ಗ್ರಾಹಕರ ಸುಖ-ದುಃಖ

My Blog List

Monday, November 2, 2020

ಇಮ್ರಾನ್ ಪಣ: ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಸ್ಥಾನಮಾನ

 ಇಮ್ರಾನ್ ಪಣ: ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಸ್ಥಾನಮಾನ

ನವದೆಹಲಿ/ ಇಸ್ಲಾಮಾಬಾದ್: ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದ ಒಂದು ಭಾಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಮ್ಮ ಸರ್ಕಾರವು ತಾತ್ಕಾಲಿಕ ಸ್ಥಾನಮಾನವನ್ನು ನೀಡಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಭಾರತವು ಇದನ್ನು ಅತ್ಯುಗ್ರವಾಗಿ ಖಂಡಿಸಿದೆ. ಖಾನ್ ಹೇಳಿಕೆಯು ಉಭಯ ರಾಷ್ಟ್ರಗಳ ಮಧ್ಯ ಹೊಸ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.

ಅಫ್ಘಾನಿಸ್ತಾನ ಮತ್ತು ಚೀನಾದ ಗಡಿಯಲ್ಲಿರುವ ಆಯಕಟ್ಟಿನ ಪ್ರಮುಖ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವು ಅಂದಾಜು ಎರಡು ದಶಲಕ್ಷ ಜನಸಂಖ್ಯೆಗೆ ನೆಲೆಯಾಗಿದೆ.

ಪಾಕಿಸ್ತಾನ ಮತ್ತು ಭಾರತ ೧೯೪೭ ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ನಡೆದ ಮೂರು ಸಮರಗಳಲ್ಲಿ ಎರಡು ಸಮರಗಳನ್ನು ಕಾಶ್ಮೀರದ ಪರ್ವತ ಪ್ರದೇಶಕ್ಕಾಗಿ ನಡೆಸಿವೆ.

ಭಾನುವಾರ, ಖಾನ್ ಅವರು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ರಾಜಧಾನಿ ಗಿಲ್ಗಿಟ್ ನಗರದಲ್ಲಿ 2020 ನವೆಂಬರ್ 02ರ ಭಾನುವಾರ ರಾಜಕೀಯ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು.

"ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನವನ್ನು ನೀಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ, ಇದು ಬಹಳ ಹಿಂದಿನ ಬೇಡಿಕೆಯಾಗಿದೆ" ಎಂದು ಖಾನ್ ಹೇಳಿದರು.

ಇಮ್ರಾನ್ ಖಾನ್ ಅವರ ಪ್ರಸ್ತಾಪಕ್ಕೆ ಪಾಕಿಸ್ತಾನದೊಳಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿಲ್ಲ, ಅಲ್ಲಿ ವಿರೋಧ ಪಕ್ಷಗಳು ಸೆಪ್ಟೆಂಬರ್‌ನಲ್ಲಿ ದೇಶದ ಸೇನೆ ಮತ್ತು ಗುಪ್ತಚರ ಮುಖ್ಯಸ್ಥರನ್ನು ರಹಸ್ಯವಾಗಿ ಭೇಟಿಯಾಗಿ ವಿಷಯದ ಬಗ್ಗೆ ಚರ್ಚಿಸಿ, ಗಿಲ್ಗಿಟ್-ಬಾಲ್ಟಿಸ್ತಾನ್ ಸ್ಥಾನಮಾನ ಹೆಚ್ಚಿಸಲು ಬೆಂಬಲ ನೀಡುವ ಭರವಸೆ ಕೊಟ್ಟಿರುವುದಾಗಿ ವಿರೋಧ ಪಕ್ಷಗಳ ಹಲವಾರು ನಾಯಕರು ಹೇಳಿದ್ದರು.

ಭಾರತದ ಖಂಡನೆ: ಆದಾಗ್ಯೂ, ಭಾರತದಲ್ಲಿ, ಖಾನ್ ಅವರ ಘೋಷಣೆಗೆ ವಿದೇಶಾಂಗ ಸಚಿವಾಲಯದಿಂದ ತೀವ್ರ ಖಂಡನೆ ವ್ಯಕ್ತಪಡಿಸಲಾಗಿದೆ.

ಪಾಕಿಸ್ತಾನ ಸರ್ಕಾರದ ಕ್ರಮವನ್ನು  "ದೃಢವಾಗಿ ತಿರಸ್ಕರಿಸುವುದಾಗಿ ಭಾರತ ಹೇಳಿದೆ.

"ಗಿಲ್ಗಿಟ್-ಬಾಲ್ಟಿಸ್ತಾನ ಎಂದು ಕರೆಯಲ್ಪಡುವ ಪ್ರದೇಶವನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ೧೯೪೭ರಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರತ ಒಕ್ಕೂಟಕ್ಕೆ ಸೇರ್ಪಡೆ ಮಾಡಲಾಗಿದ್ದು, ಇದನ್ನು ಬದಲಿಸಲು ಸಾಧ್ಯವಿಲ್ಲ, ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ ಎಂದು ನಾನು ಪುನರುಚ್ಚರಿಸುತ್ತೇನೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಶ್ರೀ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯಆಡಳಿತ, ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ಗಿಲ್ಗಿಟ್-ಬಾಲ್ಟಿಸ್ತಾನ್ ಜನರ ದೀರ್ಘಕಾಲದ ಬೇಡಿಕೆಯಾಗಿದೆ. ನಿರೀಕ್ಷಿತ ತಾತ್ಕಾಲಿಕ ಸುಧಾರಣೆಗಳು ಗಿಲ್ಗಿಟ್-ಬಾಲ್ಟಿಸ್ತಾನದ ಸ್ಥಳೀಯ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಪಾಕ್ ಪ್ರಧಾನಿಯನ್ನು ಸಮರ್ಥಿಸಿಕೊಂಡಿದೆ.

ಗಿಲ್ಗಿಟ್-ಬಾಲ್ಟಿಸ್ತಾನ್‌ವು ೬೦ ಬಿಲಿಯನ್ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಒಂದು ಪ್ರಮುಖ ಭಾಗವಾಗಿದ್ದು, ಯೋಜನೆಯ ಪ್ರಮುಖ ಭಾಗವು ಭೂಪ್ರದೇಶದ ಉತ್ತರದಲ್ಲಿರುವ ಕಶ್ಘರ್ ಮೂಲಕ ಹಾದು ಹೋಗುತ್ತದೆ. ಸಿಪಿಇಸಿ ಯೋಜನೆಗೂ ಭಾರತದ ತೀವ್ರ ಪ್ರತಿರೋಧವಿದೆ.

No comments:

Advertisement