My Blog List

Wednesday, November 4, 2020

ರಾಜಧಾನಿ ದೆಹಲಿಯಲ್ಲಿ ಕೊರೋನಾ 3ನೇ ಅಲೆ: ಕೇಜ್ರಿವಾಲ್

 ರಾಜಧಾನಿ ದೆಹಲಿಯಲ್ಲಿ ಕೊರೋನಾ 3ನೇ ಅಲೆ: ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನವೈರಸ್ ಕಾಯಿಲೆಯ (ಕೋವಿಡ್-೧೯) ಮೂರನೇ ಅಲೆ  ವರದಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2020 ನವೆಂಬರ್ 04ರ ಬುಧವಾರ ಹೇಳಿದರು.

೩೩ ಖಾಸಗಿ ಆಸ್ಪತ್ರೆಗಳಲ್ಲಿ ಶೇ.೮೦ರಷ್ಟು ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ಕಾಯ್ದಿರಿಸಿರುವ ನಗರ ಆಡಳಿತದ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ವಿರುದ್ಧ ದೆಹಲಿ ಸರ್ಕಾರವು ಸುಪ್ರೀಂಕೋರ್ಟಿಗೆ  ಮೇಲ್ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಮೂರನೇ ಅಲೆ ಅಪ್ಪಳಿಸಿದೆಯೇ ಎಂಬುದನ್ನು ನಿರ್ಧರಿಸಲು ಒಂದು ವಾರ ಕಾಲ ಕಾಯುತ್ತೇವೆ ಎಂದು ದೆಹಲಿ ಸರ್ಕಾರ ಹಿಂದೆ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಘೋಷಣೆ ಮಹತ್ವ ಪಡೆದಿದೆ.

ಮಂಗಳವಾರ ದೆಹಲಿಯಲ್ಲಿ ,೭೨೫ ಹೊಸ ಕೋವಿಡ್-೧೯ ಪ್ರಕರಣಗಳು ದಾಖಲಾದ ಬಳಿಕ ಮುಖ್ಯಮಂತ್ರಿಯವರು ಹೇಳಿಕೆ ನೀಡಿದ್ದು, ರಾಜಧಾನಿಯಲ್ಲಿ ಒಟ್ಟಾರೆ ೪೦೦,೦೦೦ ಕ್ಕೂ ಹೆಚ್ಚು ಕೊರೋನಾವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್-೧೯ ನಿರ್ವಹಣೆಯನ್ನು ಪರಿಶೀಲಿಸಲು ಗುರುವಾg ಸಭೆ ನಡೆಸುವುದಾಗಿ ಕೇಜ್ರಿವಾಲ್ ನುಡಿದರು.

"ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಕೋವಿಡ್-೧೯ ಪ್ರಕರಣಗಳ ಹೆಚ್ಚಳ ವರದಿಯಾಗುತ್ತಿದೆ ಎಂಬುದಾಗಿ  ಸಾರ್ವಜನಿಕರಿಗೆ ತಿಳಿಸಲು ನಾನು ಬಯಸುತ್ತೇನೆ. ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ಆರಂಭದಲ್ಲಿ ನಿತ್ಯ ಕೋವಿಡ್-೧೯ ಪ್ರಕರಣಗಳು ,೦೦೦ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಳಿಕೆಯ ದಾರಿಯಲ್ಲಿ ಇದ್ದವು ಎಂದು ಹಿರಂಕಿ ಗ್ರಾಮzಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದರು.

ಕೂಳೆಯನ್ನು (ಕೃಷಿ ತ್ಯಾಜ್ಯ) ಗೊಬ್ಬರವಾಗಿ ಪರಿವರ್ತಿಸಲು ಕೈಗೊಳ್ಳಲಾಗಿರುವ ಜೈವಿಕ ವಿಘಟನೆ ಪ್ರಕ್ರಿಯೆಯು ಪರಿಣಾಮಕಾರಿಯಾಗಿದೆಯೇ ಎಂದು ಪರಿಶೀಲಿಸಲು ಹಿರಂಕಿ ಗ್ರಾಮಕ್ಕೆ ಅವರು ಭೇಟಿ ನೀಡಿದ್ದರು.

