My Blog List

Thursday, December 24, 2020

ಟ್ಯಾಗೋರ್ ಗುಜರಾತ್ ಸಂಪರ್ಕ ನೆನೆದ ಪ್ರಧಾನಿ ಮೋದಿ

 ಟ್ಯಾಗೋರ್ ಗುಜರಾತ್ ಸಂಪರ್ಕ ನೆನೆದ ಪ್ರಧಾನಿ ಮೋದಿ

ಕೋಲ್ಕತಾ: ವಿಧಾನಸಭಾ ಚುನಾವಣೆಗೆ ಮುನ್ನಹೊರಗಿನವರಮೂಲಕ ಪಶ್ಚಿಮ ಬಂಗಾಳವನ್ನು ಗುಜರಾತ್ ಆಗಲು ಬಿಡುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರವೀಂದ್ರ ನಾಥ ಟ್ಯಾಗೋರ್ ಅವರಗುಜರಾತ್ ಸಂಪರ್ಕವನ್ನು ನೆನಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ 2020 ಡಿಸೆಂಬರ್ 24ರ ಗುರುವಾರ ಎದಿರೇಟು ನೀಡಿದರು.

ವೈವಿಧ್ಯತೆಯಲ್ಲಿ ಏಕತೆಮಂತ್ರದ ಬಗ್ಗೆ ಜನರಿಗೆ ನೆನಪಿಸಿz ಪ್ರಧಾನಿರವೀಂದ್ರನಾಥ ಟ್ಯಾಗೋರ್ ಅವರು ಗುಜರಾತಿನೊಂದಿಗೆ ಹೇಗೆ ಸಂಪರ್ಕ ಹೊಂದಿದ್ದರುಎಂದು ವಿವರಿಸಿದರು.

ವೀಡಿಯೊ ಸಮಾವೇಶದ ಮೂಲಕ ಶಾಂತಿನಿಕೇತದ ವಿಶ್ವ-ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ರವೀಂದ್ರನಾಥ ಟ್ಯಾಗೋರ್ ಬಗ್ಗೆ ಮಾತನಾಡುವಾಗಲೆಲ್ಲಾ ಅವರ ಗುಜರಾತ್ ಸಂಪರ್ಕದ ಬಗ್ಗೆ ಮತ್ತೆ ಮತ್ತೆ ಹಂಚಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಕಳೆದ ಬಾರಿ ನಾನು ವಿಶ್ವ ಭಾರತಿಗೆ ಭೇಟಿ ನೀಡಿದಾಗ ಅದನ್ನು ಉಲ್ಲೇಖಿಸಿದ್ದೇನೆ. ಇಂದು, ಮತ್ತೊಮ್ಮೆ, ಗುರುದೇವ (ರವೀಂದ್ರನಾಥ ಟ್ಯಾಗೋರ್) ಮತ್ತು ಗುಜರಾತಿನಆತ್ಮೀಯತೆಬಗ್ಗೆ ನಮ್ಮೆಲ್ಲರಿಗೂ ನೆನಪಿಸಲು ಬಯಸುತ್ತೇನೆಎಂದು ಹೇಳಿದರು.

ನಾವು ಇದನ್ನು ಪುನಃ ಪುನಃ ನೆನಪು ಮಾಡಿಕೊಳ್ಳಬೇಕು. ಏಕೆಂದರೆ ಇದುಏಕ ಭಾರತ-ಶ್ರೇಷ್ಠ ಭಾರತಬಗ್ಗೆ ಕಲಿಸುತ್ತದೆಎಂದು ಅವರು ನುಡಿದರು.

