Monday, August 10, 2020

ಭಾರತದಿಂದ ವಿಶ್ವಸಂಸ್ಥೆ ಪಾತ್ರ ನಿರ್ವಹಣೆಗೆ ಸಿದ್ಧತೆ

 ಭಾರತದಿಂದ ವಿಶ್ವಸಂಸ್ಥೆ ಪಾತ್ರ ನಿರ್ವಹಣೆಗೆ ಸಿದ್ಧತೆ

ನ್ಯೂಯಾರ್ಕಿನಲ್ಲಿ ರಾಜತಾಂತ್ರಿಕ ಬಲ ವರ್ಧನೆ

ನವದೆಹಲಿ: ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ೨೦೨೧ ಜನವರಿಯಲ್ಲಿ ಹೆಚ್ಚುವರಿ ಉಪ ಖಾಯಂ ಪ್ರತಿನಿಧಿ (ಡಿಪಿಆರ್) ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಷಯಗಳನ್ನು ನಿರ್ವಹಿಸಲು ನೇಮಕಗೊಂಡಿರುವ  ಸಲಹೆಗಾರರೊಂದಿಗೆ ವಿಶ್ವಸಂಸ್ಥೆಯಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಹೆಚ್ಚಿಸಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಪ್ರತಿ ತಿಂಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ನಿಲುವನ್ನು ವೈಯಕ್ತಿಕವಾಗಿ ಪರಿಶೀಲಿಸಲಿದ್ದಾರೆ.

ಸೌತ್ ಬ್ಲಾಕ್ ಪ್ರಕಾರ, ೧೯೯೯ ತಂಡದ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಆರ್. ರವೀಂದ್ರನ್ ಅವರು ಜಂಟಿ ಕಾರ್ಯದರ್ಶಿಯಾಗಿ (ಮಧ್ಯ ಮತ್ತು ಪಶ್ಚಿಮ ಆಫ್ರಿಕಾ) ನೇಮಕಗೊಂಡಿದ್ದು, ನ್ಯೂಯಾರ್ಕಿನಲ್ಲಿ ಇರುವ ಭಾರತದ ಕಾಯಂ ಮಿಷನ್‌ಗೆ ವಿಶ್ವಸಂಸ್ಥೆಯಿಂದ ಡಿಪಿಆರ್‌ಗೆ ಸಮನಾದ ಶ್ರೇಣಿಯಲ್ಲಿ ಸೇರ್ಪಡೆಯಾಗಲಿದ್ದಾರೆ.

೨೦೦೭ ಐಎಫ್‌ಎಸ್ ಅಧಿಕಾರಿ ಮತ್ತು ಉಪ ಕಾರ್ಯದರ್ಶಿ (ಪಿಎಂಒ) ಪ್ರತೀಕ್ ಮಾಥುರ್ ಅವರು ಕೌನ್ಸಿಲರ್ (ವಿಶ್ವಸಂಸ್ಥೆ ಭದ್ರತಾ ಮಂಡಳಿ) ಆಗಿ ಸೇರಲಿದ್ದಾರೆ.

ಮಿಷನ್ ಈಗಾಗಲೇ ಟಿಎಸ್ ತಿರುಮೂರ್ತಿ ನೇತೃತ್ವದಲ್ಲಿದೆ ಮತ್ತು ನಾಗರಾಜ್ ನಾಯ್ಡು ಅವರನ್ನು ಡಿಪಿಆರ್ ಆಗಿ ಹೊಂದಿದೆ. ೭೫ ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ೨೦೨೦ ಸೆಪ್ಟೆಂಬರ್ ೧೫ ರಂದು ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನ ಇಬ್ಬರು ಅಧಿಕಾರಿಗಳು ಅಧಿಕಾರಿ ಸಮೂಹಕ್ಕೆ ಸೇರಿಕೊಳ್ಳಲಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಔಪಚಾರಿಕವಾಗಿ ಸೇರ್ಪಡೆಗೊಳ್ಳಲು ತಿಂಗಳುಗಳ ಮೊದಲೇ ಹೊಸ ಖಾಯಂ ಸದಸ್ಯರ ಪೂರ್ವಸಿದ್ಧತಾ ಕಾರ್ಯಗಳು ಪ್ರಾರಂಭವಾಗುತ್ತವೆ.

