Tuesday, August 4, 2020

ರಾಮಮಂದಿರ ಭೂಮಿಪೂಜೆ: ಕಡೆಗೂ ಮೌನ ಮುರಿದ ಕಾಂಗ್ರೆಸ್

ರಾಮಮಂದಿರ ಭೂಮಿಪೂಜೆ:  ಕಡೆಗೂ ಮೌನ ಮುರಿದ ಕಾಂಗ್ರೆಸ್

ಲಕ್ನೋ: ಅಯೋಧ್ಯೆಯಲ್ಲಿ ಬುಧವಾರಕ್ಕೆ ನಿಗದಿಯಾಗಿರುವ ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಬಿಜೆಪಿ ಸಹಿತವಾಗಿ ಹಲಡೆಗಳಿಂದ ಬಂದಿರುವ ಸಾಕಷ್ಟು ಟೀಕೆಗಳ ಬಳಿಕ 2020  ಆಗಸ್ಟ್  04ರ ಮಂಗಳವಾರ ಮೌನ ಮುರಿದಿರುವ ಕಾಂಗ್ರೆಸ್, ಸಮಾರಂಭಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟ ಪಡಿಸಿತು.

ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇವಾಲಯಕ್ಕಾಗಿ ಶಿಲಾನ್ಯಾಸ ಸಮಾರಂಭದ ಒಂದು ದಿ ಮುಂಚಿತವಾಗಿ ಟ್ವಿಟ್ಟರಿನಲ್ಲಿ ನೀಡಿದ ಹೇಳಿಕೆಯಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಮ ಮಂದಿರದ ಭೂಮಿ ಪೂಜೆಯನ್ನುರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭಎಂಬುದಾಗಿ ಬಣ್ಣಿಸಿದರು.

ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆಗಳು ದೀನಬಂಧು ಭಗವಾನ್ ರಾಮ ಎಂಬ ಹೆಸರಿನ ಮೂಲತತ್ವ. ರಾಮ ಎಲ್ಲರಲ್ಲೂ ಇದ್ದಾನೆ, ರಾಮ ಎಲ್ಲರೊಂದಿಗೂ ಇದ್ದಾನೆ. ರಾಮ ಮತ್ತು ಮಾತೆ ಸೀತಾ ಅವರ ಸಂದೇಶ ಮತ್ತು ಆಶೀರ್ವಾದದೊಂದಿಗೆ, ರಾಮಲಾಲ ದೇವಾಲಯದ ಭೂಮಿಪೂಜೆಯು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭವಾಗಿದೆಎಂದು ಪ್ರಿಯಾಂಕಾ ಮಂಗಳವಾರ ಟ್ವೀಟಿನಲ್ಲಿ  ತಿಳಿಸಿದರು.

ರಾಮಾಯಣವು ವಿಶ್ವದ ಸಂಸ್ಕೃತಿ ಮತ್ತು ಭಾರತೀಯ ಉಪಖಂಡದಲ್ಲಿ ಆಳವಾದ ಮತ್ತು ಅಳಿಸಲಾಗದ ಗುರುತು ಹೊಂದಿದೆ. ಭಗವಾನ್ ರಾಮ, ತಾಯಿ ಸೀತಾ ಮತ್ತು ರಾಮಾಯಣದ ಕಥೆ ಪ್ರಕಾಶ ಪುಂಜವಾಗಿ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿ ಬೆಳಗಿದೆ. ಭಾರತೀಯ ಜನತೆ ರಾಮಾಯಣ, ಧರ್ಮ, ನೀತಿ, ಕರ್ತವ್ಯ, ತ್ಯಾಗ, ಭವ್ಯ, ಪ್ರೀತಿ, ಶೌರ್ಯ ಮತ್ತು ಸೇವೆಯ ವಿಷಯಗಳಿಂದ ಪ್ರೇರಿತರಾಗಿದ್ದಾರೆ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ರಾಮಕಥೆಯು ಅನೇಕ ರೂಪಗಳಲ್ಲಿ ಸ್ವಯಂ ವ್ಯಕ್ತವಾಗಿದೆ. ಶ್ರೀಹರಿಯ ಅಸಂಖ್ಯಾತ ರೂಪಗಳಂತೆ, ರಾಮಕಥಾ ಹರಿಕಥೆಯೂ ಅನಂತಎಂದು ಕಾಂಗ್ರೆಸ್ ನಾಯಕಿ ಬರೆದರು.

