My Blog List

Wednesday, December 30, 2020

ಅಂತಾರಾಷ್ಟ್ರೀಯ ವಿಮಾನಯಾನ ಜ. ೩೧ ರವರೆಗೆ ಅಮಾನತು

 ಅಂತಾರಾಷ್ಟ್ರೀಯ ವಿಮಾನಯಾನ ಜ. ೩೧ ರವರೆಗೆ ಅಮಾನತು

ನವದೆಹಲಿ:  ಇಂಗ್ಲೆಂಡಿನ ರೂಪಂತರೀ ಕೊರೋನಾವೈರಸ್ ಭಾರತದಲ್ಲೂ ಪತ್ತೆಯಾದ ಹಿನ್ನೆಲೆಯಲ್ಲಿ ೨೦೨೧ರ ಜನವರಿ ೩೧ರವರೆಗೆ ಭಾರತದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 2020 ಡಿಸೆಂಬರ್ 30ರ ಬುಧವಾರ ಅಮಾನತುಗೊಳಿಸಿದೆ. ಆದರೆ ಸರಕು ಕಾರ್ಯಾಚರಣೆಗಳಿಗೆ ಇದರಿಂದ ವಿನಾಯ್ತಿ ನೀಡಿದೆ.

ಇಂಗ್ಲೆಂಡಿಗೆ ಹೋಗುವ ಮತ್ತು ಅಲ್ಲಿಂದ ಬರುವ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು  ಜನವರಿ ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದೂ  ಡಿಜಿಸಿಎ ತನ್ನ ಮಾರ್ಪಾಡು ಮಾಡಲಾದ ಆದೇಶದಲ್ಲಿ ತಿಳಿಸಿತು.

ಭಾರತ-ಇಂಗ್ಲೆಂಡ್ ವಿಮಾನ ಯಾನ ಸ್ಥಗಿತವನ್ನು ಜನವರಿ ರವರೆಗೆ ವಿಸ್ತರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಡಿಸೆಂಬರ್ ೩೦ ರಂದು ಶಿಫಾರಸು ಮಾಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಡಿಜಿ ನೇತೃತ್ವದ ರಾಷ್ಟ್ರೀಯ ಕಾರ್ಯಪಡೆಯ ಜಂಟಿ ಮೇಲ್ವಿಚಾರಣಾ ಗುಂಪಿನ ಒಳಹರಿವಿನ ಆಧಾರದ ಮೇಲೆ ಶಿಫಾರಸು ಮಾಡಲಾಗಿದೆ.

ರೂಪಾಂತರಿತ ಕೋವಿಡ್ -೧೯ ವೈರಸ್ಸನ್ನು ಪತ್ತೆಹಚ್ಚಲು ಆರೋಗ್ಯ ಸಚಿವಾಲಯವು ಡಿಸೆಂಬರ್ ರಿಂದ ೨೨ ರವರೆಗೆ ಭಾರತಕ್ಕೆ ಆಗಮಿಸಿದವರ ಮತ್ತು ಕೋವಿಡ್ -೧೯ ಸೋಂಕು ಕಂಡು ಬಂದವರ ಮಾದರಿಗಳನ್ನು ಜಿನೊಮ್ ಪರೀಕ್ಷೆಗೆ ಒಳಪಡಿಸುತ್ತಿದೆ.

"ಕಳೆದ ೧೪ ದಿನಗಳಲ್ಲಿ (ಡಿಸೆಂಬರ್ ರಿಂದ ೨೨ ರವರೆಗೆ) ಭಾರತಕ್ಕೆ ಆಗಮಿಸಿರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು, ರೋಗಲಕ್ಷಣ ಮತ್ತು ಸೋಂಕು ಹೊಂದಿದ್ದರೆ, ಅವರ ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಡಿಸೆಂಬರ್ ೩೦ ರಂದು ಹೇಳಿಕೆಯಲ್ಲಿ ತಿಳಿಸಿದೆ.

೨೦೨೧ ಜನವರಿ ನಂತರ ವಿಮಾನಗಳು ಕಟ್ಟುನಿಟ್ಟಾದ ನಿಯಂತ್ರಣಗಳೊಂದಿಗೆ ಪುನರಾರಂಭಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಬುಧವಾರ ಹೇಳಿದರು.

ಇಂಗ್ಲೆಂಡಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುವ ವಿಮಾನಗಳ ಸಂಚಾರ ಅಮಾನತನ್ನು ೨೦೨೧ ಜನವರಿ ರವರೆಗೆ ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ನಂತರ ಕಟ್ಟುನಿಟ್ಟಾದ ನಿಯಂತ್ರಣದೊಂದಿಗೆ ವಿಮಾನಯಾನ ಪುನರಾರಂವಾಗಲಿದ್ದು, ಇದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪುರಿ ಟ್ವೀಟ್ ಮಾಡಿದರು.

ಕಳೆದ ಕೆಲವು ವಾರಗಳಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿರುವ ಸಾವಿರಾರು ಜನರನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಸರ್ಕಾರ ಪ್ರಾರಂಭಿಸಿದೆ. ಹೊಸ ಕೋವಿಡ್ -೧೯ ರೂಪಾಂತರೀ ವೈರಸ್ಸಿನ ಹಿನ್ನೆಲೆಯಲ್ಲಿ ೨೫ ಕ್ಕೂ ಹೆಚ್ಚು ರಾಷ್ಟ್ರಗಳು ಇಂಗ್ಲೆಂಡಿಗೆ ಹೋಗುವ-ಬರುವ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಿವೆ.

ಕೊರೋನವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಮಾರ್ಚ್ ೨೩ ರಿಂದ ಭಾರತದಲ್ಲಿ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ.

ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಜುಲೈಯಿಂದ ಇತರ ದೇಶಗಳೊಂದಿಗೆ ಬಬಲ್ಸ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಂತಾರಾಷ್ಟ್ರೀಯ ಸರಕು ವಿಮಾನಗಳಿಗೆ ಮಾರ್ಪಡಿಸಿದ ಅಮಾನತು ಆದೇಶದಲ್ಲಿ ಡಿಜಿಸಿಎ ವಿನಾಯಿತಿ ನೀಡಿದೆ. ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಲ್ಲಿ ಅಮಾನತು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.

No comments:

Advertisement