ಏನಿದ್ದರೂ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಜನರಿಗೆ ಮನವಿ ಮಾಡಿದರು.

ಸದ್ಯ ದೆಹಲಿಯಲ್ಲಿ ಕೋವಿಡ್ -೧೯ ಹಾಸಿಗೆಗಳಿಗೆ  ಕೊರತೆ ಇಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ರೀತಿಯ ಆರೋಗ್ಯ ಮೂಲಸೌಕರ್ಯಗಳ ಕೊರತೆಯೂ ಇಲ್ಲ. ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇರುವ ಕೆಲವು ಐಸಿಯು ಹಾಸಿಗೆಗಳು ಮಾತ್ರ ಖಾಲಿ ಇರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಕೇಜ್ರಿವಾಲ್ ಹೇಳಿದರು.

ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡಬೇಕೇ ಬೇಡವೇ ಎಂಬ ಬಗ್ಗೆ ದೆಹಲಿ ಸರ್ಕಾರ ಗುರುವಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ನವೆಂಬರ್ ೧೪ರಂದು ದೀಪಾವಳಿ ಆಚರಿಸಲಾಗುತ್ತದೆ.

ಸಭೆಯಲ್ಲಿ ಪಟಾಕಿಗೆ ಅವಕಾಶ ನೀಡುವ ಬಗ್ಗೆ, ವಿಶೇಷವಾಗಿ ಐಸಿಯುಗಳು ಇರುವ ಜಾಗಗಳಲ್ಲಿ ಪಟಾಕಿ ಗಳನ್ನು ಸಿಡಿಸಲು ಅನುಮತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಸಂಜೆ ಗಂಟೆಗೆ ಸಭೆ ನಡೆಯಲಿದೆ ಎಂದು ಕೇಜ್ರಿವಾಲ್ ಹೇಳಿದರು.

ಮಂಗಳವಾರ ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿಯ ಪ್ರಮಾಣವು ಶೇ.೧೧.೨೯ರಷ್ಟು ಏರಿಕೆ ಕಂಡಿತ್ತು. ಹಬ್ಬದ ಋತುವಿನಲ್ಲಿ ಕೋವಿಡ್-೧೯ಕ್ಕೆ ಕಾರಣವಾಗುವ ಸಾರ್ಸ್-ಕೊವ್-, ಅತಿಯಾದ ಪ್ರಮಾಣದಲ್ಲಿ ಹರಡುತ್ತಿರುವುದ ಜೊತೆಗೆ ನೆರೆಯ ಕೃಷಿ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದ (ಯುಪಿ) ಭಾಗಗಳಲ್ಲಿ ಕೂಳೆ ಸುಡುವುದರಿಂದ ಉಂಟಾಗುತ್ತಿರುವ ವಾಯುಮಾಲಿನ್ಯವು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ವೈರುಧ್ಯವೆಂದರೆ, ಹೆಚ್ಚುತ್ತಿರುವ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.

ಕಳೆದ ೨೪ ಗಂಟೆಗಳಲ್ಲಿ ಪರೀಕ್ಷಿಸಲಾದ ೫೯,೫೪೦ ಸ್ವಾಬ್ ಮಾದರಿಗಳಲ್ಲಿ ೧೩,೫೬೦ ರಿವರ್ಸ್ ಟ್ರಾನ್ಸ್ ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ಟಿ-ಪಿಸಿಆರ್) ಪರೀಕ್ಷೆಗಳಾಗಿದ್ದವು. ಇದು ಕಳೆದ ಮೂರು ವಾರಗಳಲ್ಲಿಯೇ ಅತ್ಯಂತ ಕಡಿಮೆ ಆರ್ ಟಿ-ಪಿಸಿಆರ್ ಮಾದರಿಯ ಪರೀಕ್ಷೆಯಾಗಿದೆ ಎಂದು ದೆಹಲಿ ಸರ್ಕಾರದ ಬುಲೆಟಿನ್ ಮಂಗಳವಾರ ತಿಳಿಸಿದೆ.

No comments:

Advertisement