Wednesday, August 19, 2020

ಪಾಕ್ ಸೇನಾ ಮುಖ್ಯಸ್ಥರ ಕ್ಷಮೆಯಾಚನೆ, ಸೊಪ್ಪು ಹಾಕದ ಸೌದಿ

 ಪಾಕ್ ಸೇನಾ ಮುಖ್ಯಸ್ಥರ ಕ್ಷಮೆಯಾಚನೆ

ಸೊಪ್ಪು ಹಾಕದ ಸೌದಿ ಅರೇಬಿಯಾ

ರಿಯಾದ್: ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ಅವರ ಜೊತೆ  ಸೌಹಾರ್ದಯುತ ಭೇಟಿಯನ್ನು ಬಯಸಿ ಬಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕ್ಯುಮರ್ ಜಾವೇದ್ ಬಜ್ವಾ ಅವರಿಗೆ ತೀವ್ರ ನಿರಾಸೆಯಾಗಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 19ರ ಬುಧವಾರ ತಿಳಿಸಿದವು.

ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ಭೇಟಿ ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಅವರ ಪರವಾಗಿ ತಿಳಿಸಿದ ಉಪ ರಕ್ಷಣಾ ಸಚಿವ ಮತ್ತು ಕಿರಿಯ ಸೋದರ ಶೇಖ್ ಖಾಲಿದ್ ಬಿನ್ ಸಲ್ಮಾನ್ ಅವರೊಂದಿಗಾದರೂ ಮಾತುಕತೆಗೆ ಅವಕಾಶ ನೀಡುವಂತೆ ಬಜ್ವಾ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಯುವರಾಜನ ಭೇಟಿಗೆ ಅವಕಾಶ ಲಭಿಸದ ಕಾರಣ ಇಮ್ರಾನ್ ಖಾನ್ ಅವರು ಕಳುಹಿಸಿದ್ದ ಕ್ಷಮೆಯಾಚನೆ ಸಂದೇಶವನ್ನು ಕೂಡ ಯುವರಾಜನಿಗೆ ನೇರವಾಗಿ ತಲುಪಿಸಲು ಬಜ್ವಾ ಅವರಿಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.

ಅಲ್ಲದೆ , ಬಜ್ವಾ ಜೊತೆ ಮಾತುಕತೆ ನಡೆಸಿದ ಸೌದಿ ಸಚಿವ ಶೇಖ್ ಖಾಲಿದ್ ಕೂಡ ಪಾಕಿಸ್ತಾನದ ಕ್ಷಮಾಯಾಚನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು ಎಂದು ಮೂಲಗಳೂ ಹೇಳಿವೆ.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗಾಗಿ ತೈಲ ಉತ್ಪಾದಕ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವಂತೆ ಪಾಕಿಸ್ತಾನ ಸೌದಿ ಅರೇಬಿಯಾವನ್ನು ಒತ್ತಾಯಿಸಿತ್ತು. ಆದರೆ ಇದಕ್ಕೆ ಸೌದಿ ಅರೇಬಿಯಾ ಸಾಧ್ಯವಿಲ್ಲ ಎಂದು ಹೇಳಿತ್ತು.

ಬಗ್ಗೆ ಪಾಕಿಸ್ತಾದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಕಟುವಾಗಿ ಪ್ರತಿಕ್ರಿಯಿಸಿ ಸೌದಿ ಯುವರಾಜ ಎಂಬಿಎಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಯುವರಾಜರ ಬಳಿ ಕ್ಷಮೆಯಾಚಿಸಿ ಸೌದಿ ಜತೆಗಿನ ಸಂಬಂಧ ಹಳಸದಂತೆ ನಿಭಾಯಿಸಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಮಿಲಿಟರಿ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ಸೌದಿ ಪ್ರವಾಸಕ್ಕೆ ಅಟ್ಟಿದ್ದರು.

ಬಜ್ವಾ ಜೊತೆಗೆ ಪಾಕಿಸ್ತಾನದ ಕುಖ್ಯಾತ ಗುಪ್ತಚರ ವಿಭಾಗ ಐಎಸ್ಐನ ಮುಖ್ಯಸ್ಥ ಲೆ. ಜನರಲ್ ಫೈಜ್ ಹಮೀದ್ ಕೂಡಾ ಸೌದಿಯಲ್ಲಿ ಶಿಬಿರ ಹೂಡಿದ್ದಾರೆ.

No comments:

Advertisement