Tuesday, December 14, 2021

ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು

 ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು

ನವದೆಹಲಿ: ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಗಳನ್ನು ಸಂಪರ್ಕಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯಡಿ ರಸ್ತೆಗಳ ವಿಸ್ತರಣೆಗೆ 2021 ಡಿಸೆಂಬರ್ 14ರ ಮಂಗಳವಾರ ಸುಪ್ರೀಂ ಕೋರ್ಟ್  ಒಪ್ಪಿಗೆ ನೀಡಿತು.

ನ್ಯಾಯಾಲಯವು ಸೇನೆಯ ಅವಶ್ಯಕತೆಗಳ ಬಗ್ಗೆ ಮರುಊಹೆ ಮಾಡಲು ಎಂದು  ನ್ಯಾಯಮೂರ್ತಿ ಗಳಾದ ಡಿವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಹೇಳಿತು.

ಯೋಜನಾ ಪ್ರದೇಶದಲ್ಲಿ ವಿಶಾಲವಾದ ರಸ್ತೆಗಳು  ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬ ಕೇಂದ್ರದ ವಾದಗಳನ್ನು ಪೀಠವು ಒಪ್ಪಿತು..

'ಚಾರ್ ಧಾಮ್' ಹೆದ್ದಾರಿ ಯೋಜನೆಯು ಉತ್ತರಾಖಂಡದ ನಾಲ್ಕು ಪವಿತ್ರ ಸ್ಥಳಗಳನ್ನು 900-ಕಿಮೀ ಸರ್ವಋತು ರಸ್ತೆಗಳ ಮೂಲಕ ಸಂಪರ್ಕಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಂತಗಳಲ್ಲಿ ಮುಖಾಮುಖಿಯಾಗುತ್ತಿರುವ ಭಾರತ-ಚೀನಾ ಗಡಿಯಲ್ಲಿ ಸಶಸ್ತ್ರ ಪಡೆಗಳ ಕ್ಷಿಪ್ರ ನಿಯೋಜನೆ/ಚಲನೆಗೆ ಇದು ಅನುಕೂಲವಾಗಲಿದೆ ಎಂದು ಕೇಂದ್ರವು ಪ್ರತಿಪಾದಿಸಿದೆ.

 ಅಂದಾಜು 12,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿಯಲ್ಲಿ ಉತ್ತರಖಂಡದಲ್ಲಿ ನಿರ್ಮಿಸಲಾಗುವ 1384 ಕೋಟಿ ರೂಪಾಯಿಗಳ ಸುಸಜ್ಜಿತ ಸುರಂಗ ಮಾರ್ಗವೂ ಬರುತ್ತದೆ.  ಈ ಸುರಂಗವು ಧರಸು ಮತ್ತು ಯಮುನೋತ್ರಿ ನಡುವಣ ಪಯಣವನ್ನು ಸುಮಾರು 20 ಕಿಮೀಗಳಷ್ಟು ಇಳಿಸುತ್ತದೆ ಮತ್ತು ಪಯಣದ ಅವಧಿಯನ್ನು ಸುಮಾರು 1 ಗಂಟೆಯಷ್ಟು ಕಡಿತಗೊಳಿಸುತ್ತದೆ.

ಗಡಿ ಭದ್ರತಾ ಕಾಳಜಿಗಳನ್ನು ಪೂರೈಸುವ ಅಗತ್ಯವಿದೆ ಮತ್ತು ಇತ್ತೀಚಿನ ದಿನಗಳಲ್ಲಿ "ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲುಗಳು” ಎದುರಾಗುತ್ತಿದ್ದು, ಸೈನ್ಯ ಮತ್ತು ಸಲಕರಣೆಗಳ ಚಲನೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್  ಹೇಳಿತು.

ರಕ್ಷಣಾ ಸಚಿವಾಲಯವು ವಿಶೇಷ ಸಂಸ್ಥೆಯಾಗಿದ್ದು, ಅದರ ಕಾರ್ಯಾಚರಣೆಯ ಅಗತ್ಯತೆಗಳನ್ನು ನಿರ್ಧರಿಸಬಹುದು ಎಂದು ಪೀಠ ಹೇಳಿತು.

ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಬೇಕು ಮತ್ತು ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿರುವ ಹೆದ್ದಾರಿಗಳನ್ನು ಇತರ ಗುಡ್ಡಗಾಡು ಪ್ರದೇಶಗಳಲ್ಲಿರುವಂತೆ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು.

ಆದಾಗ್ಯೂ, ನ್ಯಾಯಾಲಯವು ಅರ್ಜಿದಾರರ ಪರಿಸರ ಕಾಳಜಿಯನ್ನು ಒಪ್ಪಿಕೊಂಡಿತು ಮತ್ತು ಉನ್ನತ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸುತ್ತಿದೆ ಎಂದು ತಿಳಿಸಿತು..

ಒಟ್ಟು  12,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 27 ಡಿಸೆಂಬರ್ 2016 ರಂದು ಡೆಹ್ರಾಡೂನ್ ಪರೇಡ್ ಮೈದಾನದಲ್ಲಿ ನೆರವೇರಿಸಿದ್ದರು.

ಸುದ್ದಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್  ಮಾಡಿರಿ:


No comments:

Advertisement