ಗ್ರಾಹಕರ ಸುಖ-ದುಃಖ

My Blog List

Friday, September 30, 2022

ಹೊಸ ಸಂಸತ್‌ ಕಟ್ಟಡ ಮೇಲಿನ ಸಿಂಹ: ಕಾಯ್ದೆಯ ಉಲ್ಲಂಘನೆ ಇಲ್ಲ

 ಹೊಸ ಸಂಸತ್‌  ಕಟ್ಟಡ ಮೇಲಿನ ಸಿಂಹ: ಕಾಯ್ದೆಯ ಉಲ್ಲಂಘನೆ ಇಲ್ಲ

ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್ತಿನ ಕಟ್ಟಡದ ಮೇಲೆ ಸ್ಥಾಪಿಸಲಾದ ಸಿಂಹದ ಪ್ರತಿಮೆಯು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯಿದೆಯನ್ನು (2005) ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2022 ಸೆಪ್ಟೆಂಬರ್‌ 30ರ ಶುಕ್ರವಾರ ತೀರ್ಪು ನೀಡಿತು.

ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು, 2005ರ ರಾಷ್ಟ್ರ ಲಾಂಛನ (ಅಸಮರ್ಪಕ ಬಳಕೆ ನಿಷೇಧ) ಕಾಯ್ದೆ, 2005 ರ ಅಡಿಯಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಲಾಂಛನದ ವಿನ್ಯಾಸಕ್ಕೆ ಹೊಸ ಶಿಲ್ಪವು ವಿರುದ್ಧವಾಗಿದೆ ಎಂದು ಆರೋಪಿಸಿ ಇಬ್ಬರು ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.

ಹೊಸ ಲಾಂಛನದಲ್ಲಿರುವ ಸಿಂಹಗಳು ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬರುತ್ತವೆ ಎಂಬ ಅರ್ಜಿದಾರರ ಅಹವಾಲಿಗೆ, ನ್ಯಾಯಮೂರ್ತಿ ಶಾ ಅವರು "ಆ ಅನಿಸಿಕೆ ವ್ಯಕ್ತಿಯ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಮೌಖಿಕವಾಗಿ ವಿಶ್ಲೇಷಿಸಿದರು.

ರಾಷ್ಟ್ರೀಯ ಲಾಂಛನದ ಅನುಮೋದಿತ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕಲಾತ್ಮಕ ನಾವೀನ್ಯತೆ ಇರುವಂತಿಲ್ಲ ಎಂದು ಅರ್ಜಿದಾರ ವಕೀಲ ಅಲ್ದನಿಶ್ ರೀನ್ ಪ್ರತಿಪಾದಿಸಿದ್ದರು. ಪ್ರತಿಮೆಯಲ್ಲಿ ಸತ್ಯಮೇವ ಜಯತೇ ಎಂಬ ಬರಹ ಕೂಡಾ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ, ಯಾವುದೇ ರೀತಿಯಲ್ಲೂ ಶಿಲ್ಪದಿಂದ ಕಾಯ್ದೆ ಉಲ್ಲಂಘನೆಯಾಗಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

"ಅರ್ಜಿದಾರರ ಅಹವಾಲನ್ನು ಖುದ್ದಾಗಿ ಆಲಿಸಿದ ನಂತರ ಮತ್ತು ಲಾಂಛನದ ಪರಿಶೀಲನೆಯ ನಂತರ, ಇದು ೨೦೦೫ರ ಕಾಯಿದೆಯ ಯಾವುದೇ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗುವುದಿಲ್ಲ ಮತ್ತು ರ ಕಾಯಿದೆಯನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ಕೇಂದ್ರ ವಿಸ್ಟಾ ಯೋಜನೆಯಡಿ ನವದೆಹಲಿಯಲ್ಲಿ ಸ್ಥಾಪಿಸಲಾದ ಭಾರತದ ರಾಷ್ಟ್ರ ಲಾಂಛನವನ್ನು ಕನಿಷ್ಠ 2005ರ ಕಾಯಿದೆಯನ್ನು ಉಲ್ಲಂಘಿಸಿ ಸ್ಥಾಪಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠವು ಆದೇಶದಲ್ಲಿ ತಿಳಿಸಿತು.

ವಕೀಲರಾದ ಅಲ್ದಾನೀಶ್ ರೀನ್ ಮತ್ತು ರಮೇಶ್ ಕುಮಾರ್ ಮಿಶ್ರಾ ಅವರು ಸಲ್ಲಿಸಿದ ಅರ್ಜಿಯ ಪ್ರಕಾರ, ಹೊಸ ಲಾಂಛನವು ಭಾರತದ ರಾಷ್ಟ್ರ ಲಾಂಛನದ (ಅನುಚಿತ ಬಳಕೆ ನಿಷೇಧ) ಕಾಯ್ದೆಯ (2005೫)ರ ವಿವರಣೆ ಮತ್ತು ವಿನ್ಯಾಸವನ್ನು ಉಲ್ಲಂಘಿಸುತ್ತದೆ ಎಂದು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

No comments:

Advertisement