Thursday, December 31, 2020

‘ದವಾಯೀ ಭಿ, ಕಡಾಯಿ ಭಿ’: ಹೊಸ ವರ್ಷಕ್ಕೆ ಪ್ರಧಾನಿ ಮಂತ್ರ

  ‘ದವಾಯೀ ಭಿ, ಕಡಾಯಿ ಭಿ’: ಹೊಸ ವರ್ಷಕ್ಕೆ ಪ್ರಧಾನಿ ಮಂತ್ರ

ನವದೆಹಲಿ: ರಾಜ್ಕೋಟ್ ಏಮ್ಸ್ಗೆ 2020 ಡಿಸೆಂಬರ್ 31ರ ಗುರುವಾರ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದಲ್ಲಿ ಕೊರೋನಾವೈರಸ್ಸನ್ನು  ಔಷಧದ ಜೊತೆಗೆ ಎಚ್ಚರಿಕೆ ವಹಿಸುವ ಮೂಲಕ ಎದುರಿಸಬೇಕು ಎಂದು ಕರೆ ನೀಡಿದರು.

ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ಪ್ರಾಣವನ್ನೇ ಪಣಕ್ಕಿತು ಜನರನ್ನು ಸಂರಕ್ಷಿಸಿದ ಕೊರೋನಾ ವಾರಿಯರ್ಗಳನ್ನು ಮರೆಯಬಾರದು ಎಂದು ನುಡಿದ ಅವರು ಲಸಿಕೆ ತೆಗೆದುಕೊಂಡ ಬಳಿಕವೂ ಎಚ್ಚರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ವಾರಿಯರ್ಗಳನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಸ್ವಾಸ್ಥ್ಯ ಹಿ ಸಂಪದಾ ಹೈ (ಆರೋಗ್ಯವೇ ಸಂಪತ್ತು), ೨೦೨೦ನೇ ವರ್ಷದಲ್ಲಿ ನಮಗೆ ಇದನ್ನು ಕಲಿಸಿಕೊಟ್ಟಿದೆ. ವರ್ಷ ಪೂರ್ತಿ ಸವಾಲುಗಳ ವರ್ಷವಾಗಿತ್ತು. ಆದ್ದರಿಂದ ವರ್ಷದ ಕೊನೆಯ ದಿನವಾದ ಇಂದು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಕೊರೋನಾ ಯೋಧರನ್ನು ಸ್ಮರಿಸಬೇಕು. ನಾನು ಅವರಿಗೆ ಶಿರಬಾಗುತ್ತೇನೆಎಂದು ಮೋದಿ ನುಡಿದರು.

ಸಾಮೂಹಿಕ ಲಸಿಕೆ ಕಾರ್ಯಕಮಕ್ಕೆ ದೇಶ ಸಿದ್ಧವಾಗುತ್ತಿದೆ. ಹೊಸ ವರ್ಷವು ಚಿಕಿತ್ಸೆಯ ಭರವಸೆಯೊಂದಿಗೆ ಬರುತ್ತಿದೆ. ನಾನು ಈವರೆಗೆಜಬ್ ತಕ್ ದವಾಯಿ ನಹೀ ಧಿಲೈ ನಹೀ ಎಂದು ಹೇಳುತ್ತಿದ್ದೆ. ಆದರೆ ಈಗ ೨೦೨೧ಕ್ಕೆದವಾಯಿ ಭೀ, ಕಡಾಯಿ ಭೀ (ಔಷಧಕ್ಕೂ ಹೌದು, ಎಚ್ಚರಿಕೆಗೂ ಹೌದು) ಎಂಬುದು ನಮ್ಮ ಮಂತ್ರವಾಗಬೇಕು ಎಂದು ಪ್ರಧಾನಿ ಹೇಳಿದರು.

