My Blog List

Tuesday, December 8, 2020

ಭಾರತದಲ್ಲಿ ಹೂಡಿಕೆಗೆ ಕಾರ್ಯಪಡೆ ರಚನೆ: ಮೋದಿ-ಎಮಿರ್ ನಿರ್ಧಾರ

 ಭಾರತದಲ್ಲಿ ಹೂಡಿಕೆಗೆ ಕಾರ್ಯಪಡೆ ರಚನೆ: ಮೋದಿ-ಎಮಿರ್ ನಿರ್ಧಾರ

ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಆರ್ಥಿಕ ದುಷ್ಪರಿಣಾಮವನ್ನು ನಿವಾರಿಸಲು ಕತಾರ್ ಹೂಡಿಕೆ ಪ್ರಾಧಿಕಾರದ ಹೂಡಿಕೆಗಳಿಗೆ ಅನುಕೂಲವಾಗುವಂತೆ ವಿಶೇಷ ಕಾರ್ಯಪಡೆಯನ್ನು ರಚಿಸಲು ಭಾರತ ಮತ್ತು ಕತಾರ್ 2020 ಡಿಸೆಂಬರ್ 08ರ ಮಂಗಳವಾರ ನಿರ್ಧರಿಸಿದವು.

ಕೋವಿಡ್ -೧೯ರ ಆರ್ಥಿಕ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಪ್ರಮುಖ ದೇಶಗಳನ್ನು ತಲುಪುವ  ಭಾರತದ ಯತ್ನದ ಮುಂದುವರಿದ ಭಾಗವಾಗಿ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದ ವೇಳೆಯಲ್ಲಿ ಕಾರ್ಯಪಡೆ ರಚನೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಭಾರತದ ಸಂಪೂರ್ಣ ಇಂಧನ ಮೌಲ್ಯ ಸರಪಳಿಯಲ್ಲಿ ಸಂಭವನೀಯ ಕತಾರಿ ಹೂಡಿಕೆಗಳತ್ತ ಉಭಯ ನಾಯಕರು ಮಾತುಕತೆ ವೇಳೆ ಬೆಳಕು ಚೆಲ್ಲಿದರು.

ಕತಾರ್ ಮತ್ತು ಕುವೈತ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಭೇಟಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಲೀಧರನ್ ಅವರು ಒಮಾನ್ಗೆ ಪ್ರವಾಸ ಕೈಗೊಳ್ಳುವ ಮುನ್ನ ಮಂಗಳವಾರ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸೌದಿ ಅರೇಬಿಯಾಗಳಿಗೆ ತಮ್ಮ ಮೊದಲ ಭೇಟಿಯನ್ನು ಮಂಗಳವಾರ ಪ್ರಾರಂಭಿಸಿದ್ದಾರೆ.

ತೊಡಗಿಸಿಕೊಳ್ಳುವಿಕೆಯ ಉಪಕ್ರಮಗಳು ಪ್ರಸ್ತುತ ಪ್ರಶ್ಚಿಮ ಏಷ್ಯಾವನ್ನು vಲುಪುವ ಭಾರತದ ಯತ್ನಗಳ ಭಾಗವಾಗಿದೆ.

ಭಾರತದ ವಿಸ್ತೃತ ನೆರೆಹೊರೆಯ ಭಾಗವಾಗಿ ಸುಮಾರು ೯೦ ಲಕ್ಷ (ಒಂಬತ್ತು ಮಿಲಿಯನ್) ವಲಸಿಗರಿಗೆ ನೆಲೆಯಾಗಿರುವ ದೇಶಗಳನ್ನು ತಲುಪಲು ಭಾರತ ಯತ್ನಿಸಿದೆ.

ಭಾರತ ಮತ್ತು ಕತಾರ್ ನಾಯಕರು ಹೂಡಿಕೆ ಹರಿವು ಮತ್ತು ಇಂಧನ ಸುರಕ್ಷತೆಯಲ್ಲಿ ಉಭಯ ಕಡೆಯವರ ನಡುವಣದೃಢವಾದ ಸಹಕಾರ ಕುರಿತು ಚರ್ಚಿಸಿದರು ಮತ್ತುಕತಾರ್ ಹೂಡಿಕೆ ಪ್ರಾಧಿಕಾರವು ಭಾರತಕ್ಕೆ ಹೂಡಿಕೆಗಳನ್ನು ಮತ್ತಷ್ಟು ಸುಗಮಗೊಳಿಸಲು ವಿಶೇಷ ಕಾರ್ಯಪಡೆ ರಚಿಸಲು ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು.

