ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೩ ಆಗಸ್ಟ್ ೧೫ರ ಮಂಗಳವಾರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೭೭ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸೇನಾ ಅಧಿಕಾರಿ ಥಾಮಸ್ ದೇವಸ್ಸಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಹಿರಿಯ ನ್ಯಾಯವಾದಿ ವಿ. ಮುನಿರಾಜು ಅವರು ಅತಿಥಿಯಾಗಿದ್ದರು.
ಸಮಾರಂಭದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಸ್‌ಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ಬಡಾವಣೆಯ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಗೌರವಕ್ಕೆ ಅರ್ಹರಾದ ರೋಷನ್ ಅವರು ೫೮೮ ಅಂಕಗಳೊಂದಿಗೆ ಉನ್ನತ ಸಾಧನೆ ಮಾಡಿದ್ದರೆ, ಪಿಯುಸಿಯಲ್ಲಿ ೫೪೬ ಅಂಕಗಳನ್ನು ಪಡೆದ ರಕ್ಷಿತಾ ಆರ್. ಚಿತ್ರಗಾರ ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಬಡಾವಣೆಗೆ ಕೀರ್ತಿಯನ್ನು ತಂದಿದ್ದಾರೆ.
ಸಮಾರಂಭದ ಕೆಲವು ನೋಟಗಳ ವಿಡಿಯೋಗಳು ಇಲ್ಲಿವೆ:
ಮುಖ್ಯ ಅತಿಥಿ ಥಾಮಸ್ ದೇವಸ್ಸಿ ಅವರ ಭಾಷಣ:
ಸಂಘದ ಅಧ್ಯಕ್ಷ ರಾಜೇಶ ಕೆ. ಹೆಗಡೆ ಅವರಿಂದ ಅಧ್ಯಕ್ಷೀಯ ಭಾಷಣ:
ಸಮಾರಂಭದ ಸಂದರ್ಭದಲ್ಲಿ ಬಡಾವಣೆಯ ಹಿರಿಯ ಸದಸ್ಯ, ನ್ಯಾಯವಾದಿ ವಿ. ಮುನಿರಾಜು ಅವರು ಲಘು ಉಪಾಹಾರದ ವ್ಯವಸ್ಥೆ ಮಾಡಿದ್ದರು:
ಹೆಚ್ಚಿನ ಅಂಕಗಳೊಂದಿಗೆ ಗೌರವಕ್ಕೆ ಪಾತ್ರರಾದ ರೋಷನ್ ಮತ್ತು ರಕ್ಷಿತಾ ಆರ್ ಚಿತ್ರಗಾರ:
No comments:
Post a Comment