Saturday, November 28, 2020

ಪಾಕ್ ಸಹಿತ ೧೩ ದೇಶಗಳ ನಾಗರಿಕರಿಗೆ ಯುಎಇ ಹೊಸ ವೀಸಾ ಅಮಾನತು

 ಪಾಕ್ ಸಹಿತ ೧೩ ದೇಶಗಳ ನಾಗರಿಕರಿಗೆ  ಯುಎಇ  ಹೊಸ ವೀಸಾ ಅಮಾನತು

ನವದೆಹಲಿ: ಪಾಕಿಸ್ತಾನದ ನಾಗರಿಕರು ಸೇರಿದಂತೆ ಒಟ್ಟು ೧೩ ದೇಶಗಳ ನಾಗರಿಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೊಸ ವೀಸಾಗಳನ್ನು ಅಮಾನತುಗೊಳಿಸಿದೆ.

ಪಾಕಿಸ್ತಾನ, ಇರಾನ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ದೇಶಗಳ ನಾಗರಿಕರಿಗೆ ಹೊಸ ವೀಸಾ ನೀಡುವುದನ್ನು  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಲ್ಲಿಸಿದೆ ಎಂದು ವರದಿ 2020 ನವೆಂಬರ್ 28ರ ಶನಿವಾರ ತಿಳಿಸಿತು.

ಭದ್ರತಾ ಕಾಳಜಿಗಳಿಗಾಗಿ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸುದ್ದಿ ಮೂಲ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿದೆ. ಆದರೆ ಭದ್ರತಾ ಕಾಳಜಿU ವಿವರಗಳನ್ನು ಸುದ್ದಿ ಮೂಲ ನೀಡಿಲ್ಲ ಎಂದು ವರದಿ ಹೇಳಿದೆ.

ವೀಸಾ ನೀಡಿಕೆಯ ಅಮಾನತು ನವೆಂಬರ್ ೧೮ ರಿಂದ ಜಾರಿಗೆ ಬಂದಿದ್ದು, ಮುಂದಿನ ಸೂಚನೆ ಬರುವವರೆಗೂ ಮುಂದುವರೆಯಲಿದೆ ಎಂದು ದುಬೈ ವಿಮಾನ ನಿಲ್ದಾಣ ಮುಕ್ತ ವಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಮಾನತು ಪ್ರಾಥಮಿಕವಾಗಿ ಹೊಸ ಉದ್ಯೋಗ ಮತ್ತು ಪ್ರವಾಸಿ ವೀಸಾವನ್ನು ಗುರಿಯಾಗಿಸಿದೆ. ನಿಷೇಧಕ್ಕೆ ಯಾವುದೇ ಅಪವಾದಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ವಾರ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಯುಎಇ ತನ್ನ ನಾಗರಿಕರಿಗೆ ಹೊಸ ವೀಸಾಗಳ ಪ್ರಕ್ರಿಯೆಯನ್ನು ನಿಲ್ಲಿಸಿದೆ ಎಂದು ಹೇಳಿತ್ತು. ಆದಾಗ್ಯೂ, ಈಗಾಗಲೇ ಮಾನ್ಯ ವೀಸಾಗಳನ್ನು ಹೊಂದಿರುವ ಜನರ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯ ಹೇಳಿತ್ತು.

ಪಟ್ಟಿ ಮಾಡಲಾಗಿರುವ ಟರ್ಕಿಯಂತಹ ಕೆಲವು ದೇಶಗಳೊಂದಿಗೆ ಯುಎಇ ಸಂಬಂಧ ಬಿಗಡಾಯಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಯುಎಇ ವೀಸಾ ನಿಷೇಧಿತ ದೇಶಗಳು

ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ತಾತ್ಕಾಲಿಕ ವೀಸಾ ನಿಷೇಧವನ್ನು ಎದುರಿಸುತ್ತಿರುವ ೧೩ ದೇಶಗಳ ಪಟ್ಟಿ ಇಲ್ಲಿದೆ:

. ಪಾಕಿಸ್ತಾನ

. ಇರಾನ್

. ಅಫ್ಘಾನಿಸ್ತಾನ

. ಸಿರಿಯಾ

. ಸೋಮಾಲಿಯಾ

. ಲಿಬಿಯಾ

. ಯೆಮೆನ್

. ಅಲ್ಜೀರಿಯಾ

. ಇರಾಕ್

೧೦. ಟರ್ಕಿ

೧೧. ಲೆಬನಾನ್

೧೨. ಕೀನ್ಯಾ

೧೩. ಟುನೀಶಿಯಾ

No comments:

Advertisement