ಐಎಎಫ್ ರಫೇಲ್ ವಿಮಾನದ ಎರಡನೇ ತಂಡ ಭಾರತಕ್ಕೆ
ನವದೆಹಲಿ: ಭಾರತೀಯ ವಾಯುಪಡೆಯ ಮೂರು ರಫೇಲ್ ಫೈಟರ್ ಜೆಟ್ಗಳ ಎರಡನೇ ತಂಡವು 2020 ನವೆಂಬರ್ 04ರ ಬುಧವಾರ ಫ್ರಾನ್ಸಿನಿಂದ ನೇರವಾಗಿ ಭಾರತಕ್ಕೆ ಬಂದಿತು.
"ಐಎಎಫ್ # ರಫೇಲ್ ವಿಮಾನದ ಎರಡನೇ ತಂಡವು ಪ್ರಾನ್ಸಿನಿಂದ ತಡೆರಹಿತವಾಗಿ ಹಾರಿದ ನಂತರ ೦೪ ನವೆಂಬರ್ ೨೦ ರಂದು ರಾತ್ರಿ ೮:೧೪ ಕ್ಕೆ ಭಾರತಕ್ಕೆ ಬಂದಿತು" ಎಂದು ಭಾರತೀಯ ವಾಯುಪಡೆಯು ಟ್ವೀಟ್ ಮಾಡಿತು.
‘ಮೂರು ಜೆಟ್ಗಳು ತಮ್ಮ ದಾರಿಯಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಪ್ರಯಾಣದ ಸಮಯದಲ್ಲಿ ಅವುಗಳಿಗೆ ಫ್ರೆಂಚ್ ಮತ್ತು ಭಾರತೀಯ ಟ್ಯಾಂಕರ್ಗಳು ಇಂಧನ ತುಂಬಿಸಲಿವೆ. ಜಾಮ್ನಗರದಲ್ಲಿ ಒಂದು ದಿನದ ವಿರಾಮದ ನಂತರ ಜೆಟ್ಗಳು ಅಂಬಾಲಾ ತಲುಪುವ ನಿರೀಕ್ಷೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದರು.
ಭಾರತೀಯ ವಾಯುಪಡೆಯು ಆದೇಶ ನೀಡಿದ್ದ ೩೬ ರಫೇಲ್ ವಿಮಾನಗಳ ಪೈಕಿ ಐದು ರಫೇಲ್ ಜೆಟ್ಗಳ ಮೊದಲ ತಂಡವು ಜುಲೈ ೨೯ ರಂದು ಅಬುಧಾಬಿ ಬಳಿಯ ಅಲ್ ದಫ್ರಾ ವಾಯುನೆಲೆಯಲ್ಲಿ ನಿಲುಗಡೆ ಮಾಡಿದ ನಂತರ ಅಂಬಾಲಾ ವಾಯುನೆಲೆಗೆ ತಲುಪಿತ್ತು. ಆದರೆ ಸೆಪ್ಟೆಂಬರ್ ೧೦ ರಂದು ಔಪಚಾರಿಕ ಸೇರ್ಪಡೆ ಸಮಾರಂಭ ನಡೆಯಿತು.
No comments:
Post a Comment