ಭಗವಾನ್ ರಾಮನ ಪಾತ್ರವು ಶತಮಾನಗಳಿಂದ ಭಾರತೀಯ ಪ್ರಾಂತ್ಯದಲ್ಲಿ ಮಾನವೀಯತೆಯನ್ನು ಸಂಪರ್ಕಿಸುವ ಎಳೆಯಾಗಿದೆ ಎಂದು ಪ್ರಿಯಾಂಕಾ ಹೇಳಿದರು. ‘ರಾಮನು ಆಶ್ರಯ ಮತ್ತು ತ್ಯಾಗ. ರಾಮ ಶಬರಿ, ಸುಗ್ರೀವ, ವಾಲ್ಮೀಕಿ, ಭಾಸನಿಗೂ ಸೇರಿದವನು. ರಾಮ ಕಂಬನ್‌ಗೆ ಸೇರಿದವನು ಮತ್ತು ಎಶುತಚ್ಚನ್‌ಗೆ ಸೇರಿದವನು. ರಾಮ್ ಕಬೀರ್‌ಗೆ ಸೇರಿದವನು, ತುಳಸಿದಾಸ, ರವಿದಾಸರಿಗೆ ಸೇರಿದವನು. ಎಲ್ಲವನ್ನು ಕೊಡುವವನು ಭಗವಾನ್ ರಾಮ. ಗಾಂಧಿಯವರ ರಘುಪತಿ ರಾಘವ್ ರಾಜ ರಾಮ್ ಎಲ್ಲರ ಒಪ್ಪಿಗೆ ನೀಡುವಂತಹುದು. ಜೋ ರಬ್ ಹೈ ವೋಹಿ ರಾಮ್ ಹೈ ಎಂದು ವಾರಿಸ್ ಅಲಿ ಶಾ ಹೇಳುತ್ತಾರೆ ಎಂದು ಪ್ರಿಯಾಂಕಾ ಬರೆದರು.

ತಷ್ಟ್ರಾ ಕವಿ ಮೈಥಿಲಿಶರಣ್ ಗುಪ್ತ ಅವರು ರಾಮನನ್ನುದುರ್ಬಲರ ಶಕ್ತಿಎಂದು ಕರೆಯುತ್ತಾನೆ. ಆದ್ದರಿಂದ ಮಹಾಪ್ರಾಣ್ ನಿರಾಲಾ ಅವರವೊಹ್ ಏಕ್ ಔರ್ ಮನ್ ರಹಾ ರಾಮ್ ಕಾ ಜೋ ನಾ ಥಾಕಪ್ರಸಿದ್ಧ ಸಾಲು ಭಗವಾನ್ ರಾಮನನ್ನುಶಕ್ತಿಯ ಮೂಲಭೂತ ಕಲ್ಪನೆಎಂದು ಹೇಳುತ್ತದೆ. ರಾಮ ಧೈರ್ಯ, ರಾಮ ಸಂಗಮ, ರಾಮ ಸಂಯಮ, ರಾಮ ಮಿತ್ರ. ರಾಮ ಎಲ್ಲರಿಗೂ ಸೇರಿದವನು. ಭಗವಾನ್ ರಾಮನು ಎಲ್ಲರ ಕಲ್ಯಾಣವನ್ನು ಬಯಸುತ್ತಾನೆ. ಅದಕ್ಕಾಗಿಯೇ ಅವರು ಘನತೆವೆತ್ತ ವ್ಯಕ್ತಿಎಂದು ಪ್ರಿಯಾಂಕಾ ಟ್ವೀಟಿನಲ್ಲಿ ಬರೆದರು.

ಆಗಸ್ಟ್ ರಂದು ದೇವಾಲಯದ ಭೂಮಿ ಪೂಜೆಯನ್ನು ಆಯೋಜಿಸಲಾಗಿz. ರಾಮ ದೇವರ ಕೃಪೆಯಿಂದ, ಕಾರ್ಯಕ್ರಮವು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಮತ್ತು ಅದು ರಾಮನ ಸಂದೇಶವನ್ನು ಪ್ರಸಾರ ಮಾಡಿದೆ. ಜೈ ಸಿಯಾರಾಮ್ಎಂಬುದಾಗಿ ಪ್ರಿಯಾಂಕಾ ತಮ್ಮ ಟ್ವೀಟ್ ಕೊನೆಗೊಳಿಸಿದ್ದಾರೆ.

No comments:

Advertisement