Monday, November 2, 2020

ಜಮ್ಮು-ಕಾಶ್ಮೀರದಲ್ಲಿ ಶೀಘ್ರ ಸ್ಥಳೀಯ ಸಂಸ್ಥೆ ಚುನಾವಣೆ

 ಜಮ್ಮು-ಕಾಶ್ಮೀರದಲ್ಲಿ ಶೀಘ್ರ ಸ್ಥಳೀಯ ಸಂಸ್ಥೆ ಚುನಾವಣೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಪಂಚಾಯತ್ ಮತ್ತು ಪುರಸಭೆ ಚುನಾವಣೆಯ ದಿನಾಂಕಗಳನ್ನು ನವೆಂಬರ್ ಅಥವಾ ರಂದು ಪ್ರಕಟಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ 2020 ನವೆಂಬರ್ 02ರ ಸೋಮವಾರ ಪ್ರಕಟಿಸಿದರು.

ಸುದ್ದಿ ಸಂಸ್ಥೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿನ್ಹ ಅವರು ವಿಷಯವನ್ನು ಬಹಿರಂಗ ಪಡಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳು ಮೂರು ಹಂತದ ಪಂಚಾಯತ್ ವ್ಯವಸ್ಥೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿದೆ ಎಂದು ವರ್ಷದ ಆಗಸ್ಟ್ ರಂದು ಕೇಂದ್ರಾಡಳಿತ ಪ್ರಾಂತ್ಯದ ದ್ವಿತೀಯ ಲೆಪ್ಟಿನೆಂಟ್ ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಿನ್ಹ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ೨೦೧೯ ಆಗಸ್ಟ್ ರಂದು ಮಹತ್ವದ ಬದಲಾವಣೆಗಳನ್ನು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕಳೆದ ವರ್ಷ ಆಗಸ್ಟ್ ೫ರಂದು ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.

ಪ್ರದೇಶದ ರಾಜಕೀಯ ಪ್ರಕ್ರಿಯೆಯನ್ನು ಪುನರಾರಂಭಿಸುವ ಪ್ರಯತ್ನವಾಗಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲಾಗುತ್ತಿದೆ ಎಂದು ಸುದ್ದಿ ಮೂಲಗಳು ಹೇಳಿವೆ.

"ನಾವು ಮೂರು ಹಂತದ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ. ೧೯೯೨ ರಲ್ಲಿ ಸಂಸತ್ತಿನಲ್ಲಿ ಜಾರಿಗೆ ಬಂದಾಗ ೭೩ ನೇ ತಿದ್ದುಪಡಿಯಲ್ಲಿ ದೇಶದಲ್ಲಿ ಮೂರು ಹಂತದ ಪಂಚಾಯಿತಿಗಳ ವ್ಯವಸ್ಥೆ ಇರಬೇಕೆಂದು ನಿರ್ಧರಿಸಲಾಯಿತು. ಈಗ ನವೆಂಬರ್ ಅಥವಾ ರಂದು ಚುನಾವಣೆ ( ನಿಟ್ಟಿನಲ್ಲಿ) ಘೋಷಿಸಲಾಗುವುದು ಎಂದು ಸಿನ್ಹ ಹೇಳಿದರು.

ಮುಂಬರುವ ಮತದಾನ ಪ್ರಕ್ರಿಯೆಯಲ್ಲಿ ಪಂಚ, ಸರಪಂಚ, ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಸದಸ್ಯರು ಮತ್ತು ಅಧ್ಯಕ್ಷರು ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಸದಸ್ಯರು ಮತ್ತು ಅವರ ಮುಖ್ಯಸ್ಥರ ಆಯ್ಕೆ ನಡೆಯಲಿದೆ. ಇವರೆಲ್ಲರೂ ಭವಿಷ್ಯದಲ್ಲಿ ಒಟ್ಟಾಗಿ ಹೆಚ್ಚು ಪ್ರಮುಖ ಪಾತ್ರಗಳನ್ನು ವಹಿಸಲಿದ್ದಾರೆ ಎಂದು ಸಿನ್ಹ ಹೇಳಿದರು.

