ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?
ಪ್ರಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್ ೧೪) ಯಮುನಾ ನಗರದಲ್ಲಿ ರಾಮ್ ಪಾಲ್
ಕಶ್ಯಪ್ ಎಂಬವರಿಗೆ ತಮ್ಮ ಕೈಯಾರೆ ಬೂಟುಗಳನ್ನು ನೀಡಿ ಅವುಗಳನ್ನು ಧರಿಸುವಂತೆ ವಿನಂತಿಸಿದರು.
ಏಕೆ ಗೊತ್ತೇ?
ಈ ವ್ಯಕ್ತಿ ೧೪ ವರ್ಷಗಳ ಹಿಂದೆ ಪ್ರತಿಜ್ಞೆಯೊಂದನ್ನು ಮಾಡಿ ಪಾದರಕ್ಷೆ ಧರಿಸುವುದನ್ನು ಬಿಟ್ಟು
ಬಿಟ್ಟಿದ್ದರು. ಪಾದರಕ್ಷೆ ಧಾರಣೆಯನ್ನು ಬಿಟ್ಟ ಈ ಸಂದರ್ಭದಲ್ಲಿ ಅವರು ಮಾಡಿದ್ದ ಪ್ರತಿಜ್ಞೆ ಏನೆಂದರೆ
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತನಗೆ ಅವರ ಭೇಟಿಯ ಅವಕಾಶ ಲಭಿಸಿದ ಬಳಿಕ ಮಾತ್ರವೇ ಪಾದರಕ್ಷೆ
ಧರಿಸುವೆ ಅಂತ.
ಈ ವಿಷಯ ನರೇಂದ್ರ ಮೋದಿ ಅವರಿಗೆ ಈದಿನ ಗೊತ್ತಾಯಿತು. ಯಮುನಾ ನಗರದಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಕರೆಸಿಕೊಂಡು ತಮ್ಮ ಕೈಗಳಿಂದಲೇ ಅವರಿಗೆ ಪಾದರಕ್ಷೆಗಳನ್ನು ನೀಡಿದ ಮೋದಿ ಹೀಗೆ ಮಾಡಿದ್ದು ಏಕೆ ಎಂದು ಗದರಿದರು. ಮುಂದೆಂದೂ ಹೀಗೆಲ್ಲ ಮಾಡಬಾರದು. ಸಾಮಾಜಿಕ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಈ ವಿಡಿಯೋವನ್ನು ಎಕ್ಸ್ ನಲ್ಲಿ (ಹಿಂದಿನ ಟ್ವಿಟ್ಟರ್) ಹಂಚಿಕೊಂಡ ಪ್ರಧಾನಿಯವರು ʼಅಭಿಮಾನಿಗಳ ಇಂತಹ ಪ್ರೀತಿಯನ್ನು
ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಳನ್ನೆಲ್ಲ ಮಾಡುವ ಬದಲಿಗೆ ಸಾಮಾಜಿಕ ಕೆಲಸ ಮಾಡಿ ಮತ್ತು
ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸ ಮಾಡಿʼ ಎಂದು ಮನವಿ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
No comments:
Post a Comment