ತಾಪಿಸಲಾಗುತ್ತದೆ? ಎಂದು ನಾವು ಸರ್ಕಾರವನ್ನು ಕೇಳಬೇಕು ಎಂದು ಅವರು ನುಡಿದರು.

ಕೆಂಪು ಕೋಟೆಯ ಪ್ರಾಕಾರದಿಂದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಚೀನಾ ಮತ್ತು ಪಾಕಿಸ್ತಾನಕ್ಕೆ ತೀಕ್ಷ್ಣವಾದ ಸಂದೇಶವನ್ನು ನೀಡಿದರು, ಉಭಯ ದೇಶಗಳೊಂದಿಗೆ ಗಡಿಯುದ್ದಕ್ಕೂ ನಿಯೋಜಿಸಲಾಗಿರುವ ಸಶಸ್ತ್ರ ಪಡೆಗಳು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಲು ಯತ್ನಿಸಿದವರಿಗೆ ಸೂಕ್ತವಾದ ಉತ್ತರವನ್ನು ನೀಡಿವೆ ಎಂದು ಘೋಷಿಸಿದರು. ಆದರೆ, ಅವರು ಉಭಯ ದೇಶಗಳ ಹೆಸರನ್ನು ಪ್ರಸ್ತಾಪಿಸಲಿಲ್ಲ. ತಮ್ಮ ೯೦ ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಅಭಿಯಾನದ ಬಗ್ಗೆ ವ್ಯಾಪಕವಾಗಿ ಗಮನಹರಿಸಿದರು.

"ಆತ್ಮನಿರ್ಭರ" ಬಗ್ಗೆ ಮಾತನಾಡುವವರು, ಅದರ ಅಡಿಪಾಯವನ್ನು ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಹಾಕಿದ್ದಾರೆ ಎಂಬುದನ್ನು ನೆನಪಿಡಬೇಕು. ೩೨ ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಾಟ ಮಾಡಿದ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಕೈಗಳಿಗೆ ಹಸ್ತಾಂತರಿಸಿದ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೇಲೆ ಮೇಲೆ ದಾಳಿ ಮಾಡಿದ ಸರ್ಕಾರವು ದೇಶದ ಸ್ವಾತಂತ್ರ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳುತ್ತದೆಯೇ ಎಂದು ನಾವು ಕೇಳಬೇಕಾಗಿದೆ ಎಂದು ಸುರ್ಜೆವಾಲಾ ಹೇಳಿದರು.

ಇಂದು, ಸ್ವಾತಂತ್ರ್ಯದ ಮೇಲೆ ಆಕ್ರಮಣ ಮಾಡುವವರ ವಿರುದ್ಧ ನಿರ್ಣಾಯಕ ಯುದ್ಧದ ಕಹಳೆ ಊದುವ ಪ್ರತಿಜ್ಞೆಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕು. ಇದು ನಿಜವಾದ ರಾಷ್ಟ್ರೀಯತೆಯಾಗಿದೆ ಎಂದು ಸುರ್ಜೆವಾಲ  ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಮತ್ತು ಹಿರಿಯ ಮುಖಂಡ .ಕೆ. ಆಂಟನಿ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ದ್ವಜವನ್ನು ಹಾರಿಸಿದರು. ಸಂದರ್ಭದಲ್ಲಿ ಪಕ್ಷದ ಪ್ರಮುಖ ನಾಯಕರಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇದ್ದರು ಆದರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ.

No comments:

Advertisement