Tuesday, August 2, 2022

ತಪ್ಪಾಗಿ ಬಂಧಿಸಿದರೆ ಜೋಕೆ! ರೂ.೫ ಲಕ್ಷ ಪರಿಹಾರಕ್ಕೆ ಹೈ ಆದೇಶ

 ತಪ್ಪಾಗಿ ಬಂಧಿಸಿದರೆ ಜೋಕೆರೂ. ಲಕ್ಷ ಪರಿಹಾರಕ್ಕೆ ಹೈ ಆದೇಶ

ಬೆಂಗಳೂರು: ಜಾಮೀನು ಸಹಿತ ಅಥವಾ ಜಾಮೀನುರಹಿತವಾದ ಯಾವುದೇ ವಾರಂಟ್ಹೊರಡಿಸಿದಾಗ ಬಂಧಿಸಬೇಕಾಗಿರುವ ವ್ಯಕ್ತಿಯ ಗುರುತನ್ನು ಅಧಿಕಾರಿಯು ಖಚಿತಪಡಿಸಿಕೊಳ್ಳಬೇಕು. ಬಂಧಿಸಲು ಉದ್ದೇಶಿಸಿರುವ ವ್ಯಕ್ತಿಯು ಅದೇ ವ್ಯಕ್ತಿ ಎಂಬುದನ್ನು ಖಚಿತವಾಗಿ ತಿಳಿದುಕೊಂಡಿರಬೇಕು ಎಂದು ಕರ್ನಾಟಕ ಹೈಕೋರ್ಟ್ಹೇಳಿದೆ.

೨೦೨೨ ಜುಲೈ ೭ರಂದು ನೀಡಿರುವ ತೀರ್ಪಿನಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವ ಏಕಸದಸ್ಯ ಪೀಠವು ಅರ್ಜಿದಾರ ನಿಂಗರಾಜು ಎನ್ ಅವರ ಗುರುತಿನ ಗೊಂದಲವನ್ನು ಪರಿಗಣಿಸಿ ಅಕ್ರಮ ಬಂಧನಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

"ಯಾರ ಹೆಸರಿನಲ್ಲಿ ವಾರಂಟ್ಹೊರಡಿಸಲಾಗಿದೆಯೋ ವ್ಯಕ್ತಿಯನ್ನು ಬಂಧಿಸಲು ನೀಡಲಾದ ಒಂದೇ ಕಾರಣ ಏನೆಂದರೆ ಅವನ ತಂದೆಯ ಹೆಸರು ವಾರಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿಯ ಹೆಸರನ್ನು ಹೋಲುತ್ತದೆ ಎಂಬುದಾಗಿದೆ. ಆದರೆ ತಂದೆಯ ಹೆಸರು ಹೋಲುತ್ತದೆ ಅಥವಾ ಒಂದೇ ಆಗಿರುತ್ತದೆ ಎಂಬುದು ವ್ಯಕ್ತಿಯನ್ನು ಬಂಧಿಸುವಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಇದೇ ಸೂತ್ರವನ್ನು ಅನ್ವಯಿಸಿದರೆ ತಂದೆಯ ಹೆಸರು ಒಂದೇ ರೀತಿ ಇದೆ ಎಂಬ ಕಾರಣಕ್ಕಾಗಿ ಒಬ್ಬ ಸಹೋದರ, ಇನ್ನೊಬ್ಬ ಸಹೋದರ ಅಥವಾ ಸಹೋದರಿಗಾಗಿ ಬಂಧನ ವಾರಂಟ್ ಹೊರಡಿಸಿ ಬಂಧಿಸಬಹುದು. ಇಲ್ಲಿ ಮುಖ್ಯವಾದ ವಿಚಾರ ಬಂಧನಕ್ಕೊಳಗಾಗಬೇಕಾದ ವ್ಯಕ್ತಿಯ ಗುರುತು ಮತ್ತು ತಂದೆಯ ಹೆಸರಿನಂತಹ ಯಾವುದೇ ಅಂಶವಲ್ಲ, ಆದರೆ ಬಂಧಿತನಾಗಬೇಕಾದ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳುವುದುಎಂದು ತೀರ್ಪು ಹೇಳಿದೆ.

