Wednesday, November 4, 2020

ದೆಹಲಿ ವಿಮಾನ ನಿಲ್ದಾಣದಲ್ಲಿ ೨ ವಿಮಾನಗಳಿಗೆ ಬೆದರಿಕೆ

 ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳಿಗೆ ಬೆದರಿಕೆ

ನವದೆಹಲಿ: ಲಂಡನ್ನಿಗೆ ಗುರುವಾರ ತೆರಳಬೇಕಾಗಿರುವ ಎರಡು ಏರ್ ಇಂಡಿಯಾ ವಿಮಾನಗಳಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020 ನವೆಂಬರ್ 04ರ ಬುಧವಾರ ಭದ್ರತೆ ಬಿಗಿಗೊಳಿಸಲಾಯಿತು.

ಎರಡು ಏರ್ ಇಂಡಿಯಾ ವಿಮಾನಗಳು ಗುರುವಾರ ಲಂಡನ್ನಿಗೆ ಪಯಣ ಬೆಳೆಸಬೇಕಾಗಿದ್ದು, ಅವುಗಳ ಹಾರಾಟಕ್ಕೆ ಅಡ್ಡಿ ಪಡಿಸುವುದಾಗಿ ಎರಡು ಕರೆಗಳು ವಿಮಾನ ನಿಲ್ದಾಣಕ್ಕೆ ಬಂದಿವೆ.

ಪೊಲೀಸರ ಪ್ರಕಾರ, ಅಮೆರಿಕ ಮೂಲದ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ವಿಮಾನಗಳು ಕಾರ್ಯಾಚರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೊಂಡಿದೆ.

ಗುರುವಾರ ಲಂಡನ್ ಗೆ ಹೊರಡುವ ಎರಡು ಏರ್ ಇಂಡಿಯಾ ವಿಮಾನಗಳಿಗೆ ಹಾರಾಟಕ್ಕೆ ಅನುಮತಿ ನೀಡುವುದಿಲ ಎಂದು ಸಿಖ್ಸ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಬೆದರಿಕೆ ಒಡ್ಡಿರುವ ಬಗ್ಗೆ ನಮಗೆ ವರದಿಗಳು ಲಭಿಸಿವೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸಿಪಿ ರಾಜೀವ್ ರಂಜನ್ ಹೇಳಿದರು.

ಬೆದರಿಕೆ ಕರೆಗಳು ಬಂದ ಬೆನ್ನಲ್ಲೇ ಎಲ್ಲ ಪಾಲುದಾರರ ಸಭೆ ನಡೆಸಿ, ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ಕಟ್ಟೆಚ್ಚg ವಹಿಸಲಾಯಿತು.

No comments:

Advertisement