Thursday, August 6, 2020

ಭಾರತ- ಚೀನಾ ಗಡಿ ಬಿಕ್ಕಟ್ಟು ಇನ್ನಷ್ಟು ದೀರ್ಘ?

ಭಾರತ- ಚೀನಾ ಗಡಿ ಬಿಕ್ಕಟ್ಟು ಇನ್ನಷ್ಟು ದೀರ್ಘ? 

ನವದೆಹಲಿ: ವಿವಾದಾತ್ಮಕ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ಆಕ್ರಮಣಶೀಲತೆ ಹೆಚ್ಚುತ್ತಿದ್ದು,  ಪ್ರಸ್ತುತ ಬಿಕ್ಕಟ್ಟು ಸುದೀರ್ಘವಾಗುವ ನಿರೀಕ್ಷೆ ಇದೆ ಎಂದು ರಕ್ಷಣಾ ಸಚಿವಾಲಯದ ದಾಖಲೆ ತಿಳಿಸಿದೆ, ೨೦ ಮಂದಿ ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿ, ಅಸಂಖ್ಯ ಚೀನೀ ಸೈನಿಕರ ಸಾವು ನೋವಿಗೆ ಕಾರಣವಾಗಿರುವ ಗಲ್ವಾನ್ ಕಣಿವೆ ಹಿಂಸಾತ್ಮಕ ಘರ್ಷಣೆಯನ್ನು ದಾಖಲೆಯು ನಿರ್ದಿಷ್ಟವಾಗಿ ಉಲ್ಲೇಖಿಸಿದೆ.

ಜೂನ್‌ನಲ್ಲಿ ರಕ್ಷಣಾ ಇಲಾಖೆಯ ಪ್ರಮುಖ ಚಟುವಟಿಕೆಗಳನ್ನು ಪಟ್ಟಿ ಮಾಡಿರುವ ಅಧಿಕೃತ ದಾಖಲೆಯಲ್ಲಿ, ಸಚಿವಾಲಯವು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮೇ ತಿಂಗಳಲ್ಲಿ ಕುಗ್ರಾಂಗ್ ನಾಲಾ, ಗೋಗ್ರಾ ಮತ್ತು ಮೇ ೧೭-೧೮ರಂದು ಪ್ಯಾಂಗೊಂಗ್ ತ್ಸೊದ ಉತ್ತರ ದಂಡೆಯ ಪ್ರದೇಶಗಳಲ್ಲಿ ಭಾರತದ ಕಡೆಗೆ ಅತಿಕ್ರಮಿಸಿದೆ ಎಂದು ಹೇಳಿದೆ. ವಿಚಾರವನ್ನು ಆಗಸ್ಟ್ ರಂದು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

"ಇದರ ಪರಿಣಾಮವಾಗಿ, ಉಂಟಾದ ಉದ್ರಿಕ್ತ ಪರಿಸ್ಥಿತಿಯನ್ನು ತಗ್ಗಿಸಲು ಉಭಯ ಕಡೆಯ ಸಶಸ್ತ್ರ ಪಡೆಗಳ ನಡುವೆ  ಸಂವಹನ ನಡೆಸಲಾಯಿತು. ಕೋರ್ ಕಮಾಂಡರ್ ಮಟ್ಟದ ಧ್ವಜ ಸಭೆ ೨೦೨೦ರ ಜೂನ್ ರಂದು ನಡೆಯಿತು. ಆದಾಗ್ಯೂ, ಜೂನ್ ೧೫ ರಂದು ಎರಡು ಕಡೆಯವರ ನಡುವೆ ಹಿಂಸಾತ್ಮಕ ಮುಖಾಮುಖಿ ಘರ್ಷಣೆ ಘಟನೆ ನಡೆದಿದ್ದು, ಪರಿಣಾಮವಾಗಿ ಉಭಯ ಕಡೆಯಲ್ಲೂ ಸಾವು ನೋವುಗಳಾಗಿವೆ ಎಂದು ಅದು ಹೇಳಿದೆ.

