ವೈಕುಂಠ ಏಕಾದಶಿ ಸಡಗರ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್ ೩೦ರ ಮಂಗಳವಾರ ವೈಕುಂಠ ಏಕಾದಶಿಯನ್ನು ಸಡಗರದೊಂದಿಗೆ ಆಚರಿಸಲಾಯಿತು.
ನಸುಕಿನ
ಬ್ರಾಹ್ಮೀ ಮುಹೂರ್ತದಲ್ಲಿಯೇ ಅಭಿಷೇಕದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಅಲಂಕಾರ, ಮಹಾಮಂಗಳಾರತಿ
ನಡೆಯಿತು.
ಭಾರೀ ಸಂಖ್ಯೆಯಲ್ಲಿ ಭಕ್ತರು ಮುಂಜಾನೆಯಲ್ಲೇ ಆಗಮಿಸಿ ದೇವರ ದರ್ಶನ, ವೈಕುಂಠ ದ್ವಾರದ ದರ್ಶನ ಪಡೆದು ಪುನೀತರಾದರು.
ಮಾಜಿ
ಸಚಿವರಾದ ಶ್ರೀ ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಅವರಿಂದ ಲಡ್ಡು ಪ್ರಸಾದ ಸೇವೆ, ಶ್ರೀ ಮುನಿರಾಜು
ಮತ್ತು ಕುಟುಂಬದವರಿಗೆ ಅಲಂಕಾರ ಸೇವೆ, ಶ್ರೀ ನಾಗರಾಜ್ ಕೆ.ಎಂ. ಮತ್ತು ಕುಟುಂಬ, ಶ್ರೀ ಚೌಡರೆಡ್ಡಿ
ಮತ್ತು ಕುಟುಂಬದವರಿಂದ ಪ್ರಸಾದ ಸೇವೆ ವ್ಯವಸ್ಥೆಯಿತ್ತು. ವಿದ್ಯಾ ರಘು ಪ್ರಸಾದ್ ಮತ್ತು ತಂಡ ಹಾಗೂ
ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದ ಕೆಲವು ವಿಡಿಯೋ ಹಾಗೂ ಚಿತ್ರಗಳು ಇಲ್ಲಿವೆ. ಅಭಿಷೇಕದ ದೃಶ್ಯ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ ಅಥವಾ - Video link https://youtu.be/31F2f6wRhmI ಇದನ್ನು ಕ್ಲಿಕ್ ಮಾಡಿರಿ.
ಮಹಾಮಂಗಳಾರತಿ ದೃಶ್ಯ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ ಅಥವಾ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:






No comments:
Post a Comment