"ವಿವಿಧ ಭಾಷೆಗಳು, ಉಪಭಾಷೆ, ಆಹಾರ ಮತ್ತು ಬಟ್ಟೆಗಳ ಹೊರತಾಗಿಯೂ, ನಮ್ಮ ದೇಶವು ಉತ್ತಮವಾಗಿ ಸಂಪರ್ಕ ಹೊಂದಿದೆ ಎಂದು ಇದು ತೋರಿಸುತ್ತದೆ. ನಮ್ಮ ವಿಭಿನ್ನ ಸಂಸ್ಕೃತಿಗಳ ಹೊರತಾಗಿಯೂ, ನಾವು ಪರಸ್ಪರ ಒಂದಾಗಿದ್ದೇವೆ ಎಂದು ಇದು ತೋರಿಸುತ್ತದೆ. ಇದು ನಮಗೆ ಸಹೋದರತ್ವವನ್ನು ಕಲಿಸುತ್ತದೆಎಂದು ಮೋದಿ ಹೇಳಿದರು.

ಗುರುದೇವ ಅವರ ಹಿರಿಯ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರನ್ನು ಅಹಮದಾಬಾದಿನಲ್ಲಿ ಭಾರತೀಯ ನಾಗರಿಕ ಸೇವಾ (ಐಸಿಎಸ್) ಅಧಿಕಾರಿಯಾಗಿ ನೇಮಿಸಲಾಗಿತ್ತು. ನಂತರ, ರವೀಂದ್ರನಾಥ ಟ್ಯಾಗೋರ್ ಆಗಾಗ್ಗೆ ಗುಜರಾತಿಗೆ ಭೇಟಿ ನೀಡುತ್ತಿದ್ದರು ಮತ್ತು ಅವರು ಗುಜರಾತಿನಲ್ಲಿ ಬಹಳ ಸಮಯ ಕಳೆದರು. ಅವರು ವಾಸವಾಗಿದ್ದಾಗ, ಅವರುಬಂಡಿ ಅಮರ್ಮತ್ತುನೆಲವ್ ರಜನಿ ದೇಖೋಸೇರಿದಂತೆ ಎರಡು ಜನಪ್ರಿಯ ಬಾಂಗ್ಲಾ ಕವನಗಳನ್ನು ಬರೆದಿದ್ದಾರೆ, ಅವರು ಗುಜರಾತಿನಲ್ಲಿ ತಮ್ಮ ಪ್ರಸಿದ್ಧ ನಾಟಕಕ್ಷುದಿಷ್ಟಾ ಪಾಶನ್ ಒಂದು ಭಾಗವನ್ನು ಬರೆದಿದ್ದಾರೆಎಂದು ಪ್ರಧಾನಿ ನೆನಪು ಮಾಡಿಕೊಂಡರು.

ಇದಷ್ಟೇ ಅಲ್ಲ, ಗುಜರಾತಿನ ಪುತ್ರಿ ಕೂಡಾ ಟ್ಯಾಗೋರ್ ಕುಟುಂಬದಲ್ಲಿ ಸೊಸೆಯಾದಳು. ಸತ್ಯೇಂದ್ರನಾಥ ಟ್ಯಾಗೋರ್ ಅವರ ಪತ್ನಿ ಜ್ಞಾನದಾನಂದಿನಿ ದೇವಿ ಕೂಡ ಗುಜರಾತನ್ನು ಬಂಗಾಳದೊಂದಿಗೆ ಜೋಡಿಸುತ್ತಾರೆ. ಮಹಿಳಾ ಅಭಿವೃದ್ಧಿ ಇಲಾಖೆ ಇದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಬೇಕುಎಂದು ಮೋದಿ ಹೇಳಿದರು. ’ಜ್ಞಾನದಾನಂದಿನಿ ದೇವಿ ಜಿ ಗುಜರಾತಿನಲ್ಲಿ ಇದ್ದಾಗ, ಸ್ಥಳೀಯ ಮಹಿಳೆಯರು ತಮ್ಮಪಲ್ಲುವನ್ನು  (ಸೀರೆಯ ಅಲಂಕೃತ ತುದಿ) ತಮ್ಮ ಬಲ ಭುಜದ ಮೇಲೆ ಇಟ್ಟುಕೊಳ್ಳುತ್ತಿದ್ದುದನ್ನು ಅವರು ಗಮನಿಸಿದರು, ಇದರಿಂದಾಗಿ  ಆರಾಮವಾಗಿ ಕೆಲಸ ಮಾಡುವುದು ಕಷ್ಟಕರವಾಗಿತ್ತು. ಗುಜರಾತಿನ ಸ್ಥಳೀಯ ಮಹಿಳೆಯರು ತಮ್ಮ ಎಡ ಭುಜದ ಮೇಲೆ ತಮ್ಮಪಲ್ಲುವನ್ನು ಇಡಲು ಪ್ರಾರಂಭಿಸಿದರು, ಅದರಿಂದ ಅವರ ಬಲಗೈ ಮುಕ್ತವಾಗಿ ಉಳಿದು ಕೆಲಸ ಮಾಡಲು ಅನುಕೂಲವಾಯಿತು. ಇದಾದದ್ದು ಜ್ಞಾನದಾನಂದಿನಿ ದೇವಿ ಅವರ ಸಲಹೆಯ ಮೇರೆಗೆ ಎಂದು ನಂಬಲಾಗಿದೆ. ಮಹಿಳಾ ಅಭಿವೃದ್ಧಿ ಇಲಾಖೆ ಇದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಬೇಕು ಎಂದು ನಾನು ಭಾವಿಸುತ್ತೇನೆಎಂದು ಮೋದಿ ನುಡಿದರು.