ಜೂನ್ ತಿಂಗಳನ್ನು ಮಾತ್ರ ಉಲ್ಲೇಖಿಸಿರುವ ದಾಖಲೆ, ನಂತರದ ಮಿಲಿಟರಿ ಮಾತುಕತೆ ಜೂನ್ ೨೨ ರಂದು ನಡೆಯಿತು ಎಂದು ಹೇಳಿದೆ.

"ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಸಂವಾದವು ಪರಸ್ಪರ ಸ್ವೀಕಾರಾರ್ಹ ಒಮ್ಮತಕ್ಕೆ ಬರುತ್ತಲೇ ಇದ್ದರೂ, ಪ್ರಸ್ತುತ ಬಿಕ್ಕಟ್ಟು ದೀರ್ಘಕಾಲದವರೆಗೆ ಇರುತ್ತದೆ" ಎಂದು ಅದು ಹೇಳಿದೆ.

ಪೂರ್ವ ಲಡಾಕ್‌ನಲ್ಲಿ ಚೀನಾದ ಏಕಪಕ್ಷೀಯ ಆಕ್ರಮಣದಿಂದ ಉಂಟಾಗುವ ಪರಿಸ್ಥಿತಿ ಸೂಕ್ಷ್ಮವಾಗಿದೆ ಮತ್ತು ವಿಕಾಸಗೊಳ್ಳುತ್ತಿರುವ ಪರಿಸ್ಥಿತಿಯ ಆಧಾರದ ಮೇಲೆ ನಿಕಟ ಮೇಲ್ವಿಚಾರಣೆ ಮತ್ತು ತ್ವರಿತ ಕ್ರಮ ಅಗತ್ಯ ಎಂದು ಸಚಿವಾಲಯ ಹೇಳಿದೆ.

ಪ್ಯಾಂಗೊಂಗ್ ತ್ಸೊ ಬಳಿಯ ಫಿಂಗರ್ ಪ್ರದೇಶದಲ್ಲಿನ ಎರಡು ಸೇನೆಗಳ ನಡುವಿನ ಗಂಭೀರ ಭಿನ್ನಾಭಿಪ್ರಾಯಗಳು ಮತ್ತು ಭಾರತಕ್ಕೆ ಸೇರಿದ ಪ್ರದೇಶದಿಂದ ಪಿಎಲ್‌ಎ ಡೇರೆ ಖಾಲಿ ಮಾಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಭಾರತದ ಮತ್ತು ಚೀನಾದ ಉನ್ನತ ಮಿಲಿಟರಿ ಕಮಾಂಡರ್‌ಗಳು ಭಾನುವಾರ ಪೂರ್ವ ಲಡಾಕ್‌ನಲ್ಲಿ ಸಭೆ ನಡೆಸಿ ಎಲ್‌ಎಸಿಯ ಉದ್ದಕ್ಕೂ ಮುಂದಿನ ಹಂತದ ಸೇನಾ ವಾಪಸಾತಿ ಬಗ್ಗೆ ಚರ್ಚಿಸಿದರು

ಪ್ಯಾಂಗೊಂಗ್ ಸರೋವರದ ಮೇಲಿರುವ ಸಿರಿಜಾಪ್ ಶ್ರೇಣಿಯಿಂದ ಹೊರಬರುವ ಎಂಟು ಬಂಡೆಗಳ ಒಂದು ಗುಂಪಾಗಿರುವ ಫಿಂಗರ್ ಏರಿಯಾವು ಸೇನಾ ವಾಪಸಾತಿ ಪ್ರಕ್ರಿಯೆ ವಿಚಾರದಲ್ಲಿ  ಮಾತುಕತೆ ಅತ್ಯಂತ ಕ್ಲಿಷ್ಟಕರವಾಗಿದ್ದು, ತತ್ ಕ್ಷಣ ಇತ್ಯರ್ಥಗೊಳ್ಳುವ ಸೂಚನೆಗಳಿಲ್ಲ ದಾಖಲೆ ಹೇಳಿದೆ.