ಅಧಿಕೃತ ಅಂಕಿಅಂಶಗಳ ಪ್ರಕಾರ, ಕಾಶ್ಮೀರದಲ್ಲಿ ಸುಮಾರು ೧೧,೫೦೦ ಪಂಚ ಮತ್ತು ೮೯೦ ಸರಪಂಚ ಸ್ಥಾನಗಳು ಖಾಲಿ ಇದ್ದರೆ, ಜಮ್ಮು ವಿಭಾಗದಲ್ಲಿ ೧೮೫ ಪಂಚ ಮತ್ತು ೧೨೪ ರಪಂಚ ಸ್ಥಾನಗಳು ಖಾಲಿ ಇವೆ. ೨೦೧೮ ರಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದ್ದವು, ಜಮ್ಮು ವಿಭಾಗದಲ್ಲಿ ಶೇಕಡಾ ೮೩. ಮತದಾನ ದಾಖಲಾಗಿದ್ದರೆ, ಆಗ ಲಡಾಖ್ ಕೂಡ ಇದ್ದ ಕಾಶ್ಮೀರ ಕಣಿವೆಯಲ್ಲಿ ಶೇಕಡಾ ೪೪.೪ರಷ್ಟು ಮತದಾನವಾಗಿತ್ತು.

ವರ್ಷದ ಅಕ್ಟೋಬರ್ ೧೭ ರಂದು ಕೇಂದ್ರವು ಜಮ್ಮು ಮತ್ತು ಕಾಶ್ಮೀರ ಪಂಚಾಯತಿ ರಾಜ್ ಕಾಯ್ದೆ ೧೯೮೯ಕ್ಕೆ  ತಿದ್ದುಪಡಿ ಮಾಡಲಾಗಿದ್ದು, ಡಿಡಿಸಿಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಕೇಂದ್ರಾಡಳಿತ ಪ್ರದೇಶದಲ್ಲಿ  ಜನರು ನೇರವಾಗಿ ಮತ ಚಲಾಯಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿನ ರಾಜಕೀಯ ಪಕ್ಷಗಳು ಇದನ್ನು ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ದುರ್ಬಲಗೊಳಿಸುವ ಮತ್ತು "ನಿರುತ್ಸಾಹಗೊಳಿಸುವ" ಪ್ರಯತ್ನವೆಂದು ದೂರಿವೆ.

೨೦೧೮ ರಲ್ಲಿ ಪಂಚಾಯತ್ ಚುನಾವಣೆಗಳು ಪಕ್ಷೇತರ ಆಧಾರದ ಮೇಲೆ ನಡೆದರೆ, ಪುರಸಭೆ ಚುನಾವಣೆ ಪಕ್ಷದ ಆಧಾರದ ಮೇಲೆ ನಡೆದಿತ್ತು. ನಂತರ, ಎರಡನೇ ಹಂತದ ಪಂಚಾಯತುಗಳನ್ನು ರೂಪಿಸುವ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಮತದಾನವೂ ಪಕ್ಷದ ಆಧಾರದ ಮೇಲೆ ನಡೆದಿತ್ತು.

ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ನೇತೃತ್ವದಲ್ಲಿದ್ದ ಮೂರನೇ ಹಂತದ ಪಂಚಾಯಿತಿಗಳನ್ನು ಬಿಡಿಸಿ ಚುನಾವಣೆಗಳು ಪೂರ್ಣಗೊಳಿಸುತ್ತವೆ. ಡಿಡಿಸಿಯ ಅವಧಿ ಐದು ವರ್ಷಗಳು, ಮತ್ತು ಚುನಾವಣಾ ಪ್ರಕ್ರಿಯೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡಲು ಅವಕಾಶ ನೀಡುತ್ತದೆ.

No comments:

Advertisement