ಬಿಹಾರ ಚುನಾವಣೆ ಎರಡನೇ ಹಂತ: ಶೇಕಡಾ ೫೩.೫೧ ಮತದಾನ
ನವದೆಹಲಿ: ಬಿಹಾರ ವಿಧಾನಸಭೆಗಾಗಿ 2020 ನವೆಂಬರ್ 03ರ ಮಂಗಳವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇಕಡಾ ೫೩.೫೧ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ ಎಂದು ವರದಿಗಳು ಹೇಳಿವೆ.
ಸಂಜೆ ೫ ರವರೆಗೆ ಶೇಕಡಾ ೫೧ರಷ್ಟು ಮತದಾನವಾಗಿರುವ ವರದಿಗಳು ಬಂದಿವೆ ಎಂದು ಇದಕ್ಕೆ ಮುನ್ನ ಚುನಾವಣಾ ಆಯೋಗದ ಮೂಲಗಳು ಹೇಳಿದ್ದವು. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಹಾರದ ೯೪ ಕ್ಷೇತ್ರಗಳಲ್ಲಿ ಒಟ್ಟು ೨.೮೫ ಕೋಟಿ ಮತದಾರರ ಪೈಕಿ ೫೩.೫೧ರಷ್ಟು ಜನರು ಮಂಗಳವಾರ ಎರಡನೇ ಹಂತದ ಮತದಾನದಲ್ಲಿ ಸಂಜೆ ೫ ಗಂಟೆಯವರೆಗೆ ತಮ್ಮ ಮತದಾನವನ್ನು ಚಲಾಯಿಸಿದ್ದಾರೆ.
ಅಂಕಿ ಸಂಖ್ಯೆಗಳ ಪ್ರಕಾರ, ಮಂಗಳವಾರ ಮಧ್ಯಾಹ್ನದವರೆಗೆ ೧೭ ಜಿಲ್ಲೆಗಳ ೯೪ ಬಿಹಾರ ವಿಧಾನಸಭಾ ವಿಭಾಗಗಳಲ್ಲಿ ಸರಾಸರಿ ೩೨.೮೨ ರಷ್ಟು ಮತದಾನ ದಾಖಲಾಗಿತ್ತು. ಮುಜಾಫರ್ಪುರದಲ್ಲಿ ಶೇಕಡಾ ೪೧.೨೫ರಷ್ಟು ಮತದಾನವಾದರೆ ಆಗಿದ್ದರೆ, ಪಶ್ಚಿಮ ಚಂಪಾರನ್ನಲ್ಲಿ ಶೇಕಡಾ ೩೯.೩೪, ಖಾಗರಿಯಾ ೩೮.೧೧, ಮತ್ತು ಸಮಸ್ತಿಪುರದಲ್ಲಿ ಶೇಕಡಾ ೩೬.೯೯ ಮತದಾನ ೧ ಗಂಟೆಯವರೆಗೆ ದಾಖಲಾಗಿತ್ತು.
ವೈಶಾಲಿಯಲ್ಲಿ ಶೇಕಡಾ ೩೨.೯೭, ಸರನ್ ಶೇಕಡಾ ೨೯.೮೮, ಬೆಗುಸರಾಯ್ಯಲ್ಲಿ ಶೇಕಡಾ ೩೬.೧೫, ಭಾಗಲ್ಪುರ್ದಲ್ಲಿ ಶೇಕಡಾ ೩೪.೯೯, ನಳಂದದಲ್ಲಿ ಶೇಕಡಾ ೩೫.೩೧, ಪಾಟ್ನಾದಲ್ಲಿ ಶೇಕಡಾ ೨೮, ಪೂರ್ವ ಚಂಪಾರನ್ ೩೦.೭೯, ಶಿಯೋಹರ್ ೨೯.೭೫, ಸೀತಾಮಡಿಯಲ್ಲಿ ಶೇಕಡಾ ೩೩.೨೮, ಮಧುಬಾನಿ ೩೦.೭೯, ಗೋಪಾಲ್ಗಂಗ್ ೩೩.೫೦, ಸಿವಾನ್ ೨೯.೮೯ ಮತ ಚಲಾವಣೆಯಾಗಿತ್ತು ಎಂದು ವರದಿಗಳು ಹೇಳಿವೆ.