ಸಹೋದರತ್ವ ಮತ್ತು ಕುಟುಂಬದಂತೆ ಒಟ್ಟಿಗೆ ವಾಸಿಸುವ ಮೂಲಕವೇ ದೇಶವು ಟ್ಯಾಗೋರ್ ಅವರ ದೃಷ್ಟಿಯನ್ನು ಮತ್ತಷ್ಟು ಸಮೀಪಕ್ಕೆ ತೆಗೆದುಕೊಳ್ಳಬಹುದು ಎಂದು ಪ್ರಧಾನಿ ಹೇಳಿದರು.

ನಮ್ಮ ದೇಶವು ವಿಶ್ವಭಾರತಿಯಿಂದ ಹೊರಹೊಮ್ಮುವ ಸಂದೇಶವನ್ನು ಇಡೀ ಜಗತ್ತಿಗೆ ಹರಡುತ್ತಿದೆ. ಇಂದು, ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣವಾದ ಸಂದರ್ಭಗಳನ್ನು ನಾವೆಲ್ಲರೂ ನೆನಪಿನಲ್ಲಿಡಬೇಕು. ಇದು ಕೇವಲ ಬ್ರಿಟಿಷ್ ಆಡಳಿತದಿಂದಾಗಿ ಅಲ್ಲ, ಆದರೆ ಸ್ಥಾಪನೆಯ ಹಿನ್ನೆಲೆಯಲ್ಲಿ, ನಮ್ಮ ಶ್ರೀಮಂತ ವಿಚಾರಗಳು ಮತ್ತು ನೂರಾರು ವರ್ಷಗಳ ಚಳುವಳಿಯ ಇತಿಹಾಸವಿತ್ತು. ಗುರುದೇವ ಅವರ ವಿಶ್ವ-ಭಾರತಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯ ರಾಷ್ಟ್ರೀಯತಾವಾದಿ ಭಾವನೆಯ ಬಲವಾದ ಚಿತ್ರಣವನ್ನು ನಮಗೆ ನೀಡಿತು. ಇಡೀ ಮಾನವೀಯತೆಯು ಆಧ್ಯಾತ್ಮಿಕ ಜಾಗೃತಿಯಿಂದ ಪ್ರಯೋಜನ ಪಡೆಯಬೇಕು ಎಂದು ಅವರು ಬಯಸಿದ್ದರು ಮತ್ತುಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ದೃಷ್ಟಿ ಕೂಡ ದೃಷ್ಟಿಯ ವ್ಯುತ್ಪನ್ನವಾಗಿದೆ ಎಂದು ಅವರು ಹೇಳಿದರು.

