Showing posts with label Kumkuma. Show all posts
Showing posts with label Kumkuma. Show all posts

Monday, October 12, 2026

ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ

 ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ  ಎರಡನೇ ದಿನವಾದ ಸೋಮವಾರ (೧೨ ಅಕ್ಟೋಬರ್‌ ೨೦೨೬) ಬಾಲಾಜಿ ಮಹಾಗಣಪತಿಗೆ ಕುಂಕುಮ ಅಲಂಕಾರ ಮಾಡಲಾಯಿತು.

ಕುಂಕುಮ ಅಲಂಕಾರದಲ್ಲಿ ಗಣಪತಿಗೆ ಯಕ್ಷಗಾನದ ಕಿರೀಟ ಮಾದರಿಯ ಅಲಂಕಾರ ವಿಶೇಷವಾಗಿತ್ತು

ಶ್ರೀ ರಾಜೇಶ ಹೆಗಡೆ, ಶ್ರೀಮತಿ ರಶ್ಮಿ ಮತ್ತು ಕುಟುಂಬದವರು ಅಲಂಕಾರ ಸೇವೆಯನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.






ಇದನ್ನೂ ಓದಿ

ಶರನ್ನವರಾತ್ರಿ ೨೦೨೬: ಉತ್ಸವದ ಮೊದಲ ದಿನ

Advertisement