"ಭಾರತೀಯ ಸಂವಿಧಾನದ ಅನುಚ್ಛೇದ 21 ಅಡಿಯಲ್ಲಿ ಖಾತರಿಪಡಿಸಲಾಗಿರುವ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು ಅತ್ಯಂತ ಪ್ರಾಮುಖ್ಯತೆ ಹೊಂದಿರುವಂತಹುದು. ಅಧಿಕೃತವಲ್ಲದ ಯಾವುದೇ ವ್ಯಕ್ತಿಯನ್ನು ಬಂಧಿಸುವ ಮೂಲಕ ನಡೆಯುವ ಬಂಧನವು ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ." ಎಂದೂ ಹೈಕೋರ್ಟ್ಹೇಳಿತು.

ದಾಖಲೆಗಳನ್ನು ಪರಿಶೀಲಿಸಿದಾಗ ಬಂಧಿತನು ವಾರೆಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿ ಮತ್ತು ಅವನಿಗೆ ವಾರೆಂಟ್ ಅನ್ವಯಿಸುವ ಬಗ್ಗೆ ವಾದ ಮಂಡಿಸಿದ್ದರೂ, ಅವನ ಗುರುತನ್ನು ಅಡ್ಡ-ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಲಾಗಿಲ್ಲ. ಪರಿಣಾಮವಾಗಿ ಒಬ್ಬ ಅಮಾಯಕನನ್ನು ಬಂಧಿಸಲಾಯಿತು ಎಂಬುದು ದೃಢಪಟ್ಟಿದೆ ಎಂದು ಕೋರ್ಟ್ಹೇಳಿತು.

ಬಂಧಿತನು ವಾರಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿ ತಾನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಬಂಧಿಸಿದ ಅಧಿಕಾರಿ ಅದನ್ನು ಪರಿಶೀಲಿಸಲಿಲ್ಲ, ಬದಲಿಗೆ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದರಿಂದಾಗಿ ಆತನ ಸ್ವಾತಂತ್ರ್ಯಕ್ಕೆ ಹಾನಿ ಮತ್ತು ಘಾಸಿಯಾಗಿದೆಎಂದೂ ಕೋರ್ಟ್ಅಭಿಪ್ರಾಯ ಪಟ್ಟಿತು.

ಕಾರಣಕ್ಕಾಗಿ ಬಂಧಿತ ವ್ಯಕ್ತಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ಹೇಳಿದ ಪೀಠವು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು.

ತೀರ್ಪು ನೀಡಿದ ದಿನದಿಂದ ದಿನಗಳ ಅವಧಿಯಲ್ಲಿ ಪರಿಹಾರವನ್ನು ಪಾವತಿ ಮಾಡಬೇಕು. ಸರ್ಕಾರವು ಅರ್ಜಿದಾರನನ್ನು ಬಂಧಿಸಿದ ಅಧಿಕಾರಿಗಳಿಂದ ಹಣವನ್ನು ರಾಜ್ಯ ಸರ್ಕಾರವು ವಸೂಲಿ ಮಾಡಬಹುದು ಎಂದೂ ಪೀಠ ಹೇಳಿತು.

ಬಂಧನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ, ನಿಗದಿತ ಕಾರ್ಯ ವಿಧಾನವನ್ನು ನೀಡುವಂತೆ ಪೊಲೀಸ್ಮಹಾ ನಿರ್ದೇಶಕರಿಗೂ ಕೋರ್ಟ್ಸೂಚಿಸಿದೆ. ಇಂತಹ ಮಾರ್ಗಸೂಚಿ, ಕಾರ್ಯವಿಧಾನವನ್ನು ಈಗಾಗಲೇ ನೀಡಿದ್ದರೆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ತರಬೇತಿ ನೀಡುವಂತೆಯೂ ಪೀಠವು ನಿರ್ದೇಶನ ನೀಡಿತು.

No comments:

Advertisement