Wednesday, August 19, 2020

ರಾಷ್ಟ್ರೀಯ ನೇಮಕಾತಿ ಸಂಸ್ಥೆ ಯುವಕರಿಗೆ ವರದಾನ: ಪ್ರಧಾನಿ ಮೋದಿ

 ರಾಷ್ಟ್ರೀಯ ನೇಮಕಾತಿ ಸಂಸ್ಥೆ ಯುವಕರಿಗೆ ವರದಾನ: ಪ್ರಧಾನಿ 

ನವದೆಹಲಿ: ಕೋಟ್ಯಂತರ ಯುವಕರಿಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆ ವರದಾನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಆಗಸ್ಟ್ 19ರ ಬುಧವಾರ ಹೇಳಿದರು.

ಇದು ಬಹು ಪರೀಕ್ಷೆಗಳನ್ನು ತೊಡೆದುಹಾಕುತ್ತದೆ ಮತ್ತು ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಇದು ಪಾರದರ್ಶಕತೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಟ್ವೀಟ್ನಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್) ರಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ನೇಮಕಾತಿಯಲ್ಲಿ "ಹೆಗ್ಗುರುತು ಸುಧಾರಣೆ" ಯನ್ನು ಪ್ರಾರಂಭಿಸಿದೆ.

ಕ್ರಮವು ಕೋಟ್ಯಂತರ ಯುವಕರಿಗೆ ವರದಾನವಾಗಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯ ಮೂಲಕ ಇದು ಅನೇಕ ಪರೀಕ್ಷೆಗಳನ್ನು ತೊಡೆದುಹಾಕುತ್ತದೆ ಮತ್ತು ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಇದು ಪಾರದರ್ಶಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ" ಎಂದು ಮೋದಿ ಟ್ವೀಟ್ ಹೇಳಿತು.

ಕೇಂದ್ರ ಸರ್ಕಾರದ ನೌಕರಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಬೇಕು ಎಂಬುದು ಯುವಕರ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಅದನ್ನು ಈಗ ನೆರವೇರಿಸಲಾಗುತ್ತಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಾವಡೇಕರ್ ಹೇಳಿದರು.

ದೇಶದ ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಕ ಮತ್ತು ಮಹತ್ವದ ಸುಧಾರಣೆ ಎಂದು ಸಚಿವ ಜಿತೇಂದ್ರ ಸಿಂಗ್ ಬಣ್ಣಿಸಿದರು. ಕ್ರಮದಿಂದ ಉದ್ಯೋಗ ನೇಮಕಾತಿ ಪರೀಕ್ಷೆ ಬರೆಯುವುದಕ್ಕೆ ದೂರ ಪ್ರಯಾಣ ಮಾಡುವ ಬಡವರಿಗೆ ಮತ್ತು ಮಹಿಳೆಯರಿಗೂ ಅನುಕೂಲವಾಗಲಿದೆ ಎಂದೂ ಅವರು ಹೇಳಿದರು. ಏಜೆನ್ಸಿಯು ಬಿ ಮತ್ತು ಸಿ (ತಾಂತ್ರಿಕೇತರ ಹುದ್ದೆಗಳು) ದರ್ಜೆಯ ಉದ್ಯೋಗ ಅಭ್ಯರ್ಥಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಿ ಕಿರುಪಟ್ಟಿ ಸಿದ್ಧಪಡಿಸಲಿದೆ. ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ರೈಲ್ವೆ ನೇಮಕಾತಿ ಮಂಡಳಿ ಮತ್ತು ಐಬಿಪಿಎಸ್ ಪ್ರತಿನಿಧಿಗಳನ್ನು ಎನ್ಆರ್ ಹೊಂದಿರಲಿದೆ.

No comments:

Advertisement