ಗ್ರಾಹಕರ ಸುಖ-ದುಃಖ

My Blog List

Friday, October 2, 2020

ಕಸ್ಟಮ್ ನಿರ್ಮಿತ ಬಿ ೭೭೭ ವಿಮಾನ ಅಮೆರಿಕದಿಂದ ದೆಹಲಿಗೆ

 ಕಸ್ಟಮ್ ನಿರ್ಮಿತ ಬಿ ೭೭೭ ವಿಮಾನ ಅಮೆರಿಕದಿಂದ ದೆಹಲಿಗೆ

ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರ ಹಾರಾಟಕ್ಕಾಗಿ ಬಳಸಲಾಗುವ ಕಸ್ಟಮ್ ನಿರ್ಮಿತ ಬಿ ೭೭೭ ವಿಮಾನ 2020 ಅಕ್ಟೋಬರ್ 01 ಗುರುವಾರ ಅಮೆರಿಕದಿಂದ ದೆಹಲಿಗೆ ಬಂದಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದರು.

ವಿಮಾನ ತಯಾರಕ ಬೋಯಿಂಗ್ ವಿಮಾನವನ್ನು ಜುಲೈ ತಿಂಗಳಲ್ಲಿ ಏರ್ ಇಂಡಿಯಾಕ್ಕೆ ತಲುಪಿಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಅದರ ವಿತರಣೆಯು ಕೋವಿಡ್ -೧೯ ಸಾಂಕ್ರಾಮಿಕದ ಕಾರಣ ಜುಲೈಯಲ್ಲಿ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಆಗಸ್ಟ್ ತಿಂಗಳಲ್ಲಿ - ಹೀಗೆ ಎರಡು ಬಾರಿ ವಿಳಂಬವಾಯಿತು ಎಂದು ಅಧಿಕಾರಿಗಳು ಹೇಳಿದರು.

ವಿಮಾನದ ಕರೆ ಚಿಹ್ನೆಯಾದಏರ್ ಇಂಡಿಯಾ ಒನ್ಗುರುವಾರ ಮಧ್ಯಾಹ್ನ ಗಂಟೆ ಸುಮಾರಿಗೆ ಟೆಕ್ಸಾಸ್ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅವರು ಹೇಳಿದರು.

ಬೋಯಿಂಗ್ನಿಂದ ವಿಮಾನವನ್ನು ಸ್ವೀಕರಿಸಲು ರಾಷ್ಟ್ರೀಯ ವಿಮಾನ ವಾಹಕದ ಹಿರಿಯ ಅಧಿಕಾರಿಗಳು ಆಗಸ್ಟ್ ಪೂವಾರ್ಧದಲ್ಲಿ ಅಮೆರಿಕಕ್ಕೆ ತೆರಳಿದ್ದರು ಎಂದು ಅಧಿಕಾರಿಗಳು ನುಡಿದರು.

ವಿವಿಐಪಿಗಳ ಪ್ರಯಾಣಕ್ಕಾಗಿ ಕಸ್ಟಮ್ ನಿರ್ಮಿತ ಮತ್ತೊಂದು ಬಿ ೭೭೭ ವಿಮಾನವನ್ನು ನಂತರದ ದಿನಗಳಲ್ಲಿ ಬೋಯಿಂಗ್ನಿಂದ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ವಿವಿಐಪಿ ಪ್ರಯಾಣಕ್ಕಾಗಿ ಮರುಹೊಂದಿಸಲು ಬೋಯಿಂಗ್ಗೆ ಕಳುಹಿಸುವ ಮುನ್ನ ಎರಡು ವಿಮಾನಗಳು ೨೦೧೮ ರಲ್ಲಿ ಕೆಲವು ತಿಂಗಳುಗಳ ಕಾಲ ಏರ್ ಇಂಡಿಯಾದ ವಾಣಿಜ್ಯ ನೌಕೆಯ ಭಾಗವಾಗಿದ್ದವು.

ಎರಡು ವಿಮಾನಗಳ ಖರೀದಿ ಮತ್ತು ಮರುಹೊಂದಿಸುವಿಕೆಯ ಒಟ್ಟು ವೆಚ್ಚ ಸುಮಾರು, ,೪೦೦ ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ.

ಬಿ ೭೭೭ ವಿಮಾನಗಳು ಲಾರ್ಜ್ ಏರ್ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್ಮೆಶರ್ಸ್ (ಎಲ್ಐಆರ್ಸಿಎಂ) ಮತ್ತು ಸ್ವ-ಸಂರಕ್ಷಣಾ ಸೂಟ್ಗಳು (ಎಸ್ಪಿಎಸ್) ಎಂದು ಕರೆಯಲ್ಪಡುವ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತದೆ.

ಫೆಬ್ರುವರಿಯಲ್ಲಿ, ಅಮೆರಿಕ ಎರಡು ರಕ್ಷಣಾ ವ್ಯವಸ್ಥೆಗಳನ್ನು ೧೯೦ ಮಿಲಿಯನ್ (೧೯ ಕೋಟಿ) ರೂಪಾಯಿ ವೆಚ್ಚದಲ್ಲಿ ಭಾರತಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿತು.

ವಿವಿಐಪಿಗಳ ಪ್ರಯಾಣದ ಸಮಯದಲ್ಲಿ, ಏರ್ ಇಂಡಿಯಾದಲ್ಲಿ ಎರಡು ಬಿ ೭೭೭ ವಿಮಾನಗಳನ್ನು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್ಗಳು ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಸ್ತುತ, ರಾಷ್ಟಪತಿ, ಉಪರಾಷ್ಟ್ರಪತಿ, ಮತ್ತು ಪ್ರಧಾನ ಮಂತ್ರಿಗಳು ಏರ್ ಇಂಡಿಯಾದ ಬಿ ೭೪೭ ವಿಮಾನಗಳಲ್ಲಿ ಹಾರಾಟ ನಡೆಸಿದ್ದು, ಇದು ಏರ್ ಇಂಡಿಯಾ ಒನ್ ಎಂಬ ಕರೆ ಚಿಹ್ನೆಯನ್ನು ಹೊಂದಿದೆ.

ಏರ್ ಇಂಡಿಯಾ ಪೈಲಟ್ಗಳು ಬಿ ೭೪೭ ವಿಮಾನಗಳನ್ನು ಗಣ್ಯರಿಗಾಗಿ ಹಾರಿಸುತ್ತಾರೆ ಮತ್ತು ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ಎಲ್) ಅವುಗಳನ್ನು ನಿರ್ವಹಿಸುತ್ತದೆ.

ಬಿ ೭೪೭ ವಿಮಾನಗಳು ಗಣ್ಯರನ್ನು ಹಾರಿಸದಿದ್ದಾಗ, ಅವುಗಳನ್ನು ಭಾರತೀಯ ರಾಷ್ಟ್ರೀಯ ವಾಹಕವು ವಾಣಿಜ್ಯ ಕಾರ್ಯಾಚರಣೆಗಾಗಿ ಬಳಸುತ್ತದೆ.

ಕಸ್ಟಮ್ ನಿರ್ಮಿತ ಬಿ ೭೭೭ ವಿಮಾನಗಳನ್ನು ಗಣ್ಯರ ಪ್ರಯಾಣಕ್ಕೆ ಮಾತ್ರ ಬಳಸಲಾಗುತ್ತದೆ.

No comments:

Advertisement