My Blog List

Sunday, November 12, 2023

ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

 ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು 5

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಮತ್ತು ಪಂಚಾಯಿತಿ ಪ್ರತಿನಿಧಿಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಗ್ರಾಮಗಳ ಅಭಿವೃದ್ಧಿಗೆ ಅತ್ಯಂತ ಅಗತ್ಯ. ಅದಕ್ಕಾಗಿ ಸರ್ಕಾರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತದೆ. ಆದರೆ ತರಬೇತಿ ಮುಗಿಸಿ ಬರುವಷ್ಟರಲ್ಲಿ ಬಹುಮಂದಿಗೆ ಅಲ್ಲಿ ಹೇಳಿ ಕೊಟ್ಟದ್ದು ಮರೆತೇ ಹೋಗಿರುತ್ತದೆ.

ಹಾಗಿದ್ದರೆ ಅದನ್ನು ಸದಾಕಾಲ ನೆನಪು ಮಾಡಿಕೊಳ್ಳುವ ವ್ಯವಸ್ಥೆ ಯಾವುದಾದರೂ ಇದೆಯೇ? ಹೌದು ಇದೆ ಎನ್ನುತ್ತಾರೆ ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಡಾ. ಶಂಕರ ಕೆ. ಪ್ರಸಾದ್.‌

ಶಿವಮೊಗ್ಗೆ ಬಾನುಲಿಯಲ್ಲಿ ಪ್ರತಿ ಭಾನುವಾರ 8 ಗಂಟೆಗೆ ಮೂಡಿ ಬರುತ್ತಿರುವ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ವಿಶಿಷ್ಟ ಕಾರ್ಯಕ್ರಮದ ಐದನೇ ಕಂತಿನಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಪಂಚಾಯಿತಿ ಸದಸ್ಯರು ಸಾಮರ್ಥ್ಯ ವೃದ್ಧಿಸಿಕೊಳ್ಳಲು ಡಿಜಿಟಲ್‌ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಮಾತನಾಡಿದ್ದಾರೆ.

ʼ21ನೇ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕವನ್ನು ಆಧರಿಸಿ ಬರುತ್ತಿರುವ ಈ ಕಾರ್ಯಕ್ರಮದ ಐದನೇ ಕಂತು 2023 ನವೆಂಬರ್‌ 12ರ ಭಾನುವಾರ ಪ್ರಸಾರವಾಯಿತು.

ಇಂದಿನ ಬಾನುಲಿಯಲ್ಲಿ ಬಂದ ವಿಚಾರಗಳೇನು?

ಆಲಿಸಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:  


ಇವುಗಳನ್ನೂ ಓದಿರಿ:

No comments:

Advertisement