ಏತನ್ಮಧ್ಯೆ, ಮಧುಬಾನಿಯ ಹರ್ಲಾಕಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚುನಾವಣಾ ಸಭೆಯಲ್ಲಿ ಈರುಳ್ಳಿ ಎಸೆದ ಘಟನೆ ಘಟಿಸಿತು.
ಎನ್ ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾಘಟಬಂಧನ್ ಅಭ್ಯರ್ಥಿಗಳನ್ನು ಬೆಂಬಲಿಸಿ ಆರ್ಡಿಎ ನಾಯಕ ತೇಜಸ್ವಿ ಯಾದವ್ ಅವರ ಪ್ರಚಾರ ಭಾಷಣಗಳ ಬಳಿಕ ಬಿಹಾರ ವಿಧಾನಸಭಾ ಚುನಾವಣೆಯ ೨ ನೇ ಹಂತದ ಮತದಾನ ಬೆಳಗ್ಗೆ ಆರಂಭವಾಯಿತು.
ಮೊದಲಿಗೆ ಮಂದಗತಿಯಲ್ಲಿದ್ದ ಮತದಾನ ಬಿಸಿಲೇರುತ್ತಿದ್ದಂತೆಯೇ ಬಿರುಸಾಯಿತು. ಬಹಳಷ್ಟು ಕಡೆಗಳಲ್ಲಿ ಮತದಾನಕ್ಕಾಗಿ ಮತದಾರರು ಸಾಲುಗಟ್ಟಿದ್ದೂ ಕಂಡು ಬಂತು.
೧೭ ಜಿಲ್ಲೆಗ ೯೪ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯಿತು. ಚುನಾವಣಾ ಆಯೋಗದ ಪ್ರಕಾರ, ೨.೮೫ ಕೋಟಿಗೂ ಹೆಚ್ಚು ಮತದಾರರು ೧,೪೬೩ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುತ್ತಾರೆ. ಅಭ್ಯರ್ಥಿಗಳ ಪೈಕಿ ೧೩೧೬ ಪುರುಷರು, ೧೪೬ ಮಹಿಳೆಯರು ಮತ್ತು ಒಬ್ಬ ದ್ವಿಲಿಂಗಿಯಾಗಿದ್ದಾರೆ.
ಒಟ್ಟು ೨,೮೫,೫೦,೨೮೫ ಮತದಾರರಲ್ಲಿ ೧,೫೦,೩೩,೦೩೪ ಪುರುಷರು, ೧,೩೫,೧೬,೨೭೧ ಮಹಿಳೆಯರು ಮತ್ತು ೯೮೦ ಉಭಯಲಿಂಗಿಗಳು ಎಂದು ಮತದಾನ ಸಮಿತಿಯ ಅಂಕಿ ಅಂಶಗಳು ತಿಳಿಸಿವೆ.
೧೮,೮೨೩ ಮತಗಟ್ಟೆಗಳಲ್ಲಿ ಒಟ್ಟು ೪೧,೩೬೨ ಬೂತ್ಗಳನ್ನು ಸ್ಥಾಪಿಸಲಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಹಂತದಲ್ಲಿ ಮಹಾರಾಜಗಂಜ್ ಕ್ಷೇತ್ರದಲ್ಲಿ ಗರಿಷ್ಠ ೨೭ ಅಭ್ಯರ್ಥಿಗಳಿದ್ದರೆ, ಕನಿಷ್ಠ ನಾಲ್ವರು ದಾರೌಲಿ ಕ್ಷೇತ್ರದಿಂದ (ಎಸ್ಸಿ) ಸ್ಪರ್ಧಿಸಿದ್ದಾರೆ.
ಪಶ್ಚಿಮ ಚಂಪಾರನ್, ಪೂರ್ವ ಚಂಪಾರನ್, ಶಿಯೋಹರ್, ಸೀತಮಾರ್ಹಿ, ಮಧುಬಾನಿ, ದರ್ಬಂಗಾ, ಮುಜಾಫರ್ಪುರ್, ಗೋಪಾಲ್ಗಂಜ್, ಸಿವಾನ್, ಸರನ್, ವೈಶಾಲಿ, ಸಮಸ್ತಿಪುರ, ಬೆಗುಸರೈ, ಖಾಗಲೂರಿಯಾ, ಭಾಗಲ್ ಪಾಟ್ನಾ ಜಿಲ್ಲೆಗಳಲ್ಲಿ ಮಂಗಳವಾರ ಚುನಾವಣೆ ನಡೆಯಿತು.
No comments:
Post a Comment