ಚೀನಾ ಸೇನೆ ಮೇಲೆ ಕಣ್ಣಿಡಲು ಬೇಕು ಪ್ರತ್ಯೇಕ ಉಪಗ್ರಹ

ಮಧ್ಯೆ, ,೦೦೦ ಕಿಲೋ ಮೀಟರ್ ಹರಡಿಕೊಂಡಿರುವ ವಾಸ್ತವ ಗಡಿರೇಖೆಯ ಉದ್ದಕ್ಕೂ ಚೀನಾ ಸೇನೆಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಪ್ರತ್ಯೇಕ ಉಪಗ್ರಹದ ಅಗತ್ಯವಿದೆ ಎಂದು ಭದ್ರತಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

- ಪ್ರತ್ಯೇಕ ಉಪಗ್ರಹ ಅಗತ್ಯವಿದೆ ಎಂದು ಹೇಳಿರುವ ಭದ್ರತಾ ಸಂಸ್ಥೆಗಳು, ಇದರಿಂದ ಚೀನಾದ ಸೇನೆಯ ಪ್ರತಿ ಚಲನವಲನದ ಮೇಲೂ ಸೂಕ್ಷ್ಮವಾಗಿ ಕಣ್ಣಿಡಲು ಸಾಧ್ಯವಾಗುತ್ತದೆ ಎಂದು ಹೇಳಿವೆ.

ಕ್ಸಿಂಜಿಯಾಂಗ್ ಪ್ರಾಂತ್ಯದ ತನ್ನ ಭಾಗದಲ್ಲಿ ಚೀನಾ ಸೇನೆ ೪೦,೦೦೦ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ಜತೆಗೆ ಭಾರಿ ಶಸ್ತ್ರಾಸ್ತ್ರಗಳನ್ನೂ ಹೊತ್ತು ತಂದಿದೆ. ಇದು ಕಳವಳಕ್ಕೆ ಕಾರಣವಾಗಿದ್ದು, ಚೀನಾದ ನಡೆಗಳು ಅನುಮಾನ ಹೆಚ್ಚುವಂತೆ ಮಾಡಿವೆ.

"ಭಾರತೀಯ ಭೂಪ್ರದೇಶದ ಸಮೀಪ ಚೀನಾದ ಪಡೆಗಳ ಮೇಲೆ ನಿಖರವಾದ ಕಣ್ಣಿಡಲು ಹೆಚ್ಚು ರೆಸಲ್ಯೂಷನ್ನಿನ  ಸೆನ್ಸರ್‌ಗಳೂ ಹಾಗೂ ಕ್ಯಾಮರಾಗಳಿರುವ ನಾಲ್ಕರಿಂದ ಆರು ಮೀಸಲಾದ ಉಪಗ್ರಹಗಳಿದ್ದರೆ ಉತ್ತಮ. ಇದರಿಂದ ಸಣ್ಣ ವಸ್ತುಗಳು ಮತ್ತು ವ್ಯಕ್ತಿಗಳ ಚಲನೆಯ ಮೇಲೂ ಕಣ್ಣಿಡಬಹುದು,” ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ದೇಶದ ಬಳಿಯಲ್ಲೇ ಸಾಮರ್ಥ್ಯ ಇದ್ದರೆ ವಿದೇಶಗಳ ಮೇಲಿನ ಅವಲಂಬನೆ ತಪ್ಪುತ್ತದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಸೇನೆಗಾಗಿಯೇ ಮೀಸಲಾದ ಉಪಗ್ರಹಳಿವೆ. ಆದರೆ ಇದನ್ನು ಮತ್ತಷ್ಟು ಸುಧಾರಿಸುವ ಅವಶ್ಯಕತೆ ಇದೆ ಎಂದು ಭದ್ರತಾ ಪಡೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

No comments:

Advertisement