ರವೀಂದ್ರನ್ ಅವರು ಯುಎನ್‌ಪಿಆರ್‌ನಲ್ಲಿ ಪ್ರಸ್ತುತ ನಾಗರಿಕ ವಿಮಾನಯಾನ, ನಗರಾಭಿವೃದ್ಧಿ ಮತ್ತು ವಾಣಿಜ್ಯ ಸಚಿವರಾಗಿರುವ ಹರದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಸೇವೆ ಸಲ್ಲಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತೀಯ ವಿಧಾನವನ್ನು ಉಚ್ಚರಿಸಿದ್ದು, ಇದನ್ನು ಎಸ್ಅಥವಾ ಸಮ್ಮಾನ್ (ಗೌರವ), ಸಂವಾದ್ (ಸಂವಾದ), ಸಹಯೋಗ್ (ಸಹಕಾರ), ಶಾಂತಿ (ಜಾಗತಿಕ ಶಾಂತಿ) ಮತ್ತು ಸಮೃದ್ಧಿ (ಜಾಗತಿಕ ಸಮೃದ್ಧಿ) ಎಂದು ಕರೆದಿದ್ದಾರೆ. "ಸುಧಾರಿತ ಬಹುಪಕ್ಷೀಯ ವ್ಯವಸ್ಥೆಯ ಹೊಸ ದೃಷ್ಟಿಕೋ ವಿಧಾನದ ಒಟ್ಟಾರೆ ಉದ್ದೇಶ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ಥಾನಕ್ಕಾಗಿ ಮತ ಚಲಾಯಿಸಿದ ೧೯೨ ಮಾನ್ಯ ಮತಗಳಲ್ಲಿ ೧೮೪ ಭಾರತಕ್ಕೆ ಲಭಿಸಿದರೆ,  ಭಾರತದ ವಿರೋಧಿಗಳು ವಿಶೇಷವಾಗಿ ಪಾಕಿಸ್ತಾನ, ಟರ್ಕಿ, ಮಲೇಷ್ಯಾ ಮತ್ತು ಇಸ್ಲಾಮಾಬಾದ್‌ನ ಸರ್ವ ಋತು  ಸ್ನೇಹಿತ ಚೀನಾ ಬೆಂಬಲದೊಂದಿಗೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದತಿ ವಿರುದ್ಧ ಪ್ರಚಾರ ಅಭಿಯಾನ ನಡೆಸಿದ್ದರೂ ಇಷ್ಟೊಂದು ಮತಗಳು ಬಂದದ್ದು ನವದೆಹಲಿಯನ್ನು ಅಚ್ಚರಿಗೊಳಿಸಿತ್ತು.

"ಜೂನ್‌ನಲ್ಲಿ ಪೂರ್ವ ಲಡಾಕ್‌ನ ಗಲ್ವಾನ್‌ನಲ್ಲಿ ಚೀನಾ ತನ್ನ ಪಡೆಗಳನ್ನು ತಂದು ನಿಲ್ಲಿಸಿದ್ದರಿಂದ ಭಾರತಕ್ಕೆ ಹಲವು ಮತಗಳು ದೊರೆತಿವೆ ಎಂಬುದು ನಮ್ಮ ತಿಳುವಳಿಕೆ. ಕೇವಲ ೧೨೯ ಮತಗಳು ಬೇಕಾಗಿದ್ದರೂ, ಭಾರತವು ತನ್ನ ಭೂಪ್ರದೇಶಕ್ಕಾಗಿ ಹೋರಾಡುವ ಸಾಮರ್ಥ್ಯವನ್ನು ಹೊಂದಿದ್ದಕ್ಕಾಗಿ ಹೆಚ್ಚುವರಿ ಮತಗಳನ್ನು ಪಡೆದುಕೊಂಡಿದೆಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇದು ಜೂನ್ ೧೫ ರಂದು ಗಲ್ವಾನ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲ್ಲಿ ಭಾರತದ ಸೈನಿಕರು ಚೀನಾದ ಸೈನ್ಯದ ವಿರುದ್ಧ ಹೋರಾಡಿದರು. ಚಕಮಕಿಯಲ್ಲಿ ಭಾರತದ ೨೦ ಯೋಧರು ಹುತಾತ್ಮರಾದರು ಮತ್ತು ಚೀನಾ ಕೂಡಾ ಅನಿರ್ದಿಷ್ಟ ಸಂಖ್ಯೆಯ ಸಾವುನೋವುಗಳನ್ನು ಅನುಭವಿಸಿತು.

ವಿಶ್ವ ಸಂಸ್ಥೆ ಸ್ಥಾಪನೆಯಾಗಿ ೭೫ ವರ್ಷಗಳ ನಂತರವೂ ಖಾಯಂ ಸದಸ್ಯನಾಗಲು ಭಾರತವು ಇನ್ನೂ ಕಾಯುತ್ತಿದೆ. ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನವದೆಹಲಿಯು ರಚನಾತ್ಮಕ ಪಾತ್ರವನ್ನು ನಿರ್ವಹಿಸಲು ತಯಾರಿ ನಡೆಸುತ್ತಿದೆ ಎಂದು ರಾಜತಾಂತ್ರಿಕರು ಒತ್ತಿಹೇಳಿದರು.

No comments:

Advertisement