My Blog List

Tuesday, December 29, 2020

ರಾಮ ಮಂದಿರಕ್ಕಾಗಿ ಜನವರಿ ೧೫ರಿಂದ ನಿಧಿ ಸಂಗ್ರಹ ಅಭಿಯಾನ: ವಿಎಚ್‌ಪಿ

 ರಾಮ ಮಂದಿರಕ್ಕಾಗಿ ಜನವರಿ ೧೫ರಿಂದ ನಿಧಿ ಸಂಗ್ರಹ ಅಭಿಯಾನ: ವಿಎಚ್‌ಪಿ

ನವದೆಹಲಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ಜನವರಿ ೧೫ ರಿಂದ ರಾಷ್ಟ್ರವ್ಯಾಪಿ ನಿಧಿ ಸಂಗ್ರಹ ಅಭಿಯಾನವನ್ನು ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿತ್ 2020 ಡಿಸೆಂಬರ್ 2020ರ ಮಂಗಳವಾರ ಪ್ರಕಟಿಸಿತು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜನವರಿ ೧೫ ರಂದು ಅಯೋಧ್ಯೆಯ ರಾಮಮಂದಿರಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಿದ್ದು, ೨೦,೦೦೦ ರೂಪಾಯಿಗಳಿಗಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಮೂಲಕ ಪಾವತಿ ಮಾಡಬಹುದಾಗಿದೆ.

ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್‍ಯಾಧ್ಯಕ್ಷ ಅಲೋಕ್ ಕುಮಾರ್ ಅವರುದೇಶಾದ್ಯಂತ ,೨೫,೦೦೦ ಹಳ್ಳಿಗಲ್ಲಿ ರಾಮಮಂದಿನ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಹಣವನ್ನು ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಲಾಗುವುದು. ಹಣವನ್ನು ಸಂಗ್ರಹಿಸಲು ನಿಯೋಜಿಸಲಾದ ತಂಡಗಳು ಹಣವನ್ನು ೪೮ ಗಂಟೆಗಳ ಒಳಗೆ ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಇಡಲಾಗುವುದು ಎಂದು ಅವರು ಹೇಳಿದರು.

ಐದು ಜನರ ತಂಡಗಳು ಜನವರಿ ೧೫ ರಿಂದ ಫೆಬ್ರವರಿ ೨೭ ರವರೆಗೆ ನಿಧಿ ಸಂಗ್ರಹ ಅಭಿಯಾನ ನಡೆಸಲಿವೆ.

ರಾಮ ಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್, ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನಿಂದ ಅಧಿಕಾರ ಪಡೆದಿದೆ.

ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಮಾರ್ಗ ಸುಗಮಗೊಳಿಸಿದ ಬಳಿಕ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ನಡೆಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟನ್ನು ರಚಿಸಲಾಗಿತ್ತು.

ಭಾರತೀಯರು ಸುಪ್ರೀಂ ಕೋರ್ಟ್ ತೀರ್ಪನ್ನು ಶಾಂತಿಯುತವಾಗಿ ಸ್ವೀಕರಿಸಿದ್ದಾರೆ. ರಾಮ ಯಾರ ವಿರುದ್ಧವೂ ಇರಲಿಲ್ಲ ಆದ್ದರಿಂದ ನಾನು ನಮ್ಮ ಕಾರ್‍ಯಕರ್ತರು ಮತ್ತು ಇತರರಿಗೆ ಶಾಂತಿಯುತವಾಗಿರಲು ಮನವಿ ಮಾಡುತ್ತೇನೆ. ದೇವಾಲಯ ಮತ್ತು ಮಸೀದಿ ಎರಡನ್ನೂ ನಿರ್ಮಿಸಲಾಗುತ್ತಿದೆ ಮತ್ತು ಕೆಲಸವನ್ನು ಶಾಂತಿಯುತವಾಗಿ ಕೈಗೊಳ್ಳಬೇಕು ಎಂದು ಕುಮಾರ್ ಹೇಳಿದರು.

No comments:

Advertisement