My Blog List

Wednesday, December 30, 2020

ಕಾಶ್ಮೀರ: ಭದ್ರತಾ ಪಡೆಗಳಿಂದ ೩ ಉಗ್ರರ ಹತ್ಯೆ

 ಕಾಶ್ಮೀರ: ಭದ್ರತಾ ಪಡೆಗಳಿಂದ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಲಾವೆಪೊರಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಮೂವರು ಸ್ಥಳೀಯ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು 2020 ಡಿಸೆಂಬರ್ 30ರ ಬುಧವಾರ ತಿಳಿಸಿವೆ.

ಆದಾಗ್ಯೂ, ಹತ್ಯೆಗೀಡಾದವರ ಕುಟುಂಬಗಳು ಭದ್ರತಾ ಪಡೆಗಳ ಹೇಳಿಕೆಯನ್ನು ಖಂಡಿಸಿ, ಗುಂಡಿನ ಘರ್ಷಣೆಯಲ್ಲಿ ಹತರಾದ ಯುವಕರು ನಾಗರಿಕರು ಎಂದು ಪ್ರತಿಪಾದಿಸಿದ್ದಾರೆ. ಮೃತರ ಕುಟುಂಬ ಸದಸ್ಯರು. ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗೆ ಕುಟುಂಬಗಳು ಪ್ರತಿಭಟನೆ ನಡೆಸಿದರು.

ಮಂಗಳವಾರ ಸಂಜೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಪ್ರದೇಶಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ತರುವಾಯ ಪ್ರದೇಶದಲ್ಲಿ ಜಂಟಿ ಪಡೆಗಳ ಮೂಲಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ತಡರಾತ್ರಿಯ ಹೊತ್ತಿಗೆ, ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಮತ್ತು ಪ್ರದೇಶದ ಕಡೆಗೆ ಎಲ್ಲ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು ಎಂದು ಮೂಲಗಳು ತಿಳಿಸಿವೆ.

ಗುಂಡಿನ ಘರ್ಷಣೆಯಲ್ಲಿ ಹತರಾದ ಉಗ್ರರು ರಾಷ್ಟ್ರೀಯ ಹೆದ್ದಾರಿಯ ಮೇಲೆ ದೊಡ್ಡ ದಾಳಿಯನ್ನು ಯೋಜಿಸಿದ್ದರು ಎಂದು ಸೇನೆಯು ಹೇಳಿದೆ.

ನಾವು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರಗಾಮಿ ಚಲನವಲನ ಬಗ್ಗೆ ಮಾಹಿತಿ ಪಡೆಯುತ್ತಿದ್ದೆವು. ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಮನೆಯೊಳಗೆ ಉಗ್ರರು ಇದ್ದಾರೆ ಎಂಬ ಮಾಹಿತಿ ಬಂದ ನಂತರ ಮಂಗಳವಾರ ಸಂಜೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅವರನ್ನು ಶರಣಾಗುವಂತೆ ಕೇಳಲಾಯಿತು, ಆದಾಗ್ಯೂ, ಅವರು ಗುಂಡಿನ ದಾಳಿಯಿಂದ ಪ್ರತಿಕ್ರಿಯಿಸಿದರು ಮತ್ತು ರಾತ್ರಿಯವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಬೆಳಿಗ್ಗೆ ಕಾರ್ಯಾಚರಣೆಯನ್ನು ಪುನಾರಂಭಿಸಿದಾಗ ಅವರಿಗೆ ಮತ್ತೆ ಶರಣಾಗಲು ಸೂಚಿಸಲಾಯಿತು. ಆದರೆ ಮತ್ತೆ ಗುಂಡು ಹಾರಿಸಲು ಪ್ರಾರಂಭಿಸಿದರು ಮತ್ತು ಪಡೆಗಳ ಮೇಲೆ ಗ್ರೆನೇಡುಗಳನ್ನು  ಎಸೆದರು, ಇದು ಅವರಿಗೆ ಶರಣಾಗುವ ಉದ್ದೇಶವಿಲ್ಲ ಎಂದು ನಮಗೆ ಸುಳಿವು ನೀಡಿತು ಎಂದು ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಕಿಲೋ ಫೋರ್ಸ್ ಎಚ್.ಎಸ್. ಸಾಹಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಗುಂಡಿನ ಘರ್ಷಣೆಯಲ್ಲಿ ಹತರಾದ ಮೂವರು ಯುವಕರ ಕುಟುಂಬಗಳು ಅವರನ್ನು ತುರ್ಕವಾಂಗಂ ಶೋಪಿಯಾನ್‌ನ ಜುಬೈರ್ ಅಹ್ಮದ್, ಪುತ್ರಿಗಮ್ ಪುಲ್ವಾಮಾದ ಅಜಾಜ್ ಮಕ್ಬೂಲ್ ಮತ್ತು ಅಥರ್ ಮುಷ್ತಾಕ್ ಎಂದು ಗುರುತಿಸಿವೆ.

ಕುಟುಂಬಗಳು ಮೃತರು ವಿದ್ಯಾರ್ಥಿಗಳೆಂದು ಹೇಳಿದ್ದು, ಮಂಗಳವಾರ ತಮ್ಮ ಮನೆ ತೊರೆದಿದ್ದು, ಅವರನ್ನು ಎತ್ತಿಕೊಂಡುಹೋಗಿ ನಂತರ ಗುಂಡಿನ ಘರ್ಷಣೆಯಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.

ಗುಂಡಿನ ಘರ್ಷಣೆ ಬಗ್ಗೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕು ಎಂದು ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

"ಶೋಪಿಯಾನಿನ  ನಕಲಿ ಮುಖಾಮುಖಿಯ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಜಮ್ಮು- ಕಾಶ್ಮೀರದಲ್ಲಿನ  ಇತರ ಕುಟುಂಬಗಳು ತಮ್ಮ ಮಕ್ಕಳು ನಿರಪರಾಧಿಗಳು ಮತ್ತು ಗುಂಡಿನ ಘರ್ಷಣೆಯಲ್ಲಿ ಹತರಾದರು ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.

ಬುಧವಾರ ಕಾರ್ಯಾಚರಣೆ ಮುಗಿದ ನಂತರವೂ ಪ್ರದೇಶದಲ್ಲಿ ಕಲ್ಲು ತೂರಾಟ ವರದಿಯಾಗಿದೆ.

ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೆ ೨೦೩ ಉಗ್ರರು ಹತರಾಗಿದ್ದಾರೆ, ಅವರಲ್ಲಿ ೧೬೬ ಸ್ಥಳೀಯ ಉಗ್ರರು, ಹೆಚ್ಚಿನವರು ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಕೊಲ್ಲಲ್ಪಟ್ಟರು. ಭದ್ರತಾ ಪಡೆಗಳು ೪೯ ಉಗ್ರರನ್ನು ಬಂಧಿಸಿವೆ ಮತ್ತು ಅವರಲ್ಲಿ ಒಂಬತ್ತು ಮಂದಿ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

೨೦೨೦ ರಲ್ಲಿ ೯೬ ಭಯೋತ್ಪಾದನೆ ಸಂಬಂಧಿತ ಘಟನೆಗಳು ನಡೆದಿವೆ. ೪೩ ನಾಗರಿಕರು ಸಾವನ್ನಪ್ಪಿದ್ದರೆ, ೯೨ ಮಂದಿ ಘಟನೆಗಳಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ೨೦೧೯ ರಲ್ಲಿ ೪೭ ನಾಗರಿಕರು ಸಾವನ್ನಪ್ಪಿದರು ಮತ್ತು ೧೮೫ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.

No comments:

Advertisement