Tuesday, December 29, 2020

ರೂಪಾಂತರ ಕೊರೋನಾವೈರಸ್ ವಿರುದ್ಧವೂ ಲಸಿಕೆ ಪರಿಣಾಮಕಾರಿ

 ರೂಪಾಂತರ ಕೊರೋನಾವೈರಸ್ ವಿರುದ್ಧವೂ ಲಸಿಕೆ ಪರಿಣಾಮಕಾರಿ

ನವದೆಹಲಿ: ಕೋವಿಡ್ -೧೯ ಲಸಿಕೆಗಳು ವೈರಸ್ಸಿನ ಹೊಸ ರೂಪಾಂತರಗಳ ವಿರುದ್ಧ ಕಾರ್ಯನಿರ್ವಹಿಸಲಿವೆ. ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಿಂದ ವರದಿಯಾದ ಸಾರ್ಸ್-ಕೊವ್- ರೂಪಾಂತರಗಳ ವಿರುದ್ಧ ರಕ್ಷಣೆ ನೀಡಲು ಪ್ರಸ್ತುತ ಲಸಿಕೆಗಳು ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸರ್ಕಾರ 2020 ಡಿಸೆಂಬರ್ 2020ರ ಮಂಗಳವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್, ಹೊಸ ರೂಪಾಂತರವು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಇದುವರೆಗೂ ಕಂಡುಬಂದಿಲ್ಲ ಎಂದು ಹೇಳಿದರು.

"ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಿಂದ ವರದಿಯಾದ ಕೋವಿಡ್- ೧೯ ರೂಪಾಂತರಗಳಿಂದ ರಕ್ಷಿಸಲು ಪ್ರಸ್ತುತ ಲಸಿಕೆಗಳು ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ಲಸಿಕೆಗಳು ಸ್ಪೈಕ್ ಪ್ರೋಟೀನನ್ನು  ಗುರಿಯಾಗಿರಿಸಿಕೊಳ್ಳುತ್ತವೆ, ಇದರಲ್ಲಿನ ರೂಪಾಂತರಗಳಲ್ಲಿ ಬದಲಾವಣೆಗಳಿ, ಆದರೆ ಲಸಿಕೆಗಳು ವ್ಯಾಪಕ ಶ್ರೇಣಿಯಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ರಕ್ಷಣಾತ್ಮಕ ಪ್ರತಿಕಾಯಗಳನು ಉತ್ಪಾದಿಸಲು ಉತ್ತೇಜನ ನೀಡುತ್ತವೆ ಎಂದು ಅವರು ವಿವರಿಸಿದರು.

ಹೊಸ ಕೋವಿಡ್-೧೯ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ ಪಾಲ್ ಹೇಳಿದರು.

"ನಾವು ಹೊಸ ಕೋವಿಡ್-೧೯ ಪ್ರಕರಣಗಳು, ಸಕ್ರಿಯ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಇಳಿಮುಖವನ್ನು ನಿರಂತರವಾಗಿ ತೋರಿಸುತ್ತಿದ್ದೇವೆ, ಇದು ಬಹಳ ಧೈರ್ಯ ತುಂಬುತ್ತದೆ. ವಿಶೇಷವಾಗಿ ಹಲವಾರು ರಾಷ್ಟ್ರಗಳು ವಿನಾಶಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅವಧಿಯಲ್ಲಿ ಇದು ಎದ್ದು ಕಾಣುತ್ತದೆ ಎಂದು ಪಾಲ್ ಹೇಳಿದರು.

ಶೀತ ವಾತಾವರಣದಲ್ಲಿ ಜನಸಂಖ್ಯೆಯ ಬಹುಪಾಲು ಜನರು ಇನ್ನೂ ಸೋಂಕಿಗೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. "ಇಂಗ್ಲೆಂಡ್ ರೂಪಾಂತರವು ಹಲವಾರು ಇತರ ದೇಶಗಳಿಗೆ ಮತ್ತು ಭಾರತಕ್ಕೂ ಪ್ರಯಾಣಿಸಿದೆ, ರೂಪಾಂತರವು ತನ್ನದೇ ಆದ ಓಟವನ್ನು ಹೊಂದಿರಬಹುದು ಮತ್ತು ನಾವು ಬಹಳ ಜಾಗರೂಕರಾಗಿರಬೇಕು" ಎಂದು ಪಾಲ್ ಹೇಳಿದರು.

ಕೊರೋನಾವೈರಸ್ ಸೋಂಕಿಗೆ ಒಳಗಾದವರ ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ವಿಘಟನೆಯನ್ನು ನೀಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ’ದೇಶದಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇಕಡಾ ೬೩ರಷ್ಟು ಪುರುಷರಲ್ಲಿ ಮತ್ತು ಶೇಕಡಾ ೩೭ರಷ್ಟು ಮಹಿಳೆಯರಲ್ಲಿ ಪ್ರಕರಣಗಳು ವರದಿಯಾಗಿವೆ. "೧೭ ವರ್ಷಕ್ಕಿಂತ ಕಡಿಮೆಯವರಲ್ಲಿ ಶೇಕಡಾ ಪ್ರಕರಣಗಳು,  ೧೮-೨೫ ವರ್ಷ ವಯಸ್ಸಿನವರಲ್ಲಿ ಶೇಕಡಾ ೧೩ ಪ್ರಕರಣಗಳು, ೨೬-೪೪ ವರ್ಷ ವಯಸ್ಸಿನವರಲ್ಲಿ ಶೇಕಡಾ ೩೯ ಪ್ರಕರಣಗಳು, ೪೫-೬೦ ವರ್ಷದ ಗುಂಪಿನಲ್ಲಿ ಶೇಕಡಾ ೨೬ ಪ್ರಕರಣಗಳು ಮತ್ತು ೬೦ ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇಕಡಾ ೧೪ ಪ್ರಕರಣಗಳು ಕಂಡು ಬಂದಿವೆ ಎಂದು  ಹೇಳಿದರು.

ಶೇಕಡಾ ೭೦ ರಷ್ಟು ಕೋವಿಡ್ ಸಾವುಗಳು ಪುರುಷರಲ್ಲಿ ವರದಿಯಾಗಿವೆ ಮತ್ತು ಕಾಯಿಲೆಯಿಂದಾಗಿ  ಶೇಕಡಾ ೪೫ರಷ್ಟು ಸಾವುಗಳು ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ವರದಿಯಾಗಿದೆ ಎಂದು ಭೂಷಣ್ ಹೇಳಿದರು.

ಕೋವಿಡ್ -೧೯ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ತಿಂಗಳ ನಂತರ . ಲಕ್ಷ ಎಂದು ದಾಖಲಿಸಲಾಗಿದೆ, ಮತ್ತು ಸಂಚಿತ ಸಕಾರಾತ್ಮಕ ಪ್ರಮಾಣವ ಶೇಕಡಾ .೦೨ ರಷ್ಟಿದ್ದರೆ, ಕಳೆದ ವಾರದಲ್ಲಿ ಸಕಾರಾತ್ಮಕತೆಯ ಪ್ರಮಾಣವು ಶೇಕಡಾ .೨೫ ರಷ್ಟಕ್ಕೆ ಇಳಿದಿದೆ ಎಂದು ಅವರು ಹೇಳಿದರು.

"ಒಟ್ಟು ಸಕ್ರಿಯ ಕೋವಿಡ್ -೧೯ ಪ್ರಕರಣಗಳಲ್ಲಿ ೬೦ ಪ್ರತಿಶತದಷ್ಟು ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡು ಬಂದವು ಎಂದು ಅವರು ಹೇಳಿದರು.

No comments:

Advertisement