ವೈರಸ್ ಹರಡದಂತೆ ತಡೆಯಲು ಮಾಡಿದಂತಹುದೇ ಪ್ರಯತ್ನಗಳನ್ನು ಸಾಮೂಹಿಕ ಚುಚ್ಚುಮದ್ದಿನ ಸಂದರ್ಭದಲ್ಲೂ ದೇಶದ ಜನರು ಮಾಡುತ್ತಾರೆ ಎಂಬ ಖಚಿತತೆ ನನಗಿದೆ. ಸುಮಾರು ಒಂದು ಕೋಟಿ ಜನರು ಕೋವಿಡ್-೧೯ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಪ್ರತಿದಿನವೂ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಾ ಇದೆ. ೨೦೨೧ ಹೊಸ ಚಿಕಿತ್ಸೆಯ ಭರವಸೆಯೊಂದಿಗೆ ಬರುತ್ತಿದೆ ಎಂದು ಮೋದಿ ನುಡಿದರು.

ಭಾರತವು ಜಾಗತಿಕ ಆರೋಗ್ಯಕ್ಕೆ ಸಂಬಂಧಿಸಿದಾಗಿ ನರಕೇಂದ್ರವಾಗಿ ಬದಲಾಗಿದೆ. ವೈದ್ಯಕೀಯ ಶಿಕ್ಷಣ ಸುಧಾರಣೆಗಾಗಿ ನಾವು ಮಿಷನ್ ಮೋಡ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ರಚನೆಯ ಬಳಿಕ ಆರೋಗ್ಯ ಶಿಕ್ಷಣದ ಗುಣಮಟ್ಟ ಮತ್ತು ಗಾತ್ರ ಸುಧಾರಿಸಲಿದೆ ಎಂದು ಅವರು ನುಡಿದರು. ಡಿಸೆಂಬರ್ ೨೧ರಂದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ ವರ್ಧನ್  ಮತ್ತು ಗುಜರಾತ್ ಮುಖ್ಯಮಂತ್ರಿ ರೂಪಾನಿ ಅವರು ರಾಜಕೋಟ್ ಏಮ್ಸ್ ೫೦ ಎಂಬಿಬಿಎಸ್ ವಿದ್ಯಾರ್ಥಿಗಳ ಚೊಚ್ಚಲ ಶೈಕ್ಷಣಿಕ ಅಧಿವೇಶನವನ್ನು ವಾಸ್ತವಿಕವಾಗಿ ಉದ್ಘಾಟಿಸಿದ್ದರು. ಕ್ಯಾಂಪಸ್ ಈಗ ಪಂಡಿತ ದೀನದಯಾಳು ಉಪಾಧ್ಯಾಯ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡದ ಒಂದು ಭಾಗ ಮತ್ತು ನಗರದ ಪಿಡಿಯು ಆಸ್ಪತ್ರೆಯಲ್ಲಿ ಕಾರ್ ನಿರ್ವಹಿಸುತ್ತಿದೆ.

ರಾಜ್ಯ ಸರ್ಕಾರವು ಪಾರಾ ಪಿಪಾಲಿಯಾ ಮತ್ತು ಖಂಡೇರಿ ಗ್ರಾಮಗಳ ನಡುವೆ ನಗರದ ಉತ್ತರ ಭಾಗದಲ್ಲಿನ ಜಾಮ್ನಗರ ರಸ್ತೆಯಲ್ಲಿ ೨೦೦ ಎಕರೆ ಭೂಮಿಯನ್ನು ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರವು ,೧೯೫ ಕೋಟಿ ರೂಪಾಯಿಗಳ ಒಟ್ಟು ಯೋಜನಾ ಗಾತ್ರವನ್ನು ಪ್ರಸ್ತಾಪಿತ ಕ್ಯಾಂಪಸ್ಸಿಗಾಗಿ ಅನುಮೋದಿಸಿದೆ. ಕ್ಯಾಂಪಸ್ ಮೂರು ವರ್ಷಗಳ ಒಳಗೆ ಪೂರ್ಣಗೊಳ್ಳು ನಿರೀಕ್ಷೆ ಇದೆ.

No comments:

Advertisement