ವಿಶ್ವ ಭಾರತಿ ವಿಶ್ವವಿದ್ಯಾಲಯವು ಗುರುದೇವರ ತತ್ವಶಾಸ್ತ್ರ, ದೃಷ್ಟಿ ಮತ್ತು ಕಠಿಣ ಪರಿಶ್ರಮದ ಸಾಕಾರವಾಗಿದೆ. ಸಂಸ್ಥೆ ನಮ್ಮ ದೇಶಕ್ಕೆ ನಿರಂತರ ಶಕ್ತಿಯ ಮೂಲವಾಗಿದೆಎಂದು ಪ್ರಧಾನಿ ಹೇಳಿದರು.

೧೮೭೮ ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ೧೭ ವರ್ಷದವರಿದ್ದಾಗ ಅಹಮದಾಬಾದಿಗೆ ಭೇಟಿ ನೀಡಿದರು. ದಿನಗಳಲ್ಲಿ ಅವರ ಹಿರಿಯ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರು ಅಹಮದಾಬಾದಿನಲ್ಲಿ ಆಯುಕ್ತರು ಮತ್ತು ಮೊದಲ ಐಸಿಎಸ್ ಅಧಿಕಾರಿಯಾಗಿದ್ದರು.

ದಿನಗಳಲ್ಲಿ, ಅವರು ೧೬೨೨ ರಲ್ಲಿ ಶಹಜಹಾನ್ ನಿರ್ಮಿಸಿದಮೋಟಿಸಾಹಿ ಮಹಲ್ನಲ್ಲಿ ತಂಗಿದ್ದರು. ಪ್ರಸ್ತುತ ಕಟ್ಟಡವನ್ನು ಶಾಹೀಬಾಗ್ನಲ್ಲಿರುವ ಸರ್ದಾರ್ ಪಟೇಲ್ ಸ್ಮಾರಕ್ ಭವನ ಎಂದು ಕರೆಯಲಾಗುತ್ತದೆ.

ತೃಣಮೂಲ ಟೀಕೆ: ತೃಣಮೂಲ ಕಾಂಗ್ರೆಸ್ ಪ್ರಧಾನಿ ಮೋದಿಯವರ ಭಾಷಣಕ್ಕೆ ಶೀಘ್ರವಾಗಿ ಸ್ಪಂದಿಸಿತು ಮತ್ತು ಅದರಲ್ಲಿ ಕೆಲವು ವಾಸ್ತವಿಕ ದೋಷಗಳಿವೆ ಎಂದು ಪ್ರತಿಪಾದಿಸಿತು.

ನಂತರ, ಟಿಎಂಸಿ ಶಾಸಕ ಬ್ರಾತ್ಯ ಬಸು ಪತ್ರಿಕಾಗೋಷ್ಠಿಯಲ್ಲಿ, ‘ಭಾರತದ ಪ್ರಧಾನ ಮಂತ್ರಿಯವರು ಯಾವಾಗಲೂ ಬಂಗಾಳ ಮತ್ತು ಅದರ ಗುಜರಾತ್ ಸಂಪರ್ಕದ ಬಗ್ಗೆ ಜನರಿಗೆ ನೆನಪಿಸುವುದೇಕೆ? ಅದೂ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಅದರ ಅಗತ್ಯವಿತ್ತೆ? ಅವರ ಭಾಷಣವನ್ನು ಜಾಣತನದಿಂದ ರಾಜಕೀಯ ಧಾಟಿಯಲ್ಲಿ ರಚಿಸಲಾಗಿದೆ ಎಂದು ನಾವು ನಂಬುತ್ತೇವೆ ಮತ್ತು ಅದನ್ನು ನಾವು ಖಂಡಿಸುತ್ತೇವೆಎಂದು ಹೇಳಿದರು.

No comments:

Advertisement