Friday, January 19, 2024

ರಾಮಲಲ್ಲಾ: ಇನ್ನೊಂದು ಭವ್ಯನೋಟ..!

 ರಾಮಲಲ್ಲಾ: ಇನ್ನೊಂದು ಭವ್ಯನೋಟ..!

ನವದೆಹಲಿ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗಿರುವ ನೂತನ ರಾಮ ಲಲ್ಲಾ ವಿಗ್ರಹದ ಇನ್ನೊಂದು ಚಿತ್ರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 2024 ಜನವರಿ 19 ರಂದು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ವಿಗ್ರಹದ ಕಣ್ಣಿಗೆ ಮಾತ್ರ ಪಟ್ಟಿಯನ್ನು ಕಟ್ಟಲಾಗಿದ್ದು, ವಿಗ್ರಹದ ಉಳಿದೆಲ್ಲ ಭಾಗವೂ ಅನಾವರಣಗೊಂಡಿದೆ.

ʼಪ್ರಭು ರಾಮ ಲಲ್ಲಾನ ಮೊದಲ ನೋಟ. ಜೈ ಶ್ರೀರಾಮ್‌ʼ ಎಂಬುದಾಗಿ ಕರಂದ್ಲಾಜೆ ಬರೆದಿದ್ದಾರೆ.

2024 ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಅರುಣ್‌ ಯೋಗಿರಾಜ್‌ ಅವರು ಕಪ್ಪು ಶಿಲೆಯಲ್ಲಿ ಕೆತ್ತಿರುವ ಈ ಬಾಲರಾಮನ ವಿಗ್ರಹ 51 ಅಂಗುಲ ಎತ್ತರವಿದೆ.

ಇವುಗಳನ್ನೂ ಓದಿ:

ಅಯೋಧ್ಯೆಯ ಬಾಲರಾಮ: ಮೊದಲ ದೃಶ್ಯ ಕಣ್ತುಂಬಿಕೊಳ್ಳಿ.

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಇಂದಿನ ಇತಿಹಾಸ History Today ಜನವರಿ 19

ಇಂದಿನ ಇತಿಹಾಸ History Today ಜನವರಿ 18

No comments:

Advertisement