My Blog List

Wednesday, May 24, 2023

ಸ್ವಾಮೀ ಕೇವಲ ʼಪ್ರಭುʼ ಆಗಲು ಬಯಸಬೇಡಿ, ʼಪ್ರಬುದ್ಧʼರಾಗಿ!

 ಸ್ವಾಮೀ ಕೇವಲ ʼಪ್ರಭುʼ ಆಗಲು ಬಯಸಬೇಡಿ, ʼಪ್ರಬುದ್ಧʼರಾಗಿ!


ಟೈಮ್ಸ್‌ ನೌ ಪ್ರಧಾನ ಸಂಪಾದಕ ರಾಹುಲ್‌ ಶಿವಶಂಕರ್‌ ಅವರು ಮಾಡಿರುವ ಟ್ವೀಟ್‌ ಇದು. ಪತ್ರಿಕೆಯೊಂದರ ಪ್ರಧಾನ ಸಂಪಾದಕರಾಗಿ ಅವರು ಮಾಡಿರುವ ಈ ಟ್ವೀಟ್‌ ಹಿಂದೆ ʼರಾಜಕೀಯʼ ಇದ್ದೀತು ಎಂಬ ಭಾವಿಸಲು ಸಾಧ್ಯವಿಲ್ಲ.

೧೯೭೫ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಪಾರ್ಲಿಮೆಂಟ್‌ ಅನೆಕ್ಸ್‌ (ಸಂಸದೀಯ ಸೌಧ) ಇದನ್ನು ಉದ್ಘಾಟಿಸಿದರು. ಆಗ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ರಾಷ್ಟ್ರಪತಿ ಆಗಿದ್ದರು.

೧೯೮೭ರಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಸಂಸತ್‌ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಎರಡೂ ಅಂಶಗಳನ್ನು ರಾಹುಲ್‌ ಶಿವಶಂಕರ್‌ ತಮ್ಮ ಟ್ವೀಟಿನಲ್ಲಿ ಬರೆದಿದ್ದಾರೆ.

೨೦೨೩ರ ಮೇ ೨೮ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್‌ ಮೊದಲ್ಗೊಂಡು ವಿವಿಧ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ರಾಷ್ಟ್ರಪತಿಯವರಿಂದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಬೇಕು, ಪ್ರಧಾನಿ ಮೋದಿಯಲ್ಲ ಎಂದು ಆಗ್ರಹಿಸುತ್ತಿದ್ದಾರೆ.

ಅದಕ್ಕೆ ಬಿಜೆಪಿ ಜಗ್ಗಲು ಸಿದ್ದವಿಲ್ಲ. ಇಂದಿರಾಗಾಂಧಿ ಮತ್ತು ರಾಜೀವ್‌ ಗಾಂಧಿ ಅವರು ಸಂಸತ್‌ ಕಟ್ಟಡಕ್ಕೆ ಸಂಬಂಧಿಸಿದಂತೆ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿರುವಾಗ ಮೋದಿಯವರು ಏಕೆ ಈ ಕಾರ್ಯ ಮಾಡಬಾರದು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ರಾಹುಲ್‌ ಶಿವಶಂಕರ್‌ ಅವರು ತಮ್ಮ ಬಳಿ ಆಧಾರ ಇಲ್ಲದೇ ಟ್ವೀಟ್‌ ಮಾಡಲು ಸಾಧ್ಯವಿಲ್ಲ. ಆದರೆ ಅವರು ಅದಕ್ಕೆ ಸಂಬಂಧಿಸಿದ ವಿಡಿಯೋವನ್ನಾಗಲೀ ಫೊಟೋವನ್ನಾಗಲೀ ಪ್ರಕಟಿಸಿಲ್ಲ.

ಇಂದಿರಾ ಗಾಂಧಿಯವರು ಉದ್ಘಾಟನೆ ಮಾಡಿದ ವಿಡಿಯೋ, ಫೊಟೋ ಇಲ್ಲದೇ ಇದ್ದರೂ ರಾಜೀವ ಗಾಂಧಿಯವರು ಶಿಲಾನ್ಯಾಸ ನೆರವೇರಿಸಿದ ಸಂದರ್ಭದ ವಿಡಿಯೋ ಇಲ್ಲಿದೆ.

ಆಗಲೂ ಈ ಕಾರ್ಯಗಳನ್ನು ರಾಷ್ಟ್ರಪತಿಯವರಿಂದಲೇ ಮಾಡಿಸಬಹುದಾಗಿತ್ತಲ್ಲ?

ಈಗ ಏಕೆ ಎಲ್ಲಿಲ್ಲದ ಹಾಹಾಕಾರ?

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊತ್ತಿನಲ್ಲಿ ಮಹಾನ್‌ ಸಂಭ್ರಮದ ದಿನಕ್ಕೆ ಸಾಕ್ಷಿಯಾಗಲು ಎಲ್ಲರೂ ಪಕ್ಷಬೇಧವಿಲ್ಲದೆ ಸಜ್ಜಾಗಬೇಕಾದ ಕ್ಷಣದಲ್ಲಿ ಇಂತಹ ಕ್ಷುಲ್ಲಕ ರಾಜಕೀಯ ಬೇಕಾಗಿತ್ತೇ?

ನಮ್ಮ ರಾಜಕಾರಣಿಗಳು ಪ್ರಭುಗಳಾಗಲು ಮಾತ್ರ ಬಯಸುತ್ತಾರೆ, ಪ್ರಬುದ್ಧರಾಗಲು ಅಲ್ಲ ಎಂಬುದನ್ನು ಇದು ಸೂಚಿಸುತ್ತದೆ ಅಷ್ಟೆ.

ಇದನ್ನೂ ಓದಿ: 

ಸಂಸತ್ತಿನ ಹೊಸ ಕಟ್ಟಡಕ್ಕೆ ಡಿ.೧೦ರಂದು ಪ್ರಧಾನಿ ಅಡಿಗಲ್ಲು

No comments:

Advertisement