ಭಾರತದ ಸಂಪೂರ್ಣ ಇಂಧನ ಮೌಲ್ಯ ಸರಪಳಿಯಲ್ಲಿ ಕತಾರಿ ಹೂಡಿಕೆಗಳನ್ನು ಅನ್ವೇಷಿಸಲು ಉಭಯ ದೇಶಗಳ ನಾಯಕರು ನಿರ್ಧರಿಸಿದರು ಮತ್ತು ಹೂಡಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿನ ಇತ್ತೀಚಿನ ಸಕಾರಾತ್ಮಕ ಬೆಳವಣಿಗೆಗಳನ್ನು ಪರಿಶೀಲಿಸಿದರು.

ಮುಂಬರುವ ಕತಾರ್ ರಾಷ್ಟ್ರೀಯ ದಿನ ಕತಾರ್ಗಾಗಿ ಮೋದಿ ತಮ್ಮ ಶುಭಾಶಯಗಳನ್ನು ಎಮಿರ್ಗೆ ತಿಳಿಸಿದರು, ಅಲ್-ಥಾನಿ ಅವರು ಕತಾರ್ ಭಾರತೀಯ ಸಮುದಾಯವು ಆಚರಣೆಗಳಲ್ಲಿ ಭಾಗವಹಿಸುವ ಉತ್ಸಾಹವನ್ನು ಶ್ಲಾಘಿಸಿದರು. ನಾಯಕರು ನಿಯಮಿತವಾಗಿ ಸಂಪರ್ಕದಲ್ಲಿರಲು ಒಪ್ಪಿಕೊಂಡರು ಮತ್ತು ಕೋವಿಡ್ -೧೯ ಸಾಂಕ್ರಾಮಿಕದಿಂದ ಉಂಟಾದ ಪರಿಸ್ಥಿತಿಯ ಸಾಮಾನ್ಯೀಕರಣದ ನಂತರ ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶವನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

ಇತ್ತೀಚಿನ ವಾರಗಳಲ್ಲಿ, ಭಾರತವು ಪಶ್ಚಿಮ ಏಷ್ಯಾದ ಭಾರತೀಯ ಕಾರ್ಮಿಕರ ಹಿತಾಸಕ್ತಿಗಳ ಮೇಲೆ ಗಮನ ಕೇಂದ್ರೀಕರಿಸಿದೆ ಮತ್ತು ಕೋವಿಡ್ -೧೯ ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಿದ್ದರ ಮಧ್ಯೆ ಕೆಲಸ ಪುನಾರಂಭವನ್ನು ಬಯಸುವ ಹೆಚ್ಚಿನ ಸಂಖ್ಯೆಯ ಭಾರತೀಯ ಕಾರ್ಮಿಕರು ಮತ್ತು ವೃತ್ತಿಪರರು ಹಿಂದಿರುಗುವ ವಿಷಯವನ್ನು ಜೈಶಂಕರ್ ಪ್ರಸ್ತಾಪಿಸಿದ್ದರು.

ಕಳೆದ ತಿಂಗಳು ಗಲ್ಫ್ ಕೋಆಪರೇಷನ್ ಕೌನ್ಸಿಲ್ (ಜಿಸಿಸಿ) ತ್ರಿಕೋನದೊಂದಿಗೆ ನಡೆದ ವಾಸ್ತವ ಸಭೆಯಲ್ಲಿ ಕತಾರ್, ಯುಎಇ, ಸೌದಿ ಅರೇಬಿಯಾ, ಕುವೈತ್ ಮತ್ತು ಬಹ್ರೇನ್ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾಂಕ್ರಾಮಿಕ ರೋಗದ ಮಧ್ಯೆ ಭಾರತವು ಪಶ್ಚಿಮ ಏಷ್ಯಾಕ್ಕೆ ಔಷಧಗಳನ್ನು ಮತ್ತು ವೈದ್ಯಕೀಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರವಾನಿಸಿತ್ತು ಮತ್ತು ಆಹಾರ ಮತ್ತು ಅಗತ್ಯ ಸಾಮಗ್ರಿಗಳಿಗೆ ಯಾವುದೇ ಅಡ್ಡಿ ಉಂಟಾಗದಂತೆ ನೋಡಿಕೊಂಡಿತ್ತು. ಇದನ್ನು ಜಿಸಿಸಿ ರಾಜ್ಯಗಳು ಶ್ಲಾಘಿಸಿವೆ.

